ಶೇ.80ರಷ್ಟು ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಒಲವು: ಸಮೀಕ್ಷೆ

2024ರ ಲೋಕಸಭಾ ಚುನಾವಣೆಗೆ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸಿರುವಂತೆಯೇ ಇತ್ತ ದೇಶದ ಶೇ.80ರಷ್ಟು ಭಾರತೀಯರು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸಿರುವಂತೆಯೇ ಇತ್ತ ದೇಶದ ಶೇ.80ರಷ್ಟು ಭಾರತೀಯರು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

PEW ಸಂಶೋಧನಾ ಕೇಂದ್ರದ ಸಮೀಕ್ಷೆಯ ಪ್ರಕಾರ, ದೇಶದ ಸುಮಾರು 80 ಪ್ರತಿಶತದಷ್ಟು ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅನುಕೂಲಕರ ದೃಷ್ಟಿಕೋನವನ್ನು ಹೊಂದಿದ್ದಾರೆ ಮತ್ತು ಪ್ರತೀ 10 ಭಾರತೀಯರಲ್ಲಿ ಏಳು ಮಂದಿ ತಮ್ಮ ದೇಶವು ಇತ್ತೀಚೆಗೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ನಂಬಿದ್ದಾರೆ ಎಂದು ಹೇಳಿದೆ. 

G20 ಶೃಂಗಸಭೆಗೆ ಮುಂಚಿತವಾಗಿ ಬಿಡುಗಡೆಯಾದ ಈ ಸಮೀಕ್ಷೆಯು, ಶೇ.34 ಪ್ರತಿಶತದಷ್ಟು ಪ್ರತಿಕೂಲವಾದ ವೀಕ್ಷಣೆಗಳಿಗೆ ಹೋಲಿಸಿದರೆ 46 ಪ್ರತಿಶತದಷ್ಟು ಸರಾಸರಿ ಭಾರತದ ಬಗ್ಗೆ ಅನುಕೂಲಕರವಾದ ಅಭಿಪ್ರಾಯಗಳನ್ನು ವರದಿ ಮಾಡುವ ಮೂಲಕ ಪ್ರಪಂಚದಾದ್ಯಂತ ಭಾರತದ ಸಾರ್ವಜನಿಕ ಅಭಿಪ್ರಾಯವು ಸಾಮಾನ್ಯವಾಗಿ ಧನಾತ್ಮಕವಾಗಿದೆ ಎಂದು ಗಮನಿಸಿದೆ. ಆದರೆ ಈ ಸಮೀಕ್ಷೆಯಲ್ಲಿ ಶೇ.16ರಷ್ಟು ಜನರು ಮಾತ್ರ ಯಾವುದೇ ಅಭಿಪ್ರಾಯವನ್ನು ಹಂಚಿಕೊಳ್ಳಲಿಲ್ಲ ಎಂದು ಹೇಳಲಾಗಿದೆ.

ಇಸ್ರೇಲ್‌ನಲ್ಲಿ ಭಾರತದ ಪರ ದೃಷ್ಟಿಕೋನಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇ.71ರಷ್ಟು ಸಕಾರಾತ್ಮಕವಾಗಿವೆ. ಅಲ್ಲಿ ಶೇ.71 ಪ್ರತಿಶತದಷ್ಟು ಜನರು ಭಾರತ ದೇಶದ ಬಗ್ಗೆ ಅನುಕೂಲಕರ ದೃಷ್ಟಿಕೋನವನ್ನು ಹೊಂದಿದ್ದಾರೆಂದು ವರದಿ ಹೇಳಿದೆ. ಭಾರತ ಸೇರಿದಂತೆ 24 ದೇಶಗಳ 30,861 ವಯಸ್ಕರಲ್ಲಿ ಫೆಬ್ರವರಿ 20 ರಿಂದ ಮೇ 22 ರವರೆಗೆ ಸಮೀಕ್ಷೆ ನಡೆಸಲಾಗಿದ್ದು, ಪ್ರಧಾನಿ ಮೋದಿಯವರ ಜಾಗತಿಕ ದೃಷ್ಟಿಕೋನಗಳು, ಭಾರತದ ಜಾಗತಿಕ ಶಕ್ತಿಯ ವ್ಯಾಪ್ತಿ ಮತ್ತು ಇತರ ದೇಶಗಳ ಭಾರತೀಯರ ದೃಷ್ಟಿಕೋನಗಳನ್ನು ಪರಿಶೀಲಿಸಲಾಗಿದೆ ಎಂದು ಸಮೀಕ್ಷೆ ನಡೆಸಿದ ಪ್ಯೂ ಹೇಳಿದೆ.

ಮಂಗಳವಾರ ಬಿಡುಗಡೆಯಾದ ಸಮೀಕ್ಷೆಯ ಫಲಿತಾಂಶದ ಪ್ರಕಾರ, ಪ್ರತೀ 10 ಮಂದಿ ಭಾರತೀಯರಲ್ಲಿ ಎಂಟು ಮಂದಿ ಮೋದಿಯವರ ಪರ "ಅನುಕೂಲಕರ" ಅಭಿಪ್ರಾಯಗಳನ್ನು ವರದಿ ಮಾಡಿದ್ದಾರೆ. ಇದರಲ್ಲಿ ಬಹುಮತ (ಶೇ. 55) "ಅತ್ಯಂತ ಅನುಕೂಲಕರ" ಅಭಿಪ್ರಾಯವಿದೆ. ಇದು ಮೋದಿಯವರ ಎರಡನೇ ಅವಧಿಯ ಪ್ರಧಾನಿಯಾಗಿದ್ದು, 2024 ರ ಲೋಕಸಭೆ ಚುನಾವಣೆಯಲ್ಲಿ ಅವರು ಮೂರನೇ ಬಾರಿಗೂ ಮೋದಿ ಅವರನ್ನೇ ಪ್ರಧಾನಿಯಾಗಿ ಬಯಸುತ್ತಿದ್ದಾರೆ. 2023ರಲ್ಲಿ ಕೇವಲ ಐದನೇ ಒಂದು ಭಾಗದಷ್ಟು ಭಾರತೀಯರು ಮೋದಿಯ ಬಗ್ಗೆ ಪ್ರತಿಕೂಲವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಪ್ಯೂ ಸಮೀಕ್ಷೆ ತಿಳಿಸಿದೆ.

"ಭಾರತದ ಶಕ್ತಿಯು ಹೆಚ್ಚುತ್ತಿದೆ ಎಂದು ಭಾರತೀಯ ವಯಸ್ಕರು ಹೆಚ್ಚು ನಂಬುತ್ತಾರೆ. ಹತ್ತರಲ್ಲಿ ಏಳು ಭಾರತೀಯರು ತಮ್ಮ ದೇಶವು ಇತ್ತೀಚೆಗೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ನಂಬುತ್ತಾರೆ ಎಂದು ಪ್ಯೂ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com