ಈ ವರ್ಷ ಭಾರತಕ್ಕೆ 100 ಡ್ರೋನ್‌ ಕಳುಹಿಸಿದ ಪಾಕಿಸ್ತಾನ!

ಭಾರತದೊಳಗೆ ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ ಪಾಕಿಸ್ತಾನದ 100 ಡ್ರೋನ್ ಗಳನ್ನು  ಹೊಡೆದುರುಳಿಸಲಾಗಿದೆ ಅಥವಾ ವಶಕ್ಕೆ ಪಡೆಯಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ ಎಫ್) ಮಂಗಳವಾರ ಮಾಹಿತಿ ನೀಡಿದೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದೊಳಗೆ ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ ಪಾಕಿಸ್ತಾನದ 100 ಡ್ರೋನ್ ಗಳನ್ನು  ಹೊಡೆದುರುಳಿಸಲಾಗಿದೆ ಅಥವಾ ವಶಕ್ಕೆ ಪಡೆಯಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ ಎಫ್) ಮಂಗಳವಾರ ಮಾಹಿತಿ ನೀಡಿದೆ.  

ಭಾರತದೊಳಗೆ ಡ್ರಗ್ಸ್ ಮತ್ತು ಇತರ ಮಾದಕ ವಸ್ತುಗಳ ಸಾಗಣೆಯನ್ನು ಮೋಸದಿಂದ ಕಳುಹಿಸುವುದಕ್ಕೆ ಕಡಿವಾಣ ಹಾಕುವ ಪ್ರಯತ್ನದಲ್ಲಿ 'ತ್ರಿಮುಖ ತಂತ್ರ'ವನ್ನು ರೂಪಿಸಿರುವುದಾಗಿ ತಿಳಿಸಿದೆ.

ಡ್ರೋನ್‌ಗಳ ಮೂಲಕ ಮಾದಕವಸ್ತು ಕಳ್ಳಸಾಗಣೆಗೆ ಪ್ರಯತ್ನಿಸುವವರನ್ನು ಯಶಸ್ವಿಯಾಗಿ ಬಂಧಿಸಿರುವುದಾಗಿ ಬಿಎಸ್ ಎಫ್ ಹೇಳಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಟ್ವೀಟ್ ಮೂಲಕ ಬಿಎಸ್ ಎಫ್ ಪಂಜಾಬ್ ಫ್ರಾಂಟಿಯರ್, ಮಾಹಿತಿ ಹಂಚಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com