ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ

ಅಪಹರಣ, ಕೊಲೆ ಪ್ರಕರಣದಲ್ಲಿ ಘಾಜಿಪುರದ ಎಂಪಿ ಎಂಎಲ್‌ಎ ನ್ಯಾಯಾಲಯವು ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ, 5 ಲಕ್ಷ ರೂ ದಂಡವನ್ನು ಹಾಕಿದೆ.
ಮುಖ್ತಾರ್ ಅನ್ಸಾರಿ
ಮುಖ್ತಾರ್ ಅನ್ಸಾರಿ

ಘಾಜಿಪುರ (ಉತ್ತರಪ್ರದೇಶ): ಅಪಹರಣ, ಕೊಲೆ ಪ್ರಕರಣದಲ್ಲಿ ಘಾಜಿಪುರದ ಎಂಪಿ ಎಂಎಲ್‌ಎ ನ್ಯಾಯಾಲಯವು ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ, 5 ಲಕ್ಷ ರೂ ದಂಡವನ್ನು ಹಾಕಿದೆ.

ಇದೇ ವೇಳೆ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ತಾರ್ ಅನ್ಸಾರಿ ಹಿರಿಯ ಸಹೋದರ, ಬಿಎಸ್​​ಪಿ ಸಂಸದ ಅಫ್ಜಲ್ ಅನ್ಸಾರಿಯವರ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ.

ಬಿಜೆಪಿ ಶಾಸಕರಾಗಿದ್ದ ಕೃಷ್ಣಾನಂದ ರೈ ಅಪಹರಣ ಮತ್ತು ಹತ್ಯೆ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿಗೆ ಶಿಕ್ಷೆಯಾಗಿದೆ.

ಕೃಷ್ಣಾನಂದ ರೈ ಅವರು 2002ರಿಂದ 2005ರವರೆಗೆ ಉತ್ತರ ಪ್ರದೇಶದ ಮವೂ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. 2005ರಲ್ಲಿ ಇವರ ಅಪಹರಣವಾಗಿ, ಹತ್ಯೆಯಾಗಿತ್ತು.

ಗಾಝಿಯಾಬಾದ್​ನಲ್ಲಿರುವ ತಮ್ಮ ಹುಟ್ಟೂರಾದ ಗೊಂಡೌರ್​ ಹಳ್ಳಿಗೆ ತೆರಳುತ್ತಿದ್ದಾಗ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಿ, ಹತ್ಯೆಗೈದಿದ್ದರು. ಕೃಷ್ಣಾನಂದ್​ ರೈ ಜತೆ ಅವರ 6 ಸಹಾಯಕರ ಹತ್ಯೆಯಾಗಿತ್ತು. ಮುಖ್ತಾರ್ ಅನ್ಸಾರಿಯೇ ಈ ಕೃತ್ಯ ಮಾಡಿಸಿದ್ದ ಎಂಬ ಆರೋಪದಡಿ, ಆತನನ್ನು ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧ ಅನ್ಸಾರಿಗೆ 10 ವರ್ಷ ಜೈಲು ಶಿಕ್ಷೆಯಾಗಿದೆ.

ಮುಖ್ತಾರ್ ಅನ್ಸಾರಿ ವಿರುದ್ಧ ಹಲವು ಕ್ರಿಮಿನಲ್ ಕೇಸ್​ಗಳಿದ್ದು, ಜೈಲರ್‌ ಒಬ್ಬರಿಗೆ ಪಿಸ್ತೂಲು ತೋರಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇತ್ತೀಚೆಗೆ ಅಲಹಾಬಾದ್‌ ಹೈಕೋರ್ಟ್‌ ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com