ದೇಶದ ಅರ್ಧದಷ್ಟು ನರ್ಸ್‌ಗಳು ದಕ್ಷಿಣದ ಐದು ರಾಜ್ಯಗಳಲ್ಲಿ ತರಬೇತಿ ಪಡೆದಿದ್ದಾರೆ: ಕೇಂದ್ರ ಸರ್ಕಾರ

ಭಾರತದ ಸುಮಾರು ಅರ್ಧದಷ್ಟು ದಾದಿಯರು ಐದು ದಕ್ಷಿಣದ ರಾಜ್ಯಗಳಲ್ಲಿ ತರಬೇತಿ ಪಡೆದಿದ್ದಾರೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ದೇಶದ ಸುಮಾರು ಅರ್ಧದಷ್ಟು ದಾದಿಯರು ಐದು ದಕ್ಷಿಣದ ರಾಜ್ಯಗಳಲ್ಲಿ ತರಬೇತಿ ಪಡೆದಿದ್ದಾರೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ.

ದಕ್ಷಿಣದ ರಾಜ್ಯಗಳ ನಂತರ, ಶೇ 17 ರಷ್ಟು ನರ್ಸಿಂಗ್ ಕಾಲೇಜುಗಳು ಮಹಾರಾಷ್ಟ್ರದಲ್ಲಿವೆ. ಇಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಅಂದರೆ 713 ನರ್ಸಿಂಗ್ ಕಾಲೇಜುಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ರಾಜಸ್ಥಾನ (270) ಮತ್ತು ಗುಜರಾತ್ (220) ರಾಜ್ಯಗಳಿವೆ. ಭಾರತದಲ್ಲಿನ 5,203 ನರ್ಸಿಂಗ್ ಕಾಲೇಜುಗಳ ಪೈಕಿ 715 ಸರ್ಕಾರಿ ಸ್ವಾಮ್ಯದಲ್ಲಿವೆ. ಈ ಪೈಕಿ ಶೇ 40ರಷ್ಟು ಕಾಲೇಜುಗಳು ದಕ್ಷಿಣದ ರಾಜ್ಯಗಳಲ್ಲಿವೆ.

ಸದ್ಯ ಭಾರತದಲ್ಲಿ 35.14 ಲಕ್ಷ ನೋಂದಾಯಿತ ದಾದಿಯರು ಇದ್ದಾರೆ. ಪ್ರತಿ 1,000 ಜನರಿಗೆ 2.06 ನರ್ಸ್‌ಗಳು ಇದ್ದು, 1,000 ಜನರಿಗೆ ಮೂರು ದಾದಿಯರನ್ನು ಶಿಫಾರಸು ಮಾಡುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಾನದಂಡಗಳಿಗಿಂತ ಕಡಿಮೆ ಇದ್ದಾರೆ.

ದೇಶದಲ್ಲಿ ಮತ್ತು ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕವು ಎರಡನೇ ಅತಿ ಹೆಚ್ಚು ನರ್ಸಿಂಗ್ ಕಾಲೇಜುಗಳನ್ನು ಹೊಂದಿರುವ ರಾಜ್ಯವಾಗಿದೆ. ಸಂಸತ್ತಿನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, ಇಲ್ಲಿ 668 ನರ್ಸಿಂಗ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ತಮಿಳುನಾಡು (345), ಆಂಧ್ರಪ್ರದೇಶ (278), ಕೇರಳ (268), ಮತ್ತು ತೆಲಂಗಾಣದಲ್ಲಿ 157 ಕಾಲೇಜುಗಳು ಇವೆ.

ಮುಂದಿನ ದಿನಗಳಲ್ಲಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಎರಡೂ ನರ್ಸಿಂಗ್ ಕಾಲೇಜುಗಳು ಸ್ಥಾಪನೆಗೊಳ್ಳಲಿವೆ. ಮಧ್ಯಪ್ರದೇಶವು 431 ನರ್ಸಿಂಗ್ ಕಾಲೇಜುಗಳನ್ನು ಹೊಂದಿದ್ದರೆ, ದೇಶದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದ ಉತ್ತರ ಪ್ರದೇಶದಲ್ಲಿ 365 ನರ್ಸಿಂಗ್ ಕಾಲೇಜುಗಳು ಇವೆ. ಈ ಎರಡು ರಾಜ್ಯಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ನರ್ಸಿಂಗ್ ಕಾಲೇಜುಗಳು ಸ್ಥಾಪನೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವೇ ನರ್ಸಿಂಗ್ ಕಾಲೇಜುಗಳು ಇವೆ. ವಿವಿಧ ಭೌಗೋಳಿಕ ಮತ್ತು ಸಾಮಾಜಿಕ-ಆರ್ಥಿಕ ಅಂಶಗಳಿಂದಾಗಿ ಉಂಟಾಗಿರುವ ಪ್ರಾದೇಶಿಕ ಅಸಮತೋಲನವೇ ಈ ಅಸಮಾನತೆಯ ಹಿಂದಿರುವ ಮುಖ್ಯ ಕಾರಣ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, 2014ರಿಂದ ನರ್ಸಿಂಗ್ ಕಾಲೇಜುಗಳ ಸಂಖ್ಯೆ ಅಸಾಧಾರಣವಾಗಿ ಏರಿದೆ ಎಂದು ಸಂಸತ್ತಿನಲ್ಲಿ ತಿಳಿಸಿದರು.

'ನರ್ಸಿಂಗ್ ಕಾಲೇಜುಗಳ ಸಂಖ್ಯೆಯು 2014ರಲ್ಲಿ 1641 ರಿಂದ 2023ಕ್ಕೆ 2229ಕ್ಕೆ (ಮಾರ್ಚ್ 23 ರವರೆಗೆ) ಶೇ 36ರಷ್ಟು ಏರಿಕೆಯಾಗಿವೆ. ಅದೇ ರೀತಿ ಪದವಿ ಸೀಟುಗಳು ಕೂಡ ಅದೇ ಅವಧಿಯಲ್ಲಿ 83,192 ರಿಂದ 1,16,595ಕ್ಕೆ ಏರಿಕೆಯಾಗಿದ್ದು, ಶೇ 40 ರಷ್ಟು ಹೆಚ್ಚಳ ಕಂಡಿವೆ.

ಭಾರತದಲ್ಲಿ ನರ್ಸಿಂಗ್ ಕಾಲೇಜುಗಳ ಕೊರತೆ ಮತ್ತು ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸಚಿವಾಲಯವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 24 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಸರ್ಕಾರಿ ವಲಯದಲ್ಲಿ ಸರಿಸುಮಾರು 15,000 ನರ್ಸಿಂಗ್ ಸೀಟುಗಳನ್ನು ಸೇರಿಸುತ್ತದೆ. ಈ ಹೊಸ ಕಾಲೇಜುಗಳು ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com