74ನೇ ಗಣರಾಜ್ಯೋತ್ಸವ: ವಿಭಿನ್ನ ಕಲಾಕೃತಿ ಮೂಲಕ ಭಾರತೀಯರಿಗೆ ಶುಭಾಶಯ ಕೋರಿದ ಗೂಗಲ್ ಡೂಡಲ್

ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ವಿಶೇಷ ಸಂದರ್ಭದಲ್ಲಿ ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ರಚಿಸಿ ಭಾರತೀಯರಿಗೆ ಶುಭಾಶಯಗಳನ್ನು ಕೋರಿದೆ.
ಗೂಗಲ್ ಡೂಡಲ್
ಗೂಗಲ್ ಡೂಡಲ್
Updated on

ನವದೆಹಲಿ: ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಈ ವಿಶೇಷ ಸಂದರ್ಭದಲ್ಲಿ ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ರಚಿಸಿ ಭಾರತೀಯರಿಗೆ ಶುಭಾಶಯಗಳನ್ನು ಕೋರಿದೆ.

ಗುಜರಾತ್​ನ ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು, ಭಾರತದ ಗಣರಾಜ್ಯೋತ್ಸವದ ಅಂಗವಾಗಿ ರಚಿಸಿದ ಕಾಗದದ ಕಲಾಕೃತಿಯ ವಿಡಿಯೋವನ್ನು ಗೂಗಲ್ ಹಂಚಿಕೊಂಡಿದೆ.

1950 ಜನವರಿ 26 ರಂದು ಭಾರತವು ಸಂವಿಧಾನದ ಅಂಗೀಕಾರದೊಂದಿಗೆ ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿಕೊಂಡಿತು. ಈ ಶುಭ ದಿನವನ್ನು ಗೂಗಲ್​ ಡೂಡಲ್ ಕೂಡ ನೆನಪಿಸಿಕೊಂಡು ದೇಶದ ಜನತೆಗೆ ಶುಭಕೋರಿದೆ.

ಗೂಗಲ್​ ತನ್ನ ಮುಖಪುಟದಲ್ಲಿ ಹಂಚಿಕೊಂಡ ಕಲಾಕೃತಿಯನ್ನು ಕೈಗಳಿಂದ ಕತ್ತರಿಸಿದ ಕಾಗದದಿಂದ ರಚಿಸಲಾಗಿದೆ. ಇದರಲ್ಲಿ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ಸಿಆರ್‌ಎಫ್‌ಪಿ ಕವಾಯತು ತಂಡ ಮತ್ತು ಮೋಟಾರ್‌ಸೈಕಲ್ ಸವಾರರು ಸೇರಿದಂತೆ ಗಣರಾಜ್ಯೋತ್ಸವದ ಪರೇಡ್‌ನ ಹಲವು ಅಂಶಗಳನ್ನು ಕಾಣಬಹುದಾಗಿದೆ.

ಈ ನಡುವೆ ದೇಶದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕರ್ತವ್ಯ ಪಥದಲ್ಲಿ ಆಕರ್ಷಕ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವ ಪ್ರದರ್ಶನ ನಡೆಯಲಿದೆ. ವಿವಿಧ ರಾಜ್ಯಗಳ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಪ್ರತಿನಿಧಿಸುವ ಟ್ಯಾಬ್ಲೋಗಳ ಮೆರವಣಿಗೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com