ಭಾರತದ ಪಾನಿಪುರಿಗೆ ಮನಸೋತ ಗೂಗಲ್‌: ಡೂಡಲ್‌ ಮೂಲಕ ಗೌರವ ಸಲ್ಲಿಕೆ

ಟೆಕ್​ ದೈತ್ಯ ಕಂಪನಿ ಗೂಗಲ್ ಭಾರತದ ಪಾನಿಪುರಿಗೆ ಮನಸೋತಿದ್ದು, ಡೂಡಲ್ ಮೂಲಕ ಪಾನಿಪುರಿಗೆ ವಿಶೇಷ ಗೌರವ ಸಲ್ಲಿಸಿದೆ.
ಪಾನಿಪುರಿಗೆ ಡೂಡಲ್ ಬಿಡಿಸಿರುವ ಗೂಗಲ್.
ಪಾನಿಪುರಿಗೆ ಡೂಡಲ್ ಬಿಡಿಸಿರುವ ಗೂಗಲ್.

ನವದೆಹಲಿ: ಟೆಕ್​ ದೈತ್ಯ ಕಂಪನಿ ಗೂಗಲ್ ಭಾರತದ ಪಾನಿಪುರಿಗೆ ಮನಸೋತಿದ್ದು, ಡೂಡಲ್ ಮೂಲಕ ಪಾನಿಪುರಿಗೆ ವಿಶೇಷ ಗೌರವ ಸಲ್ಲಿಸಿದೆ.

ಆಲೂಗಡ್ಡೆ, ಕ್ಯಾರೆಟ್​ ಹಾಗೂ ಮಸಾಲೆ ನೀರಿನಿಂದ ತುಂಬಿದ ಗರಿಗಿರಿಯಾದ ಪುರಿ ದಕ್ಷಿಣ ಏಷ್ಯಾದ ಬೀದಿಬದಿಯ ಜನಪ್ರಿಯ ಖಾದ್ಯ. ಇಂದು ಜನಪ್ರಿಯ ಖಾದ್ಯವಾದ ಪಾನಿಪುರಿ ದಿನವಾಗಿದ್ದು. ಈ ಹಿನ್ನೆಲೆಯಲ್ಲಿ ಗೂಗಲ್ ಗೌರವ ಸಲ್ಲಿಸಿದೆ.

2015ರ ಜುಲೈ 12ರಂದು ಮಧ್ಯಪ್ರದೇಶದ ಇಂದೋರ್‌ನ ರೆಸ್ಟೋರೆಂಟ್‌ವೊಂದು ತನ್ನ ಗ್ರಾಹಕರಿಗಾಗಿ 51 ವಿವಿಧ ರೀತಿಯ ಪಾನಿಪುರಿಗಳನ್ನು ತಯಾರಿಸಿತು. ಅಲ್ಲಿ ತಯಾರಿಸಲಾಗಿದ್ದ ಅಷ್ಟೂ ಪಾನಿಪುರಿಗಳು ಅತ್ಯಂತ ರುಚಿಕರವಾಗಿದ್ದರಿಂದ ಗೋಲ್ಡನ್​ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ನಲ್ಲಿ ಸ್ಥಾನ ನೀಡಲಾಗಿತ್ತು. ಅಂದಿನಿಂದ ಜುಲೈ 12 ಅನ್ನು 'ಪಾನಿಪುರಿ ದಿನ' ಎಂದು ಕರೆಯಲಾಗುತ್ತಿದೆ. ಇದೀಗ ಎಂಟು ವರ್ಷಗಳ ನಂತರ ಗೂಗಲ್ ಪಾನಿಪುರಿ ದಿನಾಚರಿಸುತ್ತಿದ್ದು, ಪಾನಿಪುರಿ ಗೇಮ್ ರಚಿಸಿದೆ.

ಗೂಗಲ್​ ಡೂಡಲ್​ ಪಾನಿಪುರಿ ಗೇಮ್​ ಆಡುವುದು ಹೇಗೆ...?

  • WWW.Google.Com ಸರ್ಚ್‌ ಮಾಡ.
  • ನಂತರ ಕಂಪ್ಯೂಟರ್‌ ಅಥವಾ ಮೊಬೈಲ್‌ ಮೇಲೆ ಗೇಮ್‌ ಗೋಚರವಾಗುತ್ತದೆ
  • ಬಳಿಕ ಗೇಮ್‌ ಮೇಲೆ ಕ್ಲಿಕ್‌ ಮಾಡಿ
  • ಆಗ Timed ಹಾಗೂ Relaxed ಎಂಬ ಆಪ್ಶನ್‌ ಸಿಗುತ್ತವೆ, ಯಾವುದಾದರೂ ಒಂದನ್ನು ಆಯ್ಕೆ ಮಾಡಿ
  • ಬಳಿಕ ಪಾನಿ ಪುರಿ ಜೋಡಿಸುತ್ತ ಗೇಮ್‌ ಆಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com