'ಇಂದು ಭಾರತ ಒಂದೇ ಧ್ವನಿಯಲ್ಲಿ ಭ್ರಷ್ಟಾಚಾರ, ರಾಜವಂಶ, ತುಷ್ಠೀಕರಣ ಭಾರತ ಬಿಟ್ಟು ತೊಲಗಲಿ ಎಂದು ಹೇಳುತ್ತಿದೆ': ಪ್ರಧಾನಿ ಮೋದಿ

ಇಂದು ಆಗಸ್ಟ್ 8, ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ಕ್ವಿಟ್ ಇಂಡಿಯಾ ಚಳವಳಿಗೆ ಕರೆಕೊಟ್ಟ ದಿನ. ಕ್ವಿಟ್ ಇಂಡಿಯಾ ಚಳವಳಿಯನ್ನು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಭಾರತ ಈಗ ಭ್ರಷ್ಟಾಚಾರ, ರಾಜವಂಶ ಮತ್ತು ತುಷ್ಟೀಕರಣದ ವಿರುದ್ಧ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದೆ ಎಂದು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
Updated on

ನವದೆಹಲಿ: ಇಂದು ಆಗಸ್ಟ್ 8, ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ಕ್ವಿಟ್ ಇಂಡಿಯಾ ಚಳವಳಿಗೆ ಕರೆಕೊಟ್ಟ ದಿನ. ಕ್ವಿಟ್ ಇಂಡಿಯಾ ಚಳವಳಿಯನ್ನು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ಭಾರತ ಈಗ ಭ್ರಷ್ಟಾಚಾರ, ರಾಜವಂಶ ಮತ್ತು ತುಷ್ಟೀಕರಣದ ವಿರುದ್ಧ ಒಂದೇ ಧ್ವನಿಯಲ್ಲಿ ಮಾತನಾಡುತ್ತಿದೆ ಎಂದು ಹೇಳಿದ್ದಾರೆ. 

ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಇಂದು ದೇಶದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವಂತೆಯೇ ವಿರೋಧ ಪಕ್ಷವನ್ನು ಟೀಕಿಸಿದ್ದಾರೆ. 

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಮಹನೀಯರಿಗೆ ನಮನಗಳು. ಗಾಂಧೀಜಿಯವರ ನೇತೃತ್ವದಲ್ಲಿ ಭಾರತವನ್ನು ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತಗೊಳಿಸುವಲ್ಲಿ ಈ ಚಳವಳಿ ಪ್ರಮುಖ ಪಾತ್ರ ವಹಿಸಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

"ಇಂದು, ಭಾರತವು ಒಂದೇ ಧ್ವನಿಯಲ್ಲಿ ಹೇಳುತ್ತಿದೆ: ಭ್ರಷ್ಟಾಚಾರ ಕ್ವಿಟ್ ಇಂಡಿಯಾ, ರಾಜವಂಶ ಭಾರತ ಬಿಟ್ಟು ತೊಲಗಲಿ, ತುಷ್ಠೀಕರಣ ಕ್ವಿಟ್ ಇಂಡಿಯಾ" ಎಂದು. (Quit India movement)

ವಿರೋಧ ಪಕ್ಷಗಳು ಭ್ರಷ್ಟಾಚಾರ, ರಾಜವಂಶ ಮತ್ತು ತುಷ್ಟೀಕರಣದ ರಾಜಕೀಯವನ್ನು ಅನುಸರಿಸುತ್ತಿವೆ ಜನರು ಅವುಗಳನ್ನು ದೂರವಿಡಬೇಕೆಂದು ಪ್ರಧಾನಿ ಮೋದಿಯವರು ಪದೇ ಪದೇ ಹೇಳುತ್ತಿರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com