ಹಾರ್ದಿಕ್ ವರ್ಮಾ ಮತ್ತು ಗೇಬ್ರಿಯೆಲಾ ದುಡಾ
ಹಾರ್ದಿಕ್ ವರ್ಮಾ ಮತ್ತು ಗೇಬ್ರಿಯೆಲಾ ದುಡಾ

ನೆದರ್ ಲ್ಯಾಂಡ್ ಹುಡುಗಿ ಜತೆ ಲವ್: ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆದ ಭಾರತೀಯ!

ಉತ್ತರ ಪ್ರದೇಶ ಮೂಲದ ಯುವಕನೊಬ್ಬ ನೆದರ್ಲ್ಯಾಂಡ್ ಮೂಲದ ಯುವತಿಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Published on

ಲಕ್ನೋ: ಉತ್ತರ ಪ್ರದೇಶ ಮೂಲದ ಯುವಕನೊಬ್ಬ ನೆದರ್ಲ್ಯಾಂಡ್ ಮೂಲದ ಯುವತಿಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಉತ್ತರ ಪ್ರದೇಶದ ಫತೇಪುರದ ಜಿಲ್ಲೆಯ ಹಳ್ಳಿಯೊಂದರ ಹಾರ್ದಿಕ್ ವರ್ಮಾ (32) ಅವರು ಕೆಲಸದ ನಿಮಿತ್ತ ನೆದರ್‌ಲ್ಯಾಂಡ್‌ಗೆ ತೆರಳಿದ್ದರು. ಅಲ್ಲಿ ಅವರು ಫಾರ್ಮಾಸ್ಯುಟಿಕಲ್ ಎನ್ನುವ ಕಂಪನಿಯಲ್ಲಿ ಸುಪರ್​ವೈಸರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಗೇಬ್ರಿಯೆಲಾ ದುಡಾ (21) ಎನ್ನುವ ನೆದರ್​​ಲ್ಯಾಂಡ್​ನ ಚೆಲುವೆ ಪರಿಚಯವಾಗಿದ್ದಾಳೆ.

ಡಚ್​ ದೇಶದ ಚೆಲುವೆ ಗೇಬ್ರಿಯೆಲಾಳ, ಸೌಂದರ್ಯಕ್ಕೆ ಮಾರುಹೋದ ಭಾರತೀಯ ಹಾರ್ದಿಕ್, ಆಕೆಯನ್ನು ಲವ್ ಮಾಡಲು ಶುರು ಮಾಡಿದ್ದಾನೆ. ಈ ಬಗ್ಗೆ ಒಮ್ಮೆ ಆಕೆ ಬಳಿ ತನ್ನ ಪ್ರೇಮ ನಿವೇದನೆ ಕೂಡ ಮಾಡಿದ್ದಾನೆ. ಇದಕ್ಕೆ ಒಪ್ಪಿದ್ದ ಗೇಬ್ರಿಯೆಲಾಳ ಕಳೆದ 3 ವರ್ಷದಿಂದ ಇಬ್ಬರು ನೆದರ್​​ಲ್ಯಾಂಡ್​​ನಲ್ಲೇ ಲಿವಿಂಗ್​​ ಟುಗೇದರ್​ ರಿಲೇಷನ್​ಶಿಪ್​​ನಲ್ಲಿದ್ದರು.

ಇಬ್ಬರು ಯೋಚಿಸಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಇದನ್ನು ಹಾರ್ದಿಕ್​ ಫೋನ್​ ಮೂಲಕ ಭಾರತದಲ್ಲಿದ್ದ ತನ್ನ ಫೋಷಕರಿಗೆ ತಿಳಿಸಿದ್ದಾನೆ. ಪೋಷಕರು ಮಗನ ಲವ್​ಸ್ಟೋರಿಗೆ ಓಕೆ ಎಂದಿದ್ದಾರೆ. ಕಳೆದ ವಾರ ಉತ್ತರಪ್ರದೇಶದ ತನ್ನ ತವರಿಗೆ ಬಂದಿದ್ದ ಹಾರ್ದಿಕ್​, ಗೇಬ್ರಿಯೆಲಾಳನ್ನ ಭಾರತದ ಹಿಂದು ಸಂಪ್ರದಾಯದಂತೆ ನವೆಂಬರ್​ 29 ರಂದು ಮದುವೆಯಾಗಿದ್ದಾನೆ.

ತನ್ನ ಪೂರ್ವಜರು ಉತ್ತರ ಪ್ರದೇಶದ ಫತೇಪುರ ಮೂಲಕ್ಕೆ ಸೇರಿದ್ದವರು. ಹೀಗಾಗಿ ಅಲ್ಲೇ ಆಕೆಯನ್ನು ವಿವಾಹವಾಗಿದ್ದಾನೆ. ಡಚ್​ನ ಬ್ಯೂಟಿಯನ್ನು ಮದುವೆಯಾದ ಸಂಭ್ರಮದಲ್ಲಿರುವ ಹಾರ್ದಿಕ್, ಡಿಸೆಂಬರ್​ 3 ರಂದು ಸದ್ಯ ವಾಸವಿರುವ​ ಗುಜರಾತ್​​ನ ಗಾಂಧಿನಗರಕ್ಕೆ ತೆರಳಿ ಅಲ್ಲಿ ಡಿಸೆಂಬರ್​ 11 ರಂದು ರಿಸೆಪ್ಷನ್ ಮಾಡಿಕೊಳ್ಳಲಿದ್ದಾರೆ. ಈ ಆರತಕ್ಷತೆಗಾಗಿಯೇ ನೆದರ್​​ಲ್ಯಾಂಡ್​ನಿಂದ ಗೇಬ್ರಿಯೆಲಾಳ ಪೋಷಕರು ಹಾಗೂ ಸಂಬಂಧಿಕರು ಭಾರತಕ್ಕೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com