
ಹೈದರಾಬಾದ್: ಹೈದರಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 27 ವರ್ಷದ ವ್ಯಕ್ತಿ ಭಾನುವಾರ ಮಧ್ಯಾಹ್ನ ತನ್ನ ರೂಮ್‌ಮೇಟ್‌ಗಳು ಇಲ್ಲದಿದ್ದಾಗ ಸುರರಾಮ್‌ನಲ್ಲಿ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂತ್ರಸ್ತನನ್ನು ಕರ್ನಾಟಕ ಮೂಲದ ಎನ್ ವಿನಯ್ ಎಂದು ಗುರುತಿಸಲಾಗಿದ್ದು, ಈತ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ವಿನಯ್ ಉತ್ತಮ ಉದ್ಯೋಗದ ನಿರೀಕ್ಷೆಯಿಂದ ನಗರಕ್ಕೆ ಬಂದಿದ್ದರು ಮತ್ತು ಅವರ ಕೆಲಸದ ಸ್ಥಳಕ್ಕೆ ಸಮೀಪವಿರುವ ಸುರರಾಮ್‌ನಲ್ಲಿ ಇತರ ಬ್ಯಾಚುಲರ್‌ಗಳೊಂದಿಗೆ ತಂಗಿದ್ದರು.
ಆದಾಗ್ಯೂ, ಕುಟುಂಬ ನಿರ್ವಹಣೆ ಮತ್ತು ಮದುವೆ ವಿಚಾರವಾಗಿ ಅವರು ಖಿನ್ನತೆಗೆ ಜಾರಿದ್ದರು. ಕೋಣೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಕ್ಕಪಕ್ಕದವರು ವಿನಯ್‌ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಆತಂಕಗೊಂಡಿದ್ದಾರೆ. ಮೊದಲು ಅವರು ತಂಗಿದ್ದ ಮನೆಯ ಬಾಗಿಲನ್ನು ತಟ್ಟಿದ್ದಾರೆ ಮತ್ತು ನಂತರ ಕಿಟಕಿ ಮೂಲಕ ಕೋಣೆಯೊಳಗೆ ಇಣುಕಿ ನೋಡಿದಾಗ ಆತ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ತಿಳಿದುಬಂದಿದೆ.
ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಬಾಗಿಲು ಒಡೆದು ನೋಡಿದಾಗ ವಿನಯ್ ಸಾವಿಗೀಡಾಗಿರುವುದು ತಿಳಿದುಬಂದಿದೆ.
ಸುರರಾಮ್ ಪೊಲೀಸರು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Advertisement