ಮೂತ್ರ ವಿಸರ್ಜನೆ ಪ್ರಕರಣ: ಮಧ್ಯಪ್ರದೇಶದ ಸಿಎಂ ಕಾಲು ತೊಳೆದ ನಂತರ ಸಂತ್ರಸ್ತನನ್ನು ಶುದ್ಧೀಕರಿಸಿದ ಕಾಂಗ್ರೆಸ್ಸಿಗರು

ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿವಾಸದಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ 'ಕಾಲು ತೊಳೆಯುವ' ಸಂಚಿಕೆ ನಂತರ, ಸಿಧಿ ಜಿಲ್ಲೆಯ ತನ್ನ ಮನೆಗೆ ಮರಳಿದ ನಂತರ ಮೂತ್ರ ವಿಸರ್ಜನೆ ಪ್ರಕರಣದ ಸಂತ್ರಸ್ತ ದಶಮತ್ ರಾವತ್ ಅವರನ್ನು ಕಾಂಗ್ರೆಸ್ 'ಶುದ್ಧೀಕರಣ' ನಡೆಸಿತು.
ಮೂತ್ರ ವಿಸರ್ಜನೆ ಪ್ರಕರಣದ ಸಂತ್ರಸ್ತನಿಗೆ ಶುದ್ಧೀಕರಣ ಮಾಡಿದ ಕಾಂಗ್ರೆಸ್
ಮೂತ್ರ ವಿಸರ್ಜನೆ ಪ್ರಕರಣದ ಸಂತ್ರಸ್ತನಿಗೆ ಶುದ್ಧೀಕರಣ ಮಾಡಿದ ಕಾಂಗ್ರೆಸ್

ಭೋಪಾಲ್: ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿವಾಸದಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ 'ಕಾಲು ತೊಳೆಯುವ' ಸಂಚಿಕೆ ನಂತರ, ಸಿಧಿ ಜಿಲ್ಲೆಯ ತನ್ನ ಮನೆಗೆ ಮರಳಿದ ನಂತರ ಮೂತ್ರ ವಿಸರ್ಜನೆ ಪ್ರಕರಣದ ಸಂತ್ರಸ್ತ ದಶಮತ್ ರಾವತ್ ಅವರನ್ನು ಕಾಂಗ್ರೆಸ್ 'ಶುದ್ಧೀಕರಣ' ನಡೆಸಿತು.

ಸ್ಥಳೀಯ ಕಾಂಗ್ರೆಸ್ ನಾಯಕ ಜ್ಞಾನ್ ಸಿಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಸಿಧಿ ಜಿಲ್ಲಾ ಕೇಂದ್ರದಿಂದ 25 ಕಿಮೀ ದೂರದಲ್ಲಿರುವ ದಶಮತ್ ಅವರ ನಿವಾಸಕ್ಕೆ ತೆರಳಿ ಗಂಗಾಜಲದೊಂದಿಗೆ 'ಶುದ್ಧೀಕರಣ' ಮಾಡಿದರು.

ಕುಟುಂಬ ಸದಸ್ಯರು ಮತ್ತು ಕಾಂಗ್ರೆಸ್ ಬೆಂಬಲಿಗರ ಉಪಸ್ಥಿತಿಯ ನಡುವೆ ಶುದ್ಧೀಕರಣ ನಡೆಯಿತು ಮತ್ತು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗಿದೆ.

ವಿಡಿಯೋದಲ್ಲಿ, ಜ್ಞಾನ್ ಸಿಂಗ್ ಅವರು ಗಂಗಾಜಲದೊಂದಿಗೆ 'ಶುದ್ಧೀಕರಣ'ವನ್ನು ಮಾಡಲು ದಶಮತ್ ಅವರು ಅವಕಾಶ ನೀಡುವಂತೆ ವಿನಂತಿಸುವುದನ್ನು ಕೇಳಬಹುದು. 'ನಿಮ್ಮ ಅನುಮತಿಯೊಂದಿಗೆ ನಾನು ಶುದ್ಧೀಕರಣವನ್ನು ಮಾಡಲು ಬಯಸುತ್ತೇನೆ. ನಾನು (ಜ್ಞಾನ್ ಸಿಂಗ್) ರಾಹುಲ್ ಭಯಾ (ಅಜಯ್ ಸಿಂಗ್) ಮತ್ತು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮೊಂದಿಗಿದ್ದೇವೆ. ಯಾರೂ ನಿಮ್ಮನ್ನು ನೋಯಿಸುವುದಿಲ್ಲ ಮತ್ತು ನಿಮ್ಮ ಮನೆಯನ್ನು ನಿರ್ಮಿಸಲಾಗುತ್ತದೆ. ದಯವಿಟ್ಟು ನನಗೆ ಶುದ್ಧೀಕರಣ ಮಾಡಲು ಅನುಮತಿಸಿ ಎನ್ನುತ್ತಾರೆ. ಅದಕ್ಕೆ ದಶಮತ್ ಒಪ್ಪಿಗೆ ಸೂಚಿಸಿದರು' ಎಂದು ಜ್ಞಾನ್ ಸಿಂಗ್ ಹೇಳಿದರು.

