ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ: ನಾಲ್ವರು ಶಂಕಿತರನ್ನು ಪತ್ತೆಮಾಡಿದ ದೆಹಲಿ ಪೊಲೀಸರು

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ನಾಲ್ವರು ಶಂಕಿತರನ್ನು ಪತ್ತೆ ಮಾಡಲಾಗಿದೆ ಮತ್ತು ಘಟನೆಯ ಮುಖ್ಯ ಸಂಚುಕೋರನನ್ನು ಹಿಡಿಯಲು ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ನಾಲ್ವರು ಶಂಕಿತರನ್ನು ಪತ್ತೆ ಮಾಡಲಾಗಿದೆ ಮತ್ತು ಘಟನೆಯ ಮುಖ್ಯ ಸಂಚುಕೋರನನ್ನು ಹಿಡಿಯಲು ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಈ ನಾಲ್ವರು ಶಂಕಿತರು ವಿಡಿಯೋವನ್ನು ಅಪ್‌ಲೋಡ್ ಮಾಡಿದವರಾಗಿದ್ದು, ವಿಡಿಯೋದ ಸೃಷ್ಟಿಕರ್ತರಲ್ಲ. ಹೀಗಾಗಿ, ಪ್ರಕರಣದ ಪ್ರಮುಖ ಸಂಚೋಕೋರರ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮಾತೃಸಂಸ್ಥೆಯಾದ ಮೆಟಾ ಒದಗಿಸಿದ ವಿವರಗಳ ಆಧಾರದ ಮೇಲೆ ನಾಲ್ವರು ಶಂಕಿತರ ಪೈಕಿ ಮೂವರನ್ನು ಪತ್ತೆಹಚ್ಚಲಾಗಿದೆ.

ಆರೋಪಿಗಳು ತಮ್ಮ ಖಾತೆಗಳಿಂದ ಮಾಹಿತಿಯನ್ನು ತೆಗೆದುಹಾಕಿದ್ದಾರೆ ಮತ್ತು ಅಳಿಸಿದ್ದರಿಂದ ತನಿಖೆಗೆ ಅಡಚಣೆ ಉಂಟಾಯಿತು. ಇದರಿಂದಾಗಿ ಅವರನ್ನು ಪತ್ತೆ ಮಾಡುವುದು ಅಧಿಕಾರಿಗಳಿಗೆ ಕಷ್ಟಕರವಾಗಿದೆ. ದೆಹಲಿ ಪೊಲೀಸರ ಸೈಬರ್ ತಜ್ಞರು ಸದ್ಯ ಪೋಸ್ಟ್‌ನ ಹಿಂದಿನ ಪ್ರಮುಖ ಸಂಚುಕೋರನನ್ನು ಹುಡುಕುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟಿಯನ್ನು ಒಳಗೊಂಡಿದ್ದ ಡೀಪ್‌ಫೇಕ್ ವಿಡಿಯೋಗಳನ್ನು ನಕಲಿ ಗುರುತನ್ನು ಬಳಸಿಕೊಂಡು ಅಪ್‌ಲೋಡ್ ಮಾಡಿರುವ ಸಾಧ್ಯತೆ ಇದೆ ಮತ್ತು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಬಳಕೆಯು ಅಪರಾಧಿಯನ್ನು ಪತ್ತೆಹಚ್ಚುವಲ್ಲಿ ಮತ್ತೊಂದು ಸವಾಲನ್ನು ಮುಂದಿಟ್ಟಿದೆ.

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವಿಶೇಷ ಸೆಲ್‌ನಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ಒಂದು ತಿಂಗಳಾಗಿದೆ.

ನವೆಂಬರ್ 6 ರಂದು, ನಟಿ ರಶ್ಮಿಕಾ ಮಂದಣ್ಣ ಅವರ ತಿರುಚಿದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತು. ಇದು ಡಿಜಿಟಲ್ ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿತು. ವೈರಲ್ ಆಗಿರುವ ವಿಡಿಯೋದಲ್ಲಿ, ಮತ್ತೋರ್ವ ಮಹಿಳೆಯ ದೇಹಕ್ಕೆ ನಟಿ ರಶ್ಮಿಕಾ ಅವರ ಮುಖವನ್ನು ಸೇರಿಸಿ ಎಡಿಟ್ ಮಾಡಲಾಗಿತ್ತು. 

ಈ ವಿಡಿಯೋ ಶೀಘ್ರವೇ ವೈರಲ್ ಆಯಿತು ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಡೀಪ್‌ಫೇಕ್ ವಿಡಿಯೋ ಎಂದು ಖಚಿತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com