ಕೋವಿನ್ ಪೋರ್ಟಲ್ ನಿಂದ ಡೇಟಾ ಸೋರಿಕೆ: ಅಪ್ರಾಪ್ತ ಸೇರಿ ಇಬ್ಬರ ಬಂಧನ

ಕೋವಿನ್ ಪೋರ್ಟಲ್‌ ನಿಂದ  ಡೇಟಾವನ್ನು ಸೋರಿಕೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕವು ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೋವಿನ್ ಪೋರ್ಟಲ್‌ ನಿಂದ  ಡೇಟಾವನ್ನು ಸೋರಿಕೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕವು ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿದೆ.

ಬಿಹಾರ ಮೂಲದ ಇಬ್ಬರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದು, ಇಬ್ಬರ ಪೈಕಿ ಓರ್ವ ಅಪ್ರಾಪ್ತ ಬಾಲಕನಾಗಿದ್ದಾನೆಂದು ತಿಳಿದುಬಂದಿದೆ.

ಆರೋಪಿಗಳು ಡೇಟಾ ಸೋರಿಕೆಗೆ ಟೆಲಿಗ್ರಾಂ ಆ್ಯಪ್ ಬಳಕೆ ಮಾಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಕೆಲವು ದಿನಗಳ ಹಿಂದಷ್ಟೇ ಕೋವಿನ್ ಪೋರ್ಟ್‌ನಲ್ಲಿದ್ದ ಉನ್ನತ ರಾಜಕಾರಣಿಗಳು ಸೇರಿದಂತೆ ಜನಸಾಮಾನ್ಯರ ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಹಾಗೂ ಇನ್ನಿತರ ವೈಯಕ್ತಿ ಮಾಹಿತಿಗಳು ಸೋರಿಕೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷಗಳ ನಾಯಕರು ಆಗ್ರಹಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯವು, ಕೋವಿನ್ ಪೋರ್ಟಲ್‌ನಲ್ಲಿನ ಎಲ್ಲ ದತ್ತಾಂಶಗಳು/ಮಾಹಿತಿಗಳು ಸುರಕ್ಷಿತವಾಗಿದೆ. ಯಾವುದು ಸೋರಿಕೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಅಲ್ಲದೆ, ಆಂತರಿಕ ವಿಚಾರಣಾ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿತ್ತು.

ಇದರಂತೆ ಈ ಸಂಬಂಧ ಪರಿಶೀಲನೆ ನಡೆಸುವಂತೆ ದೇಶದ ನೋಡಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್‌ಟಿ-ಇನ್'ಗೆ ಸೂಚನೆ ನೀಡಿತ್ತು.

ಕೋವಿಡ್-19 ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಲಸಿಕೆ ಪಡೆದುಕೊಂಡಿದ್ದ ದೇಶದ ಪ್ರತೀಯೊಬ್ಬರ ಮಾಹಿತಿ ಕೋವಿನ್ ಪೋರ್ಟಲ್ ನಲ್ಲಿ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com