ರೋಗಿಗೆ ಯೂರಿನ್‌ ಬ್ಯಾಗ್‌ ಬದಲು ಸ್ಪ್ರೈಟ್ ಬಾಟಲ್
ರೋಗಿಗೆ ಯೂರಿನ್‌ ಬ್ಯಾಗ್‌ ಬದಲು ಸ್ಪ್ರೈಟ್ ಬಾಟಲ್

ಬಿಹಾರ: ರೋಗಿಗೆ ಯೂರಿನ್‌ ಬ್ಯಾಗ್‌ ಬದಲು ಸ್ಪ್ರೈಟ್ ಬಾಟಲ್ ಬಳಸಿದ ಆಸ್ಪತ್ರೆ!

ಬಿಹಾರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವೈದ್ಯಕೀಯ ಉಪಕರಣಗಳ ಕೊರತೆಯಿಂದಾಗಿ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಮೂತ್ರದ ಚೀಲ(ಯೂರಿನ್‌ ಬ್ಯಾಗ್‌)ದ ಬದಲಿಗೆ ಸ್ಪ್ರೈಟ್ ಬಾಟಲಿ ಅಳವಡಿಸಿದ ಆಘಾತಕಾರಿ ಘಟನೆ ನಡೆದಿದ್ದು,..

ಜಮೈ: ಬಿಹಾರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವೈದ್ಯಕೀಯ ಉಪಕರಣಗಳ ಕೊರತೆಯಿಂದಾಗಿ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಮೂತ್ರದ ಚೀಲ(ಯೂರಿನ್‌ ಬ್ಯಾಗ್‌)ದ ಬದಲಿಗೆ ಸ್ಪ್ರೈಟ್ ಬಾಟಲಿ ಅಳವಡಿಸಿದ ಆಘಾತಕಾರಿ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಜಮೈ ಸದರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಝಾಝಾ ರೈಲ್ವೆ ಪೊಲೀಸರು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರೋಗಿಯ ತಪಾಸಣೆ ನಡೆಸಿದ ವೈದ್ಯರು, ರೋಗಿಗೆ ಯೂರಿನ್‌ ಬ್ಯಾಗ್‌ ಅಳವಡಿಸುವಂತೆ ನರ್ಸ್ ಗೆ ಸೂಚಿಸಿದ್ದರು. ಆದರೆ ನರ್ಸ್, ಯೂರಿನ್ ಬ್ಯಾಗ್ ಲಭ್ಯವಾಗದ ಹಿನ್ನೆಲೆಯಲ್ಲಿ ತಂಪು ಪಾನೀಯ ಬಾಟಲಿ ಅಳವಡಿಸಿದ್ದಾರೆ.

ಈ ವಿಚಾರ ನನ್ನ ಗಮನಕ್ಕೆ ತಂದ ಕೂಡಲೇ ಬಾಟಲಿಯನ್ನು ತೆಗೆದು ಯೂರಿನ್‌ ಬ್ಯಾಗ್‌ ಬಳಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ರಮೇಶ್ ಕುಮಾರ್ ಪಾಂಡೆ ಅವರು ಹೇಳಿದ್ದಾರೆ. ಅಲ್ಲದೆ ಘಟನೆಗೆ ಕಾರಣರಾದ ಆರೋಗ್ಯ ಕಾರ್ಯಕರ್ತರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com