ಜೆಡಿಯುಗೆ ಉಪೇಂದ್ರ ಕುಶ್ವಾಹ ಗುಡ್ ಬೈ; ಹೊಸ ಪಕ್ಷ ಸ್ಥಾಪನೆ

ಮಹತ್ವದ  ಬೆಳವಣಿಗೆಯಲ್ಲಿ ಜೆಡಿಯು ಪಕ್ಷದ ಪ್ರಮುಖ ಹಿರಿಯ ನಾಯಕ ಉಪೇಂದ್ರ ಕುಶ್ವಾಹ ಪಕ್ಷ ತೊರೆದಿದ್ದು, ಹೊಸ ಪಕ್ಷ ಸ್ಥಾಪನೆ ಘೋಷಣೆ ಮಾಡಿದ್ದಾರೆ.
ಉಪೇಂದ್ರ ಕುಶ್ವಾಹ್
ಉಪೇಂದ್ರ ಕುಶ್ವಾಹ್
Updated on

ಪಾಟ್ನಾ: ಮಹತ್ವದ  ಬೆಳವಣಿಗೆಯಲ್ಲಿ ಜೆಡಿಯು ಪಕ್ಷದ ಪ್ರಮುಖ ಹಿರಿಯ ನಾಯಕ ಉಪೇಂದ್ರ ಕುಶ್ವಾಹ ಪಕ್ಷ ತೊರೆದಿದ್ದು, ಹೊಸ ಪಕ್ಷ ಸ್ಥಾಪನೆ ಘೋಷಣೆ ಮಾಡಿದ್ದಾರೆ.

ಹೌದು.. ಜೆಡಿಯು ಭಿನ್ನಮತೀಯ ನಾಯಕ ಉಪೇಂದ್ರ ಕುಶ್ವಾಹ ಅವರು ಪಕ್ಷಕ್ಕೆ ಗುಡ್ ಬೈ ಹೇಳಿದ್ದು, ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿ ಹಾಗೂ ಹೊಸ ರಾಜಕೀಯ ಸಂಘಟನೆಯ ರಚನೆ ಗರಿಗೆದರಿದೆ.

ಸಮತಾ ಪಕ್ಷದ ಮಾಜಿ ಸಂಸ್ಥಾಪಕ ಮತ್ತು ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅಥವಾ ಸಮಾಜವಾದಿ ನಾಯಕ ಮತ್ತು ಜೆಡಿಯು ಮಾಜಿ ಅಧ್ಯಕ್ಷ ಶರದ್ ಯಾದವ್ ಅವರ ಹೆಸರನ್ನು ಹೊಸ ಪಕ್ಷಕ್ಕೆ ಇಡಲಾಗುವುದು ಎಂದು ಕುಶ್ವಾಹಾ ಅವರ ಆಪ್ತರು ಭಾನುವಾರ ಹೇಳಿದ್ದಾರೆ. ಭಾನುವಾರ ಬೆಂಬಲಿಗರೊಂದಿಗೆ ನಡೆದ ಎರಡು ದಿನಗಳ ‘ಸಮಾಲೋಚನೆ’ ಸಭೆಯ ಮೊದಲ ಯೋಜನೆಯನ್ನು ಕುಶ್ವಾಹ ಸಾಕಾರಗೊಳಿಸಿದರು ಎಂದು ಹಿರಿಯ ಜೆಡಿಯು ನಾಯಕ ಮತ್ತು ಕುಶ್ವಾಹ ಅವರ ಆಪ್ತ ಸಹಾಯಕ ಫಜಲ್ ಇಮಾಮ್ ಮಲಿಕ್ ಅವರು ತಿಳಿಸಿದ್ದಾರೆ.

