ಚಂದ್ರಯಾನ-3 ಯಶಸ್ಸು: ತಡವಾಗಿ ಪ್ರತಿಕ್ರಿಯಿಸಿದ ಪಾಕಿಸ್ತಾನ, ಹೇಳಿದ್ದು ಹೀಗೆ..!

ಭಾರತದ ಚಂದ್ರಯಾನ-3 ಯಶಸ್ಸಿನ ಬಗ್ಗೆ ಪ್ರಪಂಚದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುವಂತೆಯೇ ನೆರೆಯ ಪಾಕಿಸ್ತಾನ ತಡವಾಗಿ ಪ್ರತಿಕ್ರಿಯೆ ನೀಡಿದೆ.
ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್ ಚಿತ್ರ
ಚಂದ್ರನ ಮೇಲೆ ಇಳಿದ ವಿಕ್ರಮ್ ಲ್ಯಾಂಡರ್ ಚಿತ್ರ
Updated on

ನವದೆಹಲಿ: ಭಾರತದ ಚಂದ್ರಯಾನ-3 ಯಶಸ್ಸಿನ ಬಗ್ಗೆ ಪ್ರಪಂಚದಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುವಂತೆಯೇ ನೆರೆಯ ಪಾಕಿಸ್ತಾನ ತಡವಾಗಿ ಪ್ರತಿಕ್ರಿಯೆ ನೀಡಿದೆ.

ಚಂದ್ರಯಾನ-3 ಮಿಷನ್‌ ಯಶಸ್ಸನ್ನು "ಮಹಾನ್ ವೈಜ್ಞಾನಿಕ ಸಾಧನೆ" ಎಂದು ಪಾಕಿಸ್ತಾನ ಬಣ್ಣಿಸಿದ್ದು, ಇಸ್ರೋ ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ, ಅದೇ ದೇಶದ ಪ್ರಮುಖ ದಿನಪತ್ರಿಕೆಗಳು ಶ್ರೀಮಂತ ರಾಷ್ಟ್ರಗಳಿಗಿಂತ ಕಡಿಮೆ ಬಜೆಟ್‌ನಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರಿ ಸಾಧನೆಗೈದ ಭಾರತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿವೆ.

ಭಾರತದ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್, "ಇದು ಒಂದು ದೊಡ್ಡ ವೈಜ್ಞಾನಿಕ ಸಾಧನೆ ಎಂದು  ಹೇಳಬಲ್ಲೆ, ಇದಕ್ಕಾಗಿ ಇಸ್ರೋ ವಿಜ್ಞಾನಿಗಳು ಮೆಚ್ಚುಗೆಗೆ ಅರ್ಹರು ಎಂದು ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನ ಇದುವರೆಗೆ ಭಾರತದ ಯಶಸ್ಸನ್ನು ಅಧಿಕೃತವಾಗಿ ನಿರ್ಲಕ್ಷಿಸಿತ್ತು. ಆದಾಗ್ಯೂ, ಮಾಧ್ಯಮಗಳು ಬುಧವಾರದ ಐತಿಹಾಸಿಕ ಘಟನೆಗೆ ಮೊದಲ ಪುಟದ ಕವರೇಜ್ ನೀಡಿವೆ.

ಡಾನ್ ಪತ್ರಿಕೆ ತನ್ನ ಸಂಪಾದಕೀಯದಲ್ಲಿ 'ಭಾರತದ ಬಾಹ್ಯಾಕಾಶ ಅನ್ವೇಷಣೆ' ಎಂಬ ಶೀರ್ಷಿಕೆಯಲ್ಲಿ ಚಂದ್ರಯಾನ-3 ಮಿಷನ್‌ನ ಯಶಸ್ಸನ್ನು ಐತಿಹಾಸಿಕ ಎಂದು ಕರೆದಿದೆ. ಶ್ರೀಮಂತ ರಾಷ್ಟ್ರಗಳು ಹೆಚ್ಚಿನ ಮೊತ್ತವನ್ನು ವ್ಯಯಿಸಿ ಸಾಧಿಸಿದ್ದನ್ನು ಭಾರತವು ಕಡಿಮೆ ಬಜೆಟ್‌ನಲ್ಲಿ ಸಾಧಿಸಿದ್ದರಿಂದ ಈ ನಿರ್ದಿಷ್ಟ ಸಾಧನೆಯು ಮೆಚ್ಚುಗೆಗೆ ಅರ್ಹವಾಗಿದೆ ಎಂದು ಪತ್ರಿಕೆ ಹೇಳಿದೆ.

ಬಹುಶಃ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖವಾದುದು, ನಿರಂತರ ರಾಜ್ಯ ಬೆಂಬಲದ ಹೊರತಾಗಿ, ಈ ಕಷ್ಟಕರವಾದ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸಲು ಸಹಾಯ ಮಾಡಿದ ಅದರ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಗುಣಮಟ್ಟ ಮತ್ತು ಸಮರ್ಪಣೆಯಾಗಿದೆ ಎಂದು ಅದು ಕಾಮೆಂಟ್ ಮಾಡಿದೆ. "ಹೋಲಿಕೆಗಳು ನಿಜಕ್ಕೂ ಅಸಹ್ಯಕರವಾಗಿವೆ, ಆದರೆ ಭಾರತದ ಬಾಹ್ಯಾಕಾಶ ಯಶಸ್ಸಿನಿಂದ ಪಾಕಿಸ್ತಾನ ಸಾಕಷ್ಟು ಕಲಿಯಬಹುದಾಗಿದೆ ಎಂದು ಹೇಳಿದೆ.

ಅಮೆರಿಕ, ರಷ್ಯಾ, ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಲಾಗದ ಸಾಧನೆಯನ್ನು ಭಾರತ ಮಾಡಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ಬರೆದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com