ವರುಣಾರ್ಭಟಕ್ಕೆ ದೆಹಲಿ ತತ್ತರ; ಯಮುನೆಯ ಉಗ್ರ ರೂಪ: ರಾಜ್ ಘಾಟ್ ಸಂಪೂರ್ಣ ಜಲಾವೃತ; ಸುಪ್ರಿಂ ಕೋರ್ಟ್ ಗೂ ನುಗ್ಗಿದ ನೀರು

ಯಮುನಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ರಾಷ್ಟ್ರ ರಾಜಧಾನಿ ತತ್ತರಿಸಿದೆ. ನಗರದ ಬಹುತೇಕ ಸ್ಥಳಗಳು ಜಲಾವೃತಗೊಂಡಿದ್ದು, ನೀರು ಸುಪ್ರೀಂ ಕೋರ್ಟ್‌ವರೆಗೂ ‌ತಲುಪಿದೆ.
ದೆಹಲಿ ರಸ್ತೆಗಳು ಜಲಾವೃತ
ದೆಹಲಿ ರಸ್ತೆಗಳು ಜಲಾವೃತ

ನವದೆಹಲಿ:ಯಮುನಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ರಾಷ್ಟ್ರ ರಾಜಧಾನಿ ತತ್ತರಿಸಿದೆ. ನಗರದ ಬಹುತೇಕ ಸ್ಥಳಗಳು ಜಲಾವೃತಗೊಂಡಿದ್ದು, ನೀರು ಸುಪ್ರೀಂ ಕೋರ್ಟ್‌ವರೆಗೂ ‌ತಲುಪಿದೆ.

ವರುಣನಾರ್ಭಟಕ್ಕೆ ರಾಷ್ಟ್ರ ರಾಜಧಾನಿ ತತ್ತರಿಸಿ ಹೋಗಿದ್ದು ಉಕ್ಕಿ ಹರಿಯುವ ಯಮುನಾ ನದಿ ಇನ್ನೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರಮುಖ ನಗರಗಳು ಮುಳುಗಡೆಯಾಗಿದೆ. ಅಷ್ಟು ಮಾತ್ರವಲ್ಲದೆ ನೀರಿನ ಪ್ರಮಾಣ ಸುಪ್ರೀಂ ಕೋರ್ಟ್ ವರೆಗೂ ತಲುಪಿದೆ.

ಉಕ್ಕಿ ಹರಿಯುತ್ತಿರುವ ಯಮುನಾ ನದಿಯ ನೀರು ರಾಷ್ಟ್ರ ರಾಜಧಾನಿಯನ್ನು ಜಲಾವೃತಗೊಳಿಸಿದ್ದರಿಂದ ದೆಹಲಿ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿದೆ. ಒಂದು ದಿನದ ಹಿಂದೆಯಷ್ಟೇ ಐತಿಹಾಸಿಕ ಕೆಂಪುಕೋಟೆಗೂ ನುಗ್ಗಿದ ನೀರು ಇಂದು ನಗರದ ಮಧ್ಯಭಾಗದಲ್ಲಿರುವ ಸುಪ್ರೀಂ ಕೋರ್ಟ್‌,  ಆದಾಯ ತೆರಿಗೆ ಕಚೇರಿ ಹಾಗೂ ರಾಜ್ ಘಾಟ್ ವರೆಗೂ ಬಂದುಬಿಟ್ಟಿದೆ.

ಬೆಳಿಗ್ಗೆ 6 ಗಂಟೆಗೆ ಯಮುನಾ ನೀರಿನ ಮಟ್ಟವು 208.46 ಮೀಟರ್‌ಗಳಷ್ಟಿತ್ತು, ಗುರುವಾರ ರಾತ್ರಿ 208.66 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಇಂದು ನೀರಿನ ಮಟ್ಟ ಕುಸಿಯಲಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ 208.30 ಮೀಟರ್ ತಲುಪಬಹುದು ಎಂದು ಕೇಂದ್ರ ಜಲ ಆಯೋಗ ಮುನ್ಸೂಚನೆ ನೀಡಿದೆ.

ಪ್ರವಾಹದ ನೀರಿನಿಂದ ಐಟಿಓ ಮತ್ತು ರಾಜ್‌ಘಾಟ್‌ನಲ್ಲಿರುವ ಪ್ರದೇಶಗಳು ಮುಳುಗಡೆಯಾಗಿದ್ದು. ಅಷ್ಟು ಮಾತ್ರವಲ್ಲದೆ ನಗರದ ಮಧ್ಯ ಭಾಗದಲ್ಲಿರುವ ತಿಲಕ್ ಮಾರ್ಗ್ ಪ್ರದೇಶದಲ್ಲಿರುವ ಸುಪ್ರಿಂ ಕೋರ್ಟ್‌ಗೂ ಪ್ರವಾಹದ ನೀರು ತಲುಪಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸರಕಾರ ಸೂಚಿಸಿದೆ.

ಪ್ರವಾಹ ಸಮಸ್ಯೆಗೆ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ, ದೆಹಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್  ಆದ್ಯತೆ ಮೇರೆಗೆ ಸಮಸ್ಯೆ  ಬಗೆಹರಿಸಲು ಹಾಗೂ ತ್ವರಿತ ಪರಿಹಾರ ಕಂಡುಕೊಳ್ಳಲು ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು ಜೊತೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com