"ಕುಶ್ವಾಹಾ ಅವರು ತಮ್ಮ ಮುಂದಿನ ಕ್ರಮವನ್ನು ಪ್ರಕಟಿಸಲು ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ಕರೆದಿದ್ದಾರೆ ಎಂದು ಹೇಳಲಾಗಿದೆ. ಕುಶ್ವಾಹ ಅವರ ಹಿಂದಿನ ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್‌ಎಸ್‌ಪಿ) ಹಿರಿಯ ನಾಯಕರ ಪ್ರಕಾರ, ಹೊಸ ಸಂಘಟನೆಯ ಹೆಸರು 'ಜನತಾ ದಳ (ಜಾರ್ಜ್)' ಅಥವಾ 'ಜನತಾ ದಳ (ಶರದ್)' ಆಗಿರಬಹುದು ಎನ್ನಲಾಗಿದೆ. ಆದರೆ ಕುಶ್ವಾಹ ಬಣದ ಹಿರಿಯ ನಾಯಕರೊಬ್ಬರ ಪ್ರಕಾರ, 'ಹೆಸರು ಇನ್ನೂ ನಿರ್ಧಾರವಾಗಿಲ್ಲ. ಕುಶ್ವಾಹ್ ಅವರು ಹಿಂದಿನ ಸಮತಾ ಪಕ್ಷದ ಸಂಸ್ಥಾಪಕ ಮತ್ತು ಮೊದಲ ಜೆಡಿಯು ಅಧ್ಯಕ್ಷರಾಗಿದ್ದರಿಂದ ಜಾರ್ಜ್ ಅವರ ಹೆಸರನ್ನು ಸೇರಿಸಲು ಬಯಸಬಹುದು ಎಂದು ಹೇಳಿದ್ದಾರೆ.

ಇನ್ನು ಕುಶ್ವಾಹ್ ಅವರು ಮಾರ್ಚ್ 2021 ರಲ್ಲಿ ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಆಡಳಿತ ಪಕ್ಷಕ್ಕೆ ಹಿಂದಿರುಗಿದಾಗ ತಮ್ಮ RLSP ಪಕ್ಷವನ್ನು ಅನ್ನು JD(U) ನೊಂದಿಗೆ ವಿಲೀನಗೊಳಿಸಿದ್ದರು.

ಹೊಸ ಪಕ್ಷ ಸ್ಥಾಪನೆ ಹಿಂದೆ ಬಿಜೆಪಿ
ಇನ್ನು ಕುಶ್ವಾಹ ಅವರ ಕೆಲವು ಆಪ್ತರು ನೀಡಿರುವ ಮಾಹಿತಿಯಂತೆ ಕುಶ್ವಾಹ್ ಅವರು ತಮ್ಮದೇ ಆದ ಪಕ್ಷವನ್ನು ಹೊಂದಿದ್ದರೆ, ರಾಜ್ಯದ 40 ಲೋಕಸಭಾ ಸ್ಥಾನಗಳಲ್ಲಿ ಕೆಲವನ್ನು ಅವರ ಹೊಸ ಪಕ್ಷಕ್ಕೆ ಬಿಟ್ಟುಕೊಡುವುದಾಗಿ ಬಿಜೆಪಿ ಅವರಿಗೆ ಭರವಸೆ ನೀಡಿದೆ ಎಂದು ಹೇಳಲಾಗಿದೆ. 

ಜೆಡಿಯು ಟೀಕೆ
ಇತ್ತ ಕುಶ್ವಾಹ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಅಲಿಯಾಸ್ ಲಾಲನ್ ಸಿಂಗ್ ಅವರು ಬಿಜೆಪಿ ನಾಯಕರನ್ನು ಭೇಟಿ ಮಾಡಲು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿರುವುದು ಫಲಪ್ರದವಾಗಿದೆಯೇ ಎಂದು ಬಹಿರಂಗಪಡಿಸುವಂತೆ ಭಾನುವಾರ ಅವರನ್ನು ಕೇಳಿದ್ದಾರೆ. ಕುಶ್ವಾಹಾ ಅವರ ಬೆಂಬಲಿಗರ ಸಮಾವೇಶವನ್ನು ಅಧಿಕೃತ ಜೆಡಿಯು ಸಭೆಯಲ್ಲ ಎಂದು ಹೇಳಿದ ಲಲನ್, ಅಂತಹ ಸಭೆಯನ್ನು ಕರೆಯುವ ಅಧಿಕಾರ ರಾಜ್ಯ ಪಕ್ಷದ ಮುಖ್ಯಸ್ಥರಿಗೆ ಮಾತ್ರ ಇದೆ ಎಂದು ಹೇಳಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com