'ಶುದ್ಧೀಕರಣ' ಮಾಡಿದ ನಂತರ ಜ್ಞಾನ್ ಸಿಂಗ್, ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು. 'ಸಿಎಂ ದಶಮತ್ ಅವರ ಕಾಲುಗಳನ್ನು ತೊಳೆದರು. ಆದರೆ, ಅವರ ಮುಖ ಮತ್ತು ತಲೆಯನ್ನು ತೊಳೆಯಲಿಲ್ಲ. (ಆರೋಪಿ ಪ್ರವೇಶ ಶುಕ್ಲಾ ದಶಮತ್ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ) ಆದ್ದರಿಂದ ನಾನು ಅವರ ಮುಖದ ಶುದ್ಧೀಕರಣವನ್ನು ಮಾಡಿದ್ದೇನೆ' ಎಂದು ಹೇಳಿದರು.

ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ತನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ ತಪ್ಪಿನ ಅರಿವಾಗಿದ್ದು, ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸಂತ್ರಸ್ತ ಬುಡಕಟ್ಟು ಜನಾಂಗದ ವ್ಯಕ್ತಿ ರಾಜ್ಯ ಸರ್ಕಾರವನ್ನು ಶುಕ್ರವಾರ ಒತ್ತಾಯಿಸಿದ್ದಾರೆ.

'ರಾಜ್ಯ ಸರ್ಕಾರಕ್ಕೆ ನನ್ನ ಬೇಡಿಕೆ ಏನೆಂದರೆ, ಅವರಿಂದ (ಆರೋಪಿ) ತಪ್ಪಾಗಿದೆ. ಈಗ ಪ್ರವೇಶ್ ಶುಕ್ಲಾ ಅವರನ್ನು ಬಿಡುಗಡೆ ಮಾಡಬೇಕು. ಈ ಹಿಂದೆ ಏನೇ ಮಾಡಿದ್ದರೂ, ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ. ಅವರು ನನ್ನ ಗ್ರಾಮದ ಬ್ರಾಹ್ಮಣರು' ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈಮಧ್ಯೆ, ಮೂತ್ರ ವಿಸರ್ಜನೆ ಘಟನೆಯ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಸೃಷ್ಟಿಸಲಾಗುತ್ತಿದೆ ಮತ್ತು ವಿಡಿಯೋದಲ್ಲಿರುವ ಸಂತ್ರಸ್ತ ದಶಮತ್ ಅಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು ಸಿಧಿ ಜಿಲ್ಲಾ ಎಸ್ಪಿ ರವೀಂದ್ರ ವರ್ಮಾ ಹೇಳಿದ್ದಾರೆ. 

'ಕೆಲವು ಸುದ್ದಿ ವಾಹಿನಿಗಳು ವಿಡಿಯೋದಲ್ಲಿ ಕಾಣುತ್ತಿರುವವರು ದಶಮತ್ ರಾವತ್ ಅಲ್ಲ ಎಂದು ತಪ್ಪು ಸುದ್ದಿಯನ್ನು ನೀಡುತ್ತಿದ್ದಾರೆ. ಆದರೆ, ಪೊಲೀಸ್ ತನಿಖೆಯು ವಿಡಿಯೋದಲ್ಲಿ ಕಾಣುವ ವ್ಯಕ್ತಿ ದಶಮತ್ ರಾವತ್ ಎಂದು ದೃಢಪಡಿಸಿದೆ' ಎಂದು ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com