ವಿವಾಹೇತರ ಸಂಬಂಧವನ್ನು ವಿರೋಧಿಸಿದ ಪತ್ನಿ, 3 ವರ್ಷದ ಮಗಳನ್ನು ಕೊಂದ ವ್ಯಕ್ತಿ!

ತನ್ನ ಗೆಳತಿಯನ್ನು ಮದುವೆಯಾಗಲು ಆಶಿಶ್ ಸಾಂಗ್ವಾನ್ ಎಂಬಾತ ತನ್ನ ಪತ್ನಿ ಜ್ಯೋತಿ ಮತ್ತು ಎರಡು ವರ್ಷದ ಮಗಳು ಭವ್ಯಳನ್ನು ಕೊಂದು ಶವಗಳನ್ನು ಗಂಗಾನಹರ್‌ನಲ್ಲಿ ಎಸೆದಿದ್ದಾನೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೀರತ್: ತನ್ನ ಗೆಳತಿಯನ್ನು ಮದುವೆಯಾಗಲು ಆಶಿಶ್ ಸಾಂಗ್ವಾನ್ ಎಂಬಾತ ತನ್ನ ಪತ್ನಿ ಜ್ಯೋತಿ ಮತ್ತು ಎರಡು ವರ್ಷದ ಮಗಳು ಭವ್ಯಳನ್ನು ಕೊಂದು ಶವಗಳನ್ನು ಗಂಗಾನಹರ್‌ನಲ್ಲಿ ಎಸೆದಿದ್ದಾನೆ. 

ಪ್ರಕರಣ ಸಂಬಂಧ ಬುಧವಾರ ರಾತ್ರಿ ಪತಿ ಆಶಿಶ್‌ನನ್ನು ಪೊಲೀಸರು ಹಿರಾತಾಸ್‌ಗೆ ಕರೆದೊಯ್ದಿದ್ದು, ಆತನನ್ನು ತೀವ್ರವಾಗಿ ವಿಚಾರಣೆ ನಡೆಸಿದ ಬಳಿಕ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ದೊಣ್ಣೆಯಿಂದ ಜ್ಯೋತಿಯ ತಲೆಗೆ ಹೊಡೆದು ನಂತರ ಭವ್ಯಳ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ. 

ತಾಯಿ-ಮಗಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿಯೂ ಕೊಲೆಯ ಸೂಚನೆಗಳಿವೆ ಎಂದು ಎಸ್ ಪಿ ಅನಿರುದ್ಧ್ ಸಿಂಗ್ ಹೇಳಿದ್ದಾರೆ. ಕೊಲೆಯ ನಂತರ ದೇಹಗಳನ್ನು ಕಾಲುವೆ ಮತ್ತು ಹಿಂಡನ್ ನದಿಗೆ ಪ್ರತ್ಯೇಕವಾಗಿ ಎಸೆದಿದ್ದನು ಎಂದು ಎಸ್ಪಿ ತಿಳಿಸಿದ್ದಾರೆ.

ಮೊದಲಿಗೆ ಜ್ಯೋತಿ ಮತ್ತು ಭವ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಆರೋಪಿ ತನ್ನ ಅತ್ತೆ-ಮಾವನಿಗೆ ದೂರವಾಣಿ ಮೂಲಕ ತಿಳಿಸಿದ್ದನು. ಪುರೋಹಿತರ ಸಲಹೆಯ ಮೇರೆಗೆ ಗಂಗಾನಹರ್ ನಲ್ಲಿ ಪೂಜೆ ಮಾಡಲು ಕುಟುಂಬ ಸಮೇತ ಬಂದಿದ್ದು ಈ ವೇಳೆ ಕಾಲು ಜಾರಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದರು ಎಂದು ಹೇಳಿದ್ದನು. 

ಭೋಲಾ ಝಲ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದರೆ ಘಟನೆ ನಡೆದ ಸ್ಥಳದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಬಾಗ್‌ಪತ್‌ನ ಹಿಂಡನ್ ನದಿಯ ಪೊದೆಯೊಂದರಲ್ಲಿ ಜ್ಯೋತಿಯ ಮೃತದೇಹ ಸಿಕ್ಕಿಬಿದ್ದಿತ್ತು.

ತನಗೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿದ್ದು, ಈ ವಿಚಾರ ಆತನ ಪತ್ನಿಗೆ ತಿಳಿದಿತ್ತು ಎಂದು ಕುಮಾರ್ ಪೊಲೀಸರಿಗೆ ತಿಳಿಸಿದ್ದಾಗಿ ಎಸ್ಪಿ ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಅವರು ಸಾಕಷ್ಟು ಜಗಳವಾಡುತ್ತಿದ್ದರು ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com