ಸಾಂದರ್ಭಿಕ ಚಿತ್ರ
ದೇಶ
ಉತ್ತರ ಪ್ರದೇಶ: ಗ್ರಾಮವೊಂದರಲ್ಲಿ ಮನೆಗೆ ಬೆಂಕಿ ತಗುಲಿ ಬಾಲಕಿ, ಹಸು ಸಜೀವ ದಹನ
ತನ್ನ ಮನೆಯ ಛಾವಣಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮೂರು ವರ್ಷದ ಬಾಲಕಿಯೊಬ್ಬಳು ಸಜೀವ ದಹನವಾಗಿದ್ದಾಳೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಕೌಶಂಬಿ: ತನ್ನ ಮನೆಯ ಛಾವಣಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಮೂರು ವರ್ಷದ ಬಾಲಕಿಯೊಬ್ಬಳು ಸಜೀವ ದಹನವಾಗಿದ್ದಾಳೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸಮರ್ ಬಹದ್ದೂರ್ ಸಿಂಗ್ ಮಾತನಾಡಿ, ಬಹದ್ದೂರ್‌ಪುರ ಗ್ರಾಮದ ರಾಂಬಾಬು ಎಂಬುವವರ ಹುಲ್ಲಿನ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದಿದ್ದಾರೆ.
ರಾಂಬಾಬು ಅವರ ಮೂರು ವರ್ಷದ ಮಗಳು ನಂದಿನಿ ಹುಲ್ಲಿನ ಛಾವಣಿ ಕೆಳಗೆ ಮಲಗಿದ್ದಳು. ನೆರೆಹೊರೆಯವರು ಬೆಂಕಿ ನಂದಿಸಲು ಧಾವಿಸಿದರು ಆದರೆ, ಬೆಂಕಿಯನ್ನು ನಿಯಂತ್ರಿಸುವಷ್ಟರಲ್ಲಿ ಬಾಲಕಿ ಮತ್ತು ಹತ್ತಿರದಲ್ಲಿ ಕಟ್ಟಿದ್ದ ಹಸು ಸುಟ್ಟು ಕರಕಲಾಗಿವೆ.
ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

