ದೆಹಲಿ ನೂತನ ಸಚಿವ ಅತಿಶಿಗೆ ಮನೀಶ್ ಸಿಸೋಡಿಯಾ ಬಂಗಲೆ ಹಂಚಿಕೆ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧಿನಕ್ಕೊಳಗಾಗಿ ಹದಿನೈದು ದಿನಗಳ ನಂತರ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಗಲೆಯನ್ನು ಈ ತಿಂಗಳ ಆರಂಭದಲ್ಲಿ ಅರವಿಂದ್ ಕೇಜ್ರಿವಾಲ್ ಸಂಪುಟಕ್ಕೆ...
ಆಪ್ ಶಾಸಕಿ ಆತಿಶಿ
ಆಪ್ ಶಾಸಕಿ ಆತಿಶಿ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧಿನಕ್ಕೊಳಗಾಗಿ ಹದಿನೈದು ದಿನಗಳ ನಂತರ, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಗಲೆಯನ್ನು ಈ ತಿಂಗಳ ಆರಂಭದಲ್ಲಿ ಅರವಿಂದ್ ಕೇಜ್ರಿವಾಲ್ ಸಂಪುಟಕ್ಕೆ ಸೇರ್ಪಡೆಯಾದ ಸಚಿವೆ ಅತಿಶಿ ಅವರಿಗೆ ಮಂಜೂರು ಮಾಡಲಾಗಿದೆ.

ಮಾರ್ಚ್ 14 ರಂದು ಲೋಕೋಪಯೋಗಿ ಇಲಾಖೆ ಹೊರಡಿಸಿದ ಆದೇಶದಲ್ಲಿ, ಎಂಟು ದಿನಗಳಲ್ಲಿ ಹಂಚಿಕೆಯಾಗಿರುವ ಬಂಗಲೆಗೆ ನಿಮ್ಮ ಒಪ್ಪಿಗೆ ಸೂಚಿಸುವಂತೆ ಸಚಿವೆ ಅತಿಶಿಗೆ ಅವರಿಗೆ ಕೇಳಿಕೊಳ್ಳಲಾಗಿದೆ.

ಸಿಸೋಡಿಯಾ ಅವರು ಮಥುರಾ ರಸ್ತೆಯಲ್ಲಿರುವ ಎಬಿ-17 ಬಂಗಲೆಯಲ್ಲಿ ತಂಗಿದ್ದರು. ಇದಕ್ಕು ಮುನ್ನ ಈ ಬಂಗಲೆಯನ್ನು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ನೀಡಲಾಗಿತ್ತು.

2015ರಲ್ಲಿ ದೆಹಲಿಯಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಬಂಗಲೆಯನ್ನು ಸಿಸೋಡಿಯಾ ಅವರಿಗೆ ನೀಡಲಾಗಿತ್ತು.

"ಇದು ನಿರಂತರ ಕಾರ್ಯ. ಸಿಸೋಡಿಯಾ ಅವರು ರಾಜೀನಾಮೆ ನೀಡಿದ್ದರಿಂದ, ಅವರ ಬಂಗಲೆಯನ್ನು ಅತಿಶಿ ಅವರಿಗೆ ಮರುಹಂಚಿಕೆ ಮಾಡಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಚ್ 21 ಅಥವಾ ಅದಕ್ಕೂ ಮೊದಲು ಬಂಗಲೆಯನ್ನು ಖಾಲಿ ಮಾಡುವಂತೆ ಸಿಸೋಡಿಯಾ ಅವರಿಗೆ ಆದೇಶದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com