ಪುಣೆಯಲ್ಲಿ ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ; ಬೀದರ್ ಮೂಲದ ವ್ಯಕ್ತಿ ಬಂಧನ

ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ ನೀಡಿದ ವ್ಯಕ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪುಣೆಯಲ್ಲಿ ಬೀದರ್ ಮೂಲಕ ವ್ಯಕ್ತಿಯನ್ನು ಬಂಧಿಸಲಾಗಿದೆ.
ಪುಣೆಯಲ್ಲಿ ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ ನೀಡಿರುವ ಇಬ್ಬರು ವ್ಯಕ್ತಿಗಳು.
ಪುಣೆಯಲ್ಲಿ ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ ನೀಡಿರುವ ಇಬ್ಬರು ವ್ಯಕ್ತಿಗಳು.

ಪುಣೆ: ದಕ್ಷಿಣ ಕೊರಿಯಾದ ವ್ಲಾಗರ್‌ಗೆ ಕಿರುಕುಳ ನೀಡಿದ ವ್ಯಕ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪುಣೆಯಲ್ಲಿ ಬೀದರ್ ಮೂಲಕ ವ್ಯಕ್ತಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ಭರತ್ ಉಂಚಾಲೆ ಎಂದು ಗುರುತಿಸಲಾಗಿದ್ದು, ಮೂಲತಃ ಕರ್ನಾಟಕದ ಬೀದರ್‌ನವನು. ವ್ಲಾಗರ್‌ ಜೊತೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಕ್ತಿಯ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

ದಕ್ಷಿಣ ಕೊರಿಯಾದ ವ್ಲಾಗರ್ ಕೆಲ್ಲಿ ಎಂಬುವವರು ಪುಣೆಯಲ್ಲಿ ಎಳನೀರು ಸೇವಿಸುತ್ತಾ ಸ್ಥಳೀಯ ಅಂಗಡಿಯೊಂದರಲ್ಲಿ ವ್ಯಾಪಾರಿ ಮತ್ತು ಗ್ರಾಹಕರೊಂದಿಗೆ ಸಂಭಾಷಣೆ ನಡೆಸುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ, ಇಬ್ಬರು ಪುರುಷರು ಆಕೆಯ ಬಳಿ ಬರುತ್ತಾರೆ. ಅವರಲ್ಲಿ ಒಬ್ಬಾತ ಆಕೆಯ ಹೆಗಲ ಮೇಲೆ ಕೈಹಾಕುತ್ತಾನೆ. ಕೆಲ್ಲಿ ದೂರ ಸರಿಯುವ ಪ್ರಯತ್ನದ ನಡುವೆಯೇ ಆತ ಆಕೆಯನ್ನು ಮುಜುಗರಕ್ಕೀಡುಮಾಡುತ್ತಾನೆ.

ಕೆಲ್ಲಿ ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಪಿಂಪ್ರಿ-ಚಿಂಚ್‌ವಾಡ್ ಪ್ರದೇಶಕ್ಕೆ ಬಂದಿದ್ದರು ಮತ್ತು ಕಳೆದ ವಾರವಷ್ಟೇ ಈ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. 

ವಿಡಿಯೋದಲ್ಲಿ, ಕೆಲ್ಲಿ, ಇದು ನನ್ನನ್ನು ಆಶ್ಚರ್ಯಕ್ಕೀಡುಮಾಡಿದೆ. ಆದರೆ, 'ನಾನು ಇಲ್ಲಿಂದ ಆದಷ್ಟು ಬೇಗ ಓಡಿ ಹೋಗಬೇಕು' ಎಂದು ಹೇಳುತ್ತಾ, ಆ ಇಬ್ಬರಿಂದ ದೂರ ಬರುವುದು ಕಾಣಿಸುತ್ತದೆ. 'ಆ ಇಬ್ಬರು ತನ್ನನ್ನು ತಬ್ಬಿಕೊಳ್ಳಲು ಬಯಸಿದ್ದರು. ಅದು ಏಕೆಂದು ನನಗೆ ತಿಳಿದಿಲ್ಲ' ಎಂದು ಕೆಲ್ಲಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ್ಲಿ ಕೊಂಚ ಭಯದಿಂದಲೇ ಆ ಸ್ಥಳದಲ್ಲಿ ಸ್ವಲ್ಪ ದೂರ ಸರಿಯುತ್ತಾರೆ.

ಇದೇ ರೀತಿಯ ಘಟನೆಯಲ್ಲಿ, ಮುಂಬೈನಲ್ಲಿ ದಕ್ಷಿಣ ಕೊರಿಯಾದ ಮತ್ತೊಬ್ಬ ವ್ಲಾಗರ್‌ಗೆ ಕಿರುಕುಳ ನೀಡಿದ ಇಬ್ಬರು ವ್ಯಕ್ತಿಗಳನ್ನು ಕಳೆದ ವರ್ಷ ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com