ರಾಹುಲ್ ಗಾಂಧಿಯನ್ನು ಬೆಂಬಲಿಸುವ ಕೇರಳ ಸಿಎಂ ಹೇಳಿಕೆ 'ನಿಜವಾದದ್ದಲ್ಲ', ಸಿಪಿಐ(ಎಂ) 'ಡಬಲ್ ಅಜೆಂಡಾ': ಕಾಂಗ್ರೆಸ್

ಕೇರಳದ ಆಡಳಿತಾರೂಢ ಸಿಪಿಐ(ಎಂ) ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 'ಡಬಲ್ ಅಜೆಂಡಾ' ಹೊಂದಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್
Updated on

ಕೊಚ್ಚಿ: ಕೇರಳದ ಆಡಳಿತಾರೂಢ ಸಿಪಿಐ(ಎಂ) ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 'ಡಬಲ್ ಅಜೆಂಡಾ' ಹೊಂದಿದ್ದಾರೆ. ಒಂದೆಡೆ ರಾಹುಲ್ ಗಾಂಧಿಯನ್ನು ಬೆಂಬಲಿಸುವ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಅದೇ ಸಮಯದಲ್ಲಿ ಕೆಎಸ್‌ಯು ಮತ್ತು ಪಕ್ಷದ ಯುವ ಘಟಕದ ಪ್ರತಿಭಟನಾ ನಿರತರ ಮೇಲೆ ಕ್ರೂರವಾಗಿ ಹಲ್ಲೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

ಕೇರಳದಲ್ಲಿ ಸಿಪಿಐ(ಎಂ) ಮತ್ತು ವಿಜಯನ್ ಅವರು ಲೋಕಸಭೆಯಿಂದ ರಾಹುಲ್ ಗಾಂಧಿಯವರ ಅನರ್ಹತೆಯನ್ನು ಖಂಡಿಸಿದ ಒಂದು ದಿನದ ನಂತರ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಅವರು ಈ ಆರೋಪ ಮಾಡಿದ್ದಾರೆ.
'ಇದು ಸಂಘಪರಿವಾರದ ಪ್ರಜಾಪ್ರಭುತ್ವದ ಮೇಲಿನ ದಾಳಿ ಹಾಗೂ ಬಿಜೆಪಿಯ ಸೇಡಿನ ರಾಜಕಾರಣ' ಎಂದು ವಿಜಯನ್ ಹೇಳಿದ್ದಾರೆ.

ಅವರು ನೀಡಿದ ಹೇಳಿಕೆಗಳು 'ದುರದೃಷ್ಟವಶಾತ್ ನಿಜವಲ್ಲ'. ಇಲ್ಲದಿದ್ದರೆ ಅವರು ಶುಕ್ರವಾರ ಸಂಜೆ ತಿರುವನಂತಪುರಂನ ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕೇರಳ ವಿದ