ಜುಲೈ 4 ರಂದು ಭಾರತ ಆಯೋಜಿಸಿರುವ ಎಸ್‌ಸಿಒ ಶೃಂಗಸಭೆಯಲ್ಲಿ ಪುಟಿನ್, ಕ್ಸಿ ಜಿನ್‌ಪಿಂಗ್, ಶೆಹಬಾಜ್ ಷರೀಫ್ ಭಾಗಿ

ಜುಲೈ 4 ರಂದು ಭಾರತ ಆಯೋಜಿಸಿರುವ  ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಶೃಂಗಸಭೆ 2023 ರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾಗವಹಿಸುವ...
ವ್ಲಾಡಿಮಿರ್ ಪುಟಿನ್, ಪ್ರಧಾನಿ ಮೋದಿ
ವ್ಲಾಡಿಮಿರ್ ಪುಟಿನ್, ಪ್ರಧಾನಿ ಮೋದಿ

ನವದೆಹಲಿ: ಜುಲೈ 4 ರಂದು ಭಾರತ ಆಯೋಜಿಸಿರುವ  ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಶೃಂಗಸಭೆ 2023 ರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾಗವಹಿಸುವ ನಿರೀಕ್ಷೆಯಿದೆ.

ಶೃಂಗಸಭೆಯಲ್ಲಿ ಖುದ್ದಾಗಿ ಪಾಲ್ಗೊಳ್ಳಲು ಪುಟಿನ್ ದೆಹಲಿಗೆ ಆಗಮಿಸಲು ಸಿದ್ಧರಾಗಿದ್ದರು. ಆದರೆ, ಶೃಂಗಸಭೆಯು ವರ್ಚುವಲ್ ಮೂಲಕ ನಡೆಯಲಿದೆ ಎಂದು ಮೇ 30 ರಂದು ಘೋಷಿಸಿದ ನಂತರ ಪುಟಿನ್ ಅವರು ತಮ್ಮ ಯೋಜನೆಗಳನ್ನು ಬದಲಾಯಿಸಬೇಕಾಯಿತು. ಪುಟಿನ್ ಅವರು ಸಹ ವರ್ಚುವಲ್ ಮೂಲಕ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅಧ್ಯಕ್ಷ ಜಿನ್‍ಪಿಂಗ್ ಅವರು ಬೀಜಿಂಗ್‍ನಲ್ಲಿ ವಿಡಿಯೋ ಕಾನರೆನ್ಸ್ ಮೂಲಕ ಜುಲೈ 4 ರಂದು ಎಸ್‍ಸಿಒ ಮುಖ್ಯಸ್ಥರ ಮಂಡಳಿಯ 23 ನೇ ಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಪ್ರಮುಖ ಹೇಳಿಕೆಗಳನ್ನು ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ತಿಳಿಸಿದ್ದಾರೆ.

ಇನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕೂಡ ಪ್ರಧಾನಿ ಷರೀಫ್ ಭಾಗವಹಿಸುವಿಕೆಯನ್ನು ಖಚಿತಪಡಿಸಿದೆ.

ಎಸ್‍ಸಿಒ ಅನ್ನು 2001 ರಲ್ಲಿ ಶಾಂಘೈನಲ್ಲಿ ನಡೆದ ಶೃಂಗಸಭೆಯಲ್ಲಿ ರಷ್ಯಾ, ಚೀನಾ, ಕಿರ್ಗಿಜ್ ರಿಪಬ್ಲಿಕ್ , ಕಝಾಕಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷರು ಸ್ಥಾಪಿಸಿದರು. ಭಾರತ ಮತ್ತು ಪಾಕಿಸ್ತಾನವು 2017 ರಲ್ಲಿ ಅದರ ಖಾಯಂ ಸದಸ್ಯ ರಾಷ್ಟ್ರಗಳಾಗಿವೆ. ಈ ವರ್ಷ ಎಸ್‍ಸಿಒ ಶೃಂಗಸಭೆಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಒಲಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com