ಭಾರತೀಯ ಸೇನೆ ವಿರುದ್ಧ ಟ್ವೀಟ್​: ಶೆಹ್ಲಾ ರಶೀದ್ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ

ಭಾರತೀಯ ಸೇನೆಯ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಮತ್ತು ಎಐಎಸ್‌ಎ ಸದಸ್ಯೆ ಶೆಹ್ಲಾ ರಶೀದ್ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮಂಗಲವಾರ ಅನುಮತಿ ನೀಡಿದ್ದಾರೆ.
ಶೆಹ್ಲಾ ರಶೀದ್
ಶೆಹ್ಲಾ ರಶೀದ್

ನವದೆಹಲಿ: ಭಾರತೀಯ ಸೇನೆಯ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷೆ ಮತ್ತು ಎಐಎಸ್‌ಎ ಸದಸ್ಯೆ ಶೆಹ್ಲಾ ರಶೀದ್ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮಂಗಳವಾರ ಅನುಮತಿ ನೀಡಿದ್ದಾರೆ.

ಅಡ್ವೊಕೇಟ್ ಅಲಾಖ್ ಅಲೋಕ್ ಶ್ರೀವಾಸ್ತವ ಅವರು ಮಾಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 153 ಎ ಅಡಿಯಲ್ಲಿ ಸೆಪ್ಟೆಂಬರ್ 3, 2019 ರ ಎಫ್‌ಐಆರ್‌ಗೆ ಈ ಪ್ರಾಸಿಕ್ಯೂಷನ್ ಮಂಜೂರಾತಿಗೆ ಸಂಬಂಧಿಸಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಮಾಹಿತಿ ನೀಡಿದೆ.

ಶೆಹ್ಲಾ ರಶೀದ್ ವಿರುದ್ಧ ದೆಹಲಿ ಪೊಲೀಸರ ವಿಶೇಷ ದೇಶದ್ರೋಹಿ ಪ್ರಕರಣ ದಾಖಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಮಂಜೂರಾತಿ ಅನ್ವಯಿಸುತ್ತದೆ.

ಆಗಸ್ಟ್ 2019ರಂದು ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಮಾಜಿ ಉಪಾಧ್ಯಕ್ಷೆ ಶೆಹ್ಲಾ ರಶೀದ್ ಅವರು ಸರಣಿ ಟ್ವೀಟ್‌ಗಳಲ್ಲಿ ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪವನ್ನು ಮಾಡಿದ್ದಾರೆ ಹಾಗೂ ದ್ವೇಷವನ್ನು ಸೃಷ್ಟಿಸುವ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಲಾಗಿತ್ತು.

ಜಮ್ಮು-ಕಾಶ್ಮೀರ ಜನರಿಗೆ ಭಾರತೀಯ ಸೇನೆಯು ಚಿತ್ರಹಿಂಸೆ ನೀಡಿದ್ದಾರೆ ಎಂದು ಶೆಹ್ಲಾ ರಶೀದ್ ಆರೋಪಿಸಿದ್ದರು.

ಶೋಪಿಯಾನ್‌ನಲ್ಲಿ 4 ಜನರನ್ನು ಸೇನಾ ಶಿಬಿರಕ್ಕೆ ಕರೆಸಲಾಯಿತು ಮತ್ತು ಚಿತ್ರಹಿಂಸೆ ವಿಚಾರಣೆಗೆ ಒಳಪಡಿಸಲಾಯಿತು (ಚಿತ್ರಹಿಂಸೆ). ಅವರ ಕಿರುಚಾಟ ಇಡೀ ಕಾಶ್ಮೀರದ ಪ್ರದೇಶಕ್ಕೆ ಕೇಳುವಂತೆ ಅವರ ಹತ್ತಿರ ಮೈಕ್ ಅನ್ನು ಇರಿಸಲಾಗಿತ್ತು. ಇದು ಇಡೀ ಪ್ರದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ ಎಂದು ಟ್ವೀಟ್ ಮಾಡಿದ್ದರು.ಭಾರತೀಯ ಸೇನೆಯು ಈ ಹೇಳಿಕೆಯನ್ನು ತಿರಸ್ಕರಿಸಿತ್ತು. ಶೆಹ್ಲಾ ರಶೀದ್ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿತ್ತು.

ಇಂತಹ ನಕಲಿ ಸುದ್ದಿಗಳನ್ನು ಅನುಮಾನಾಸ್ಪದ ಜನರನ್ನು ಪ್ರಚೋದಿಸಲು ವಿರೋಧಿ ಅಂಶಗಳು ಮತ್ತು ಸಂಸ್ಥೆಗಳು ಹರಡುತ್ತವೆ ಎಂದು ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com