ಗುರುವಾರ ಅಮೃತಸರ ವಿಮಾನ ನಿಲ್ದಾಣದಲ್ಲಿ ಅಮೃತ್‌ಪಾಲ್ ಸಿಂಗ್ ಅವರ ಪತ್ನಿ ಕಿರಣ್‌ದೀಪ್ ಕೌರ್
ಗುರುವಾರ ಅಮೃತಸರ ವಿಮಾನ ನಿಲ್ದಾಣದಲ್ಲಿ ಅಮೃತ್‌ಪಾಲ್ ಸಿಂಗ್ ಅವರ ಪತ್ನಿ ಕಿರಣ್‌ದೀಪ್ ಕೌರ್

ಇಂಗ್ಲೆಂಡ್‌ಗೆ ತೆರಳಲು ಅಮೃತ್‌ಪಾಲ್ ಸಿಂಗ್ ಪತ್ನಿ ಮುಂದು, ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂಧನ

ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್ ಅವರ ಪತ್ನಿ ಕಿರಣ್‌ದೀಪ್ ಕೌರ್ ಅವರು ಲಂಡನ್‌ಗೆ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ವಲಸೆ ಅಧಿಕಾರಿಗಳು ಇಲ್ಲಿನ ಶ್ರೀ ಗುರು ರಾಮ್ ದಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
Published on

ಅಮೃತಸರ: ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್ ಅವರ ಪತ್ನಿ ಕಿರಣ್‌ದೀಪ್ ಕೌರ್ ಅವರು ಲಂಡನ್‌ಗೆ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ವಲಸೆ ಅಧಿಕಾರಿಗಳು ಇಲ್ಲಿನ ಶ್ರೀ ಗುರು ರಾಮ್ ದಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಆಕೆಯನ್ನು ವಲಸೆ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಂಗ್ ಈ ವರ್ಷದ ಫೆಬ್ರುವರಿಯಲ್ಲಿ ಯುಕೆ ಮೂಲದ ಎನ್‌ಆರ್‌ಐ ಕೌರ್ ಅವರನ್ನು ವಿವಾಹವಾಗಿದ್ದರು.

ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಪಂಜಾಬ್ ಪೊಲೀಸ್ ಅಧಿಕಾರಿಗಳು ನಿರಾಕರಿಸಿದರು.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ, ಅಮೃತಪಾಲ್ ಸಿಂಗ್ ಅವರ ಪತ್ನಿ ಮತ್ತು ಯುಕೆ ಪ್ರಜೆಯಾದ ಕಿರಣ್‌ದೀಪ್ ಕೌರ್ ಅವರು ಏರ್ ಇಂಡಿಯಾ ಫ್ಲೈಟ್ ನಂ. 117 ರಲ್ಲಿ ಬರ್ಮಿಂಗ್‌ಹ್ಯಾಮ್‌ಗೆ 14.30 ಗಂಟೆಗೆ ನಿಗದಿತ ಪ್ರಯಾಣ ಮಾಡಬೇಕಿತ್ತು. 12.20 ಗಂಟೆಗೆ ಅವರು ವಲಸೆ ಕೌಂಟರ್‌ ಬಳಿ ವರದಿ ಮಾಡಿದರು. ಆದರೆ, ಅವರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದರಿಂದ, ವಲಸೆ ಅಧಿಕಾರಿಗಳು ಆಕೆಗೆ ಪ್ರಯಾಣಿಸಲು ಅನುಮತಿ ನೀಡಲಿಲ್ಲ ಮತ್ತು ಆಕೆಯನ್ನು ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.

ವರ್ಗಗಳ ನಡುವೆ ವೈಮನಸ್ಸು ಹರಡುವುದು, ಕೊಲೆ ಯತ್ನ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಸಾರ್ವಜನಿಕ ಸೇವಕರ ಕಾನೂನುಬದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವಿಕೆಗೆ ಸಂಬಂಧಿಸಿದ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಅಮೃತಪಾಲ್ ಮತ್ತು ಆತನ ಸಹಚರರ ವಿರುದ್ಧ ದಾಖಲಿಸಲಾಗಿದೆ.

ಫೆಬ್ರುವರಿ 10 ರಂದು ಸಿಂಗ್ ಅವರು ಅಮೃತಸರದ ಅವರ ಸ್ಥಳೀಯ ಗ್ರಾಮವಾದ ಜಲ್ಲುಪುರ್ ಖೇರಾದಲ್ಲಿ ಸರಳ ಸಮಾರಂಭದಲ್ಲಿ ಕೌರ್ ಅವರನ್ನು ವಿವಾಹವಾದರು.

'ಆನಂದ್ ಕರಾಜ್' (ಸಿಖ್ ಧಾರ್ಮಿಕ ವಿಧಿಗಳ ಪ್ರಕಾರ ಮದುವೆ) ಅಮೃತಸರದ ಬಾಬಾ ಬಕಲದಲ್ಲಿರುವ ಗುರುದ್ವಾರದಲ್ಲಿ ಎರಡೂ ಕಡೆಯ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹ ನೆರವೇರಿತು.

ಈವೇಳೆ ಸಿಂಗ್, ಮದುವೆ ಸಮಾರಂಭವು ಸರಳವಾಗಿರಬೇಕು ಮತ್ತು ಅದ್ಧೂರಿ ಮದುವೆಗಳಲ್ಲಿ ಹಣವನ್ನು ಖರ್ಚು ಮಾಡುವ ಮೂಲಕ 'ಶೋ-ಆಫ್' ಮಾಡದಂತೆ ಜನರನ್ನು ಒತ್ತಾಯಿಸಿದರು. ತನ್ನ ಮದುವೆಯು ಹಿಮ್ಮುಖ ವಲಸೆಯ ಉದಾಹರಣೆಯಾಗಿದೆ ಮತ್ತು ನಾನು ಮತ್ತು ನನ್ನ ಹೆಂಡತಿ ಪಂಜಾಬ್‌ನಲ್ಲಿ ವಾಸಿಸುವುದಾಗಿ ಘೋಷಿಸಿದರು.

ಅಮೃತಪಾಲ್‌ ಸಿಂಗ್ ಕಳೆದ ಒಂದು ತಿಂಗಳಿಂದಲೂ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com