ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾಗೆ ಮತ್ತೆ 5 ದಿನ ED ಕಸ್ಟಡಿ

ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಕೋರ್ಟ್ ಮತ್ತೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.
ಮನೀಶ್ ಸಿಸೋಡಿಯಾಗೆ ಮತ್ತೆ 5 ದಿನ ED ಕಸ್ಟಡಿ
ಮನೀಶ್ ಸಿಸೋಡಿಯಾಗೆ ಮತ್ತೆ 5 ದಿನ ED ಕಸ್ಟಡಿ

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಕೋರ್ಟ್ ಮತ್ತೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.

ಎರಡು ದಿನಗಳ ವಿಚಾರಣೆಯ ನಂತರ ದೆಹಲಿಯ ಮದ್ಯ ನೀತಿ ವಿಷಯಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಮಾರ್ಚ್ 9 ರಂದು ಹಣಕಾಸು ತನಿಖಾ ಸಂಸ್ಥೆ ಬಂಧಿಸಿತ್ತು. ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಸ್ಟಡಿಯನ್ನು ಇನ್ನೂ ಏಳು ದಿನಗಳವರೆಗೆ ವಿಸ್ತರಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಮನವಿ ಮಾಡಿತ್ತು. 

ಸಿಸೋಡಿಯಾ ಅವರ ಕಸ್ಟಡಿ ಇಂದಿಗೆ ಮುಕ್ತಾಯವಾದ ಹಿನ್ನಲೆಯಲ್ಲಿ ದೆಹಲಿ ಮದ್ಯ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಸ್ಟಡಿಯನ್ನು ಇನ್ನೂ ಏಳು ದಿನಗಳವರೆಗೆ ವಿಸ್ತರಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಮನವಿ ಮಾಡಿತ್ತು. 

ಇಡಿ ಬೇಡಿಕೆಯ ಮೇರೆಗೆ ನ್ಯಾಯಾಲಯ ಮನೀಶ್ ಸಿಸೋಡಿಯಾ ಅವರ ಕಸ್ಟಡಿಯನ್ನು ಇನ್ನೂ 5 ದಿನಗಳವರೆಗೆ ವಿಸ್ತರಿಸಿದೆ. ಅಂತೆಯೇ ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 22 ರಂದು ನಡೆಯಲಿದೆ.  ಅಂತೆಯೇ ಮನೀಶ್ ಸಿಸೋಡಿಯಾ ಅವರ ಕುಟುಂಬದ ವೆಚ್ಚ ಮತ್ತು ಅವರ ಪತ್ನಿಯ ವೈದ್ಯಕೀಯ ವೆಚ್ಚ 40,000 ಮತ್ತು 45,000 ರೂ.ಗಳ ಚೆಕ್‌ಗಳಿಗೆ ಸಹಿ ಹಾಕಲು ನ್ಯಾಯಾಲಯವು ಅನುಮತಿ ನೀಡಿದೆ.

ಎರಡು ದಿನಗಳ ವಿಚಾರಣೆಯ ನಂತರ ದೆಹಲಿಯ ಮದ್ಯ ನೀತಿ ವಿಷಯಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಮಾರ್ಚ್ 9 ರಂದು ಹಣಕಾಸು ತನಿಖಾ ಸಂಸ್ಥೆ ಬಂಧಿಸಿತ್ತು. ಕಳೆದ ತಿಂಗಳು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದ ನಂತರ ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

1.23 ಲಕ್ಷ ಇಮೇಲ್ ಗಳ ಕ್ಲೌಡ್ ಡೇಟಾ ರಿಕವರಿ ಮಾಡಿದ ED
ಇದೇ ವೇಳೆ 1.23 ಲಕ್ಷ ಇಮೇಲ್ ಗಳ ಒಳಗೊಂಡಿರುವ ಸಿಸೋಡಿಯಾ ಅವರ ಕ್ಲೌಡ್ ಡೇಟಾವನ್ನು ಹಿಂಪಡೆದಿದ್ದೇವೆ ಮತ್ತು ಡೇಟಾದ ಫೊರೆನ್ಸಿಕ್ ಪರೀಕ್ಷೆಗೆ ಸಮಯ ಬೇಕಾಗುತ್ತದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಈಗ ರದ್ದಾದ ದೆಹಲಿ ಮದ್ಯ ನೀತಿ ಪ್ರಕರಣದ ಮಾಹಿತಿಯನ್ನು ಒಳಗೊಂಡಿರುವ ತನ್ನ ಹಳೆಯ ಫೋನ್ ಅನ್ನು ಸಿಸೋಡಿಯಾ ಬಿಟ್ಟು ಹೋಗಿದ್ದಾರೆ ಎಂದು ಇಡಿ ಆರೋಪಿಸಿದೆ. ಸಿಸೋಡಿಯಾ ಅವರ ವಕೀಲರು ಬಂಧನ ಬಂಧನ ಅವಧಿ ವಿಸ್ತರಣೆಗಾಗಿ ಇಡಿ ಮನವಿಯನ್ನು ವಿರೋಧಿಸಿದರು ಮತ್ತು ಅಪರಾಧ ಪ್ರಕ್ರಿಯೆಗಳ ಕುರಿತು ಸಂಸ್ಥೆಯಿಂದ ಯಾವುದೇ ಮಾತು ಬಂದಿಲ್ಲ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com