ಪಾಕಿಸ್ತಾನ ಪರ ಗೂಢಚಾರಿಕೆ: ಮಹಾರಾಷ್ಟ್ರ ATSನಿಂದ ಶಂಕಿತನ ಬಂಧನ

ಪಾಕಿಸ್ತಾನ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಅಧಿಕಾರಿಗಳ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಪಾಕಿಸ್ತಾನ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಅಧಿಕಾರಿಗಳ ಶಂಕಿತ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಪಾಕಿಸ್ತಾನ ಮೂಲದ ಗುಪ್ತಚರ ಅಧಿಕಾರಿಗಳಿಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬುಧವಾರ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಎಟಿಎಸ್, 'ಎಟಿಎಸ್‌ನ ಮುಂಬೈ ಘಟಕವು ಹಣಕ್ಕಾಗಿ "ಭಾರತ ಸರ್ಕಾರದಿಂದ ನಿರ್ಬಂಧಿಸಲಾದ ಪ್ರದೇಶಗಳ" ಕುರಿತು ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದೆ ಎಂದು ಸುಳಿವು ಪಡೆದಿದೆ. ಆರೋಪಿಗಳು ಏಪ್ರಿಲ್ 2023 ರಿಂದ ಅಕ್ಟೋಬರ್ 2023 ರ ಅವಧಿಯಲ್ಲಿ ವಾಟ್ಸಾಪ್ ಮತ್ತು ಫೇಸ್‌ಬುಕ್ ಮೂಲಕ ಪಾಕಿಸ್ತಾನಿ ಕಾರ್ಯಕರ್ತರೊಂದಿಗೆ ಸಂವಹನ ನಡೆಸಿದ್ದಾರೆ ಮತ್ತು ಅವರಿಂದ ಆನ್‌ಲೈನ್ ವಹಿವಾಟಿನ ಮೂಲಕ ಹಣವನ್ನು ಸ್ವೀಕರಿಸಿದ್ದಾರೆ ಎಂದು ಅದು ಹೇಳಿದೆ.

ಬಂಧಿತ ಶಂಕಿತ ವ್ಯಕ್ತಿಯನ್ನು ನಾವಲ್ ಡಾಕ್‌ನಲ್ಲಿ (ಸಿವಿಲ್ ಅಪ್ರೆಂಟಿಸ್) ಕೆಲಸ ಮಾಡುತ್ತಿದ್ದ ಗೌರವ್ ಪಾಟೀಲ್ (23 ವರ್ಷ) ಎಂದು ಗುರುತಿಸಲಾಗಿದೆ. ಆರೋಪಿಯು ವಾಟ್ಸಾಪ್ ಮತ್ತು ಫೇಸ್‌ಬುಕ್ ಮೂಲಕ ಪಾಕಿಸ್ತಾನ ಮೂಲದ ಇಂಟೆಲಿಜೆನ್ಸ್ ಆಪರೇಟಿವ್ (ಪಿಐಒ) ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದನು. ಈ ಸಂಬಂಧ ಒಟ್ಟು 4 ಜನರ ವಿರುದ್ಧ ಎಟಿಎಸ್ ಪ್ರಕರಣ ದಾಖಲಿಸಿದ್ದು, ಉಳಿದ 3 ಶಂಕಿತರು ಗೌರವ್ ಪಾಟೀಲ್ ಸಂಪರ್ಕದಲ್ಲಿದ್ದರು ಎಂದು ಎಟಿಎಸ್ ತಿಳಿಸಿದೆ.

ಬಂಧಿತ ವ್ಯಕ್ತಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com