ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

10 ವರ್ಷಗಳ ಕೆಸಿಆರ್ ಆಡಳಿತದಿಂದ ಜನ ಬೇಸತ್ತಿದ್ದರು: ತೆಲಂಗಾಣ ಗೆಲುವಿನ ಕುರಿತು ಡಿಕೆ ಶಿವಕುಮಾರ್ ಹೇಳಿಕೆ

10 ವರ್ಷಗಳ ಕೆಸಿಆರ್ ಆಡಳಿತದಿಂದ ಜನ ಬೇಸತ್ತು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ನಂಬಿ ತೆಲಂಗಾಣದಲ್ಲಿ ಗೆಲುವು ನೀಡಿದ್ಜದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
Published on

ಹೈದರಾಬಾದ್: 10 ವರ್ಷಗಳ ಕೆಸಿಆರ್ ಆಡಳಿತದಿಂದ ಜನ ಬೇಸತ್ತು, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ನಂಬಿ ತೆಲಂಗಾಣದಲ್ಲಿ ಗೆಲುವು ನೀಡಿದ್ಜದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಹೈದರಾಬಾದ್ ನ ಗಾಂಧಿಭವನದಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಡಿಕೆ ಶಿವ ಕುಮಾರ್, ಕರ್ನಾಟಕದ ನಂತರ ದಕ್ಷಿಣ ಭಾರತದಲ್ಲಿ (South India) ಕಾಂಗ್ರೆಸ್ ಪರ ಅಲೆ ಶುರುವಾಗಿದೆ. ಬದಲಾವಣೆ ಬಯಸಿ ಜನರು ಕಾಂಗ್ರೆಸ್​ಗೆ ಮತ ನೀಡಿದ್ದಾರೆ. ಬದಲಾವಣೆಯಿಂದಾಗಿ ಕಾಂಗ್ರೆಸ್​ಗೆ ನಿಶ್ಚಳ ಬಹುಮತ ಬಂದಿದೆ.

ಕೆ ಚಂದ್ರಶೇಖರ್ ರಾವ್ ಅವರ 10 ವರ್ಷಗಳ ಆಡಳಿತದಿಂದ ಜನ ಬೇಸತ್ತಿದ್ದರು. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಜನತೆ ಕಾಂಗ್ರೆಸ್ ನತ್ತ ಮುಖ ಮಾಡುವಂತೆ ಮಾಡಿದೆ. ಕರ್ನಾಟಕ, ಮಹಾರಾಷ್ಟ್ರದಿಂದ ನಮ್ಮ ನಾಯಕರು ಇಲ್ಲಿ ಬಂದು ಕೆಲಸ ಮಾಡಿದ್ದಾರೆ. ಇದು ಸಾಮೂಹಿಕ ನಾಯಕತ್ವದ ಗೆಲುವು ಎಂದು ಹೇಳಿದರು.

ಟೀಕೆಗಳಿಗೆ ಡಿಕೆಶಿ ಪ್ರತಿಕ್ರಿಯೆ
ಮುಂಜಾಗ್ರತ ಕ್ರಮವಾಗಿ ಎಲ್ಲಾ ಶಾಸಕರನ್ನು ಕರೆದುಕೊಂಡು ಬರಲು ನಾವೆಲ್ಲರೂ ಸಜ್ಜಾಗಿದ್ದೇವೆ. ಹೈಕಮಾಂಡ್ ನೀಡಿದ ಕೆಲಸವನ್ನು ನಾವು ಮಾಡಿದ್ದೇವೆ. ಪಕ್ಷದಲ್ಲಿ ಹಿರಿಯರಿದ್ದು, ಮುಂದಿನ ನಿರ್ಧಾರವನ್ನು ಅವರು ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಅಂತೆಯೇ ಬಿಆರ್ಎಸ್ ನಾಯಕರ ಟೀಕೆಗಳ ಕುರಿತು ಮಾತನಾಡಿದ ಡಿಕೆಶಿ, ಅವರ ಟೀಕೆಗಳಿಗೆ ಜನರೇ ಉತ್ತರ ನೀಡಿದ್ದಾರೆ, ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ನೀಡಲಾಗುತ್ತದೆ. ಗೆದ್ದಂತಹ ಶಾಸಕರನ್ನುಕರೆದುಕೊಂಡು ಹೋಗುವ ಜವಾಬ್ದಾರಿಯನ್ನ ಜಿಲ್ಲಾ ಚುನಾವಣೆ ಉಸ್ತುವಾರಿಗಳಿಗೆ ನೀಡಲಾಗಿದೆ. ಈ ಹಿನ್ನೆಲೆ ತಮ್ಮ ವ್ಯಾಪ್ತಿಯ ಶಾಸಕರನ್ನು ಕರೆದುಕೊಂಡು ಬರಲು ಉಸ್ತುವಾರಿಗಳು ತೆಲಂಗಾಣಕ್ಕೆ ಹೋಗಿದ್ದಾರೆ ಎಂದು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com