ಹಿಂಬದಿ ಕನ್ನಡಿ ನೋಡಿಕೊಂಡು ಪ್ರಧಾನಿ ಭಾರತೀಯ ಕಾರನ್ನು ಓಡಿಸುತ್ತಿದ್ದಾರೆ, ಅದು ಅಪಘಾತಕ್ಕೀಡಾಗುತ್ತಿದೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಅವರು ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ ಮತ್ತು ಯಾವಾಗಲೂ ತಮ್ಮ ವೈಫಲ್ಯಗಳಿಗೆ ಹಿಂದಿನವರನ್ನು ದೂರುತ್ತಾರೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಅವರು ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ ಮತ್ತು ಯಾವಾಗಲೂ ತಮ್ಮ ವೈಫಲ್ಯಗಳಿಗೆ ಹಿಂದಿನವರನ್ನು ದೂರುತ್ತಾರೆ ಎಂದು ತಿಳಿಸಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಜಾವಿಟ್ಸ್ ಸೆಂಟರ್‌ನಲ್ಲಿ ಭಾರತೀಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಒಡಿಶಾ ರೈಲು ಅಪಘಾತದಲ್ಲಿ ಮಡಿದವರಿಗೆ 60 ಸೆಕೆಂಡುಗಳ ಕಾಲ ಮೌನ ಆಚರಿಸಿದರು.

ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 270ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು ರೈಲ್ವೆ ಸುರಕ್ಷತೆಯಲ್ಲಿನ ಸಮಸ್ಯೆಗಳ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಕೆಲವೆಡೆ ಆಗ್ರಹ ಕೇಳಿಬಂದಿದೆ.

'ನನಗೆ ನೆನಪಿದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈಲು ಅಪಘಾತ ಸಂಭವಿಸಿತು. ಆಗ ಕಾಂಗ್ರೆಸ್ 'ಈಗ ರೈಲು ಅಪಘಾತಕ್ಕೀಡಾಗಲು ಬ್ರಿಟಿಷರು ಕಾರಣ' ಎಂದು ಹೇಳಲಿಲ್ಲ. ಬದಲಿಗೆ, ಕಾಂಗ್ರೆಸ್ ಸಚಿವರು 'ಇದು ನನ್ನ ಜವಾಬ್ದಾರಿ ಮತ್ತು ನಾನು ರಾಜೀನಾಮೆ ನೀಡುತ್ತೇನೆ' ಎಂದು ಹೇಳಿದರು. ಹಾಗಾಗಿ, ಇದು ನಮ್ಮ ಮನೆಯಲ್ಲಿ ಸಂಭವಿಸಿದ ಸಮಸ್ಯೆಯಾಗಿದೆ, ನಾವು ಮನ್ನಿಸುತ್ತೇವೆ ಮತ್ತು ವಾಸ್ತವವನ್ನು ನಾವು ಒಪ್ಪಿಕೊಳ್ಳುತ್ತಿಲ್ಲ' ಎಂದು ಕಾಂಗ್ರೆಸ್ ಸಚಿವರನ್ನು ಹೆಸರಿಸದೆ ರಾಹುಲ್ ಹೇಳಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಭವಿಷ್ಯದ ಬಗ್ಗೆ ಮಾತನಾಡಲು ಮತ್ತು ನೋಡಲು ಅಸಮರ್ಥವಾಗಿವೆ ಎಂದರು.

'ಅವರು (ಪ್ರಧಾನಿ ನರೇಂದ್ರ ಮೋದಿ) ಕಾರನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ... ಅದು ಭಾರತೀಯ ಕಾರು ಮತ್ತು ಅವರು ಹಿಂಬದಿಯ ಕನ್ನಡಿಯಲ್ಲಿ ನೋಡುತ್ತಾರೆ. ಆದರೆ, ಈ ಕಾರು ಏಕೆ ಅಪಘಾತಕ್ಕೀಡಾಗುತ್ತಿದೆ, ಮುಂದಕ್ಕೆ ಚಲಿಸುತ್ತಿಲ್ಲ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ. ಇದೇ ಕಲ್ಪನೆಯಲ್ಲಿಯೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿವೆ. ನೀವೆಲ್ಲರೂ ಸಚಿವರ, ಪ್ರಧಾನಿಗಳ ಮಾತುಗಳನ್ನು ಕೇಳುತ್ತೀರಿ. ಅವರು ಭವಿಷ್ಯದ ಬಗ್ಗೆ ಮಾತನಾಡುವುದನ್ನು ನೀವು ಎಂದಿಗೂ ಕಾಣುವುದಿಲ್ಲ, ಅವರು ಯಾವಾಗಲೂ ಗತಕಾಲದ ಬಗ್ಗೆ ಮಾತ್ರ ಮಾತನಾಡುತ್ತಾರೆ' ಎಂದು ಹೇಳಿದರು.

ಬಿಜೆಪಿ ಮತ್ತು ಆರೆಸ್ಸೆಸ್ ಭವಿಷ್ಯತ್ತನ್ನು ನೋಡುವ ಸಾಮರ್ಥ್ಯ ಹೊಂದಿಲ್ಲ. ಅವರು ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ಅವರು ಹಿಂದಿನದನ್ನು ಮಾತ್ರ ಮಾತನಾಡುತ್ತಾರೆ ಮತ್ತು ಅವರು ಯಾವಾಗಲೂ ಹಿಂದಿನ ಕಾಲದ್ಲಿ ನಡೆದಿದ್ದಕ್ಕಾಗಿ ಬೇರೆಯವರನ್ನು ದೂಷಿಸುತ್ತಾರೆ ಎಂದು ಅವರು ಹೇಳಿದರು.

ಭಾರತದಲ್ಲಿ ಎರಡು ಸಿದ್ಧಾಂತಗಳ ನಡುವೆ ಹೋರಾಟ ನಡೆಯುತ್ತಿದೆ. ಒಂದು ಕಾಂಗ್ರೆಸ್ ಪ್ರತಿನಿಧಿಸುತ್ತದೆ ಮತ್ತು ಇನ್ನೊಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರತಿನಿಧಿಸುತ್ತದೆ. ಈ ಹೋರಾಟವನ್ನು ವಿವರಿಸಲು ಸರಳವಾದ ಮಾರ್ಗವೆಂದರೆ ಒಂದು ಕಡೆ ಮಹಾತ್ಮ ಗಾಂಧಿ ಮತ್ತು ಇನ್ನೊಂದು ಬದಿಯಲ್ಲಿ ನಾಥೂರಾಂ ಗೋಡ್ಸೆ ಇದ್ದಾರೆ ಎಂದು ಅವರು ತಿಳಿಸಿದರು.

ಅವರು ಯುಎಸ್‌ನಲ್ಲಿ ಭಾರತೀಯ-ಅಮೆರಿಕನ್ ಸಮುದಾಯದವರು ಬದುಕಿದ ರೀತಿಯನ್ನು ಶ್ಲಾಘಿಸಿದರು.

ಭಾರತದಿಂದ ಹೊರಹೊಮ್ಮಿದ ಎಲ್ಲಾ ಮಹಾನ್ ವ್ಯಕ್ತಿಗಳಲ್ಲೂ ಕೆಲವು ಗುಣಗಳು ಇದ್ದವು. ಮೊದಲನೆಯದಾಗಿ, ಅವರು ಸತ್ಯವನ್ನು ಹುಡುಕಿದರು, ಪ್ರತಿನಿಧಿಸಿದರು ಮತ್ತು ಹೋರಾಡಿದರು. ಎರಡನೆಯದಾಗಿ, ಈ ಜನರೆಲ್ಲರೂ ವಿನಮ್ರರಾಗಿದ್ದರು ಮತ್ತು ಅವರಲ್ಲಿ ಯಾವುದೇ ಅಹಂಕಾರ ಇರಲಿಲ್ಲ. ಅಮೆರಿಕದಲ್ಲಿ ಭಾರತೀಯರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಮತ್ತು ಅದಕ್ಕಾಗಿಯೇ ಭಾರತೀಯರು ಇಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕಾಗಿ ನಾನು ನಿಮ್ಮನ್ನು ಗೌರವಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ ಎಂದು ರಾಹುಲ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com