ಚಂದ್ರಯಾನ ಪಯಣ: ಆಗಸ್ಟ್ 15, 2003 ರಿಂದ ಜುಲೈ 14, 2023 ರವರೆಗೆ.... ಪ್ರಮುಖ ಹಂತಗಳು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ ಉಪಗ್ರಹ ಉಡಾವಣೆಯ ಪಯಣ ಹೀಗಿದೆ: 
ಇಸ್ರೊ ಚಂದ್ರಯಾನ
ಇಸ್ರೊ ಚಂದ್ರಯಾನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ ಉಪಗ್ರಹ ಉಡಾವಣೆಯ ಪಯಣ ಹೀಗಿದೆ: 

ಆಗಸ್ಟ್ 15, 2003: ಅಂದಿನ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಚಂದ್ರಯಾನ ಉಡಾವಣೆ ಕಾರ್ಯಕ್ರಮವನ್ನು ಘೋಷಿಸಿದರು.

ಅಕ್ಟೋಬರ್ 22, 2008: ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-1 ಉಡ್ಡಯನ.

ನವೆಂಬರ್ 8, 2008: ಚಂದ್ರಯಾನ-1 ಚಂದ್ರನ ವರ್ಗಾವಣೆ ಪಥವನ್ನು ಪ್ರವೇಶಿಸಿತು.

ನವೆಂಬರ್ 14, 2008: ಚಂದ್ರನ ದಕ್ಷಿಣ ಧ್ರುವದ ಬಳಿ ಅಪ್ಪಳಿಸಿ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳ ಉಪಸ್ಥಿತಿಯನ್ನು ದೃಢೀಕರಿಸುತ್ತದೆ.

ಆಗಸ್ಟ್ 28, 2009: ಇಸ್ರೋ ಪ್ರಕಾರ ಚಂದ್ರಯಾನ 1 ಕಾರ್ಯಕ್ರಮದ ಅಂತ್ಯ.

ಜುಲೈ 22, 2019: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ಉಡಾವಣೆ.

ಆಗಸ್ಟ್ 20, 2019: ಚಂದ್ರಯಾನ-2 ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಲಾಯಿತು.

ಸೆಪ್ಟೆಂಬರ್ 2, 2019: 100 ಕಿಲೋಮೀಟರ್ ಚಂದ್ರನ ಧ್ರುವ ಕಕ್ಷೆಯಲ್ಲಿ ಚಂದ್ರನನ್ನು ಸುತ್ತುತ್ತಿರುವಾಗ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿತು, ಆದಾಗ್ಯೂ, ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಯಿಂದ 2.1 ಕಿಮೀ ಎತ್ತರದಲ್ಲಿ ಸಂಪರ್ಕ ಕಡಿತಗೊಂಡಿದೆ.

ಜುಲೈ 14, 2023: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಕೇಂದ್ರದಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಉಡಾಯಿಸಲು ನಿರ್ಧಾರ

ಆಗಸ್ಟ್ 23/24, 2023: ಇಸ್ರೋ ವಿಜ್ಞಾನಿಗಳು ತಾತ್ಕಾಲಿಕವಾಗಿ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ನ್ನು ಆಗಸ್ಟ್ 23-24 ರೊಳಗೆ ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com