ರಸ್ತೆ ಅಪಘಾತ: ಕೇರಳ ಗೃಹ ಕಾರ್ಯದರ್ಶಿ ವಿ.ವೇಣು ಸೇರಿ 8 ಮಂದಿಗೆ ಗಾಯ

ರಸ್ತೆ ಅಪಘಾತವೊಂದರಲ್ಲಿ ಕೇರಳದ ಗೃಹ ಕಾರ್ಯದರ್ಶಿ ವಿ ವೇಣು, ಅವರ ಪತ್ನಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಸೇರಿ 8 ಮಂದಿ ಗಾಯಗೊಂಡಿರುವ ಘಟನೆ ಆಲಪ್ಪುಳದ ಕಾಯಂಕುಲಂ ಬಳಿಯ ಕೊಟ್ಟಂಕುಲಂಗರಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ನಡೆದಿದೆ.
ಅಪಘಾತಕ್ಕೀಡಾಗಿರುವ ಕಾರು.
ಅಪಘಾತಕ್ಕೀಡಾಗಿರುವ ಕಾರು.
Updated on

ಅಲಪ್ಪುಳ: ರಸ್ತೆ ಅಪಘಾತವೊಂದರಲ್ಲಿ ಕೇರಳದ ಗೃಹ ಕಾರ್ಯದರ್ಶಿ ವಿ ವೇಣು, ಅವರ ಪತ್ನಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಸೇರಿ 8 ಮಂದಿ ಗಾಯಗೊಂಡಿರುವ ಘಟನೆ ಆಲಪ್ಪುಳದ ಕಾಯಂಕುಲಂ ಬಳಿಯ ಕೊಟ್ಟಂಕುಲಂಗರಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸೋಮವಾರ ನಡೆದಿದೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೇಣು ಅವರು ಕೊಚ್ಚಿ ಮುಜಿರಿಸ್ ಬಿನಾಲೆ ಕಲಾ ಪ್ರದರ್ಶನಕ್ಕೆ ಭೇಟಿ ನೀಡಿ ತಿರುವನಂತಪುರಕ್ಕೆ ಹಿಂತಿರುಗುತ್ತಿದ್ದರು ಎಂದು ಕಾಯಂಕುಲಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆಂಕಾಸಿಯಿಂದ ಅಕ್ಕಿ ಮೂಟೆಗಳ ಹೊತ್ತು ಕೊಚ್ಚಿಗೆ ಬರುತ್ತಿದ್ದ ಲಾರಿಗೆ ವೇಣು ಅವರ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ವೇಣು, ಅವರ ಪತ್ನಿ ಶಾರದಾ, ಪುತ್ರ ಶಬರಿ, ಸಂಬಂಧಿಕರಾದ ಪ್ರಣವ್ ಮತ್ತು ಸೌರಭ್ ಮತ್ತು ಚಾಲಕ ಅಭಿಲಾಷ್ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಗಾಯಗೊಂಡಿರುವ ಎಲ್ಲರನ್ನೂ ತಿರುವಲ್ಲಾ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವೇಣು ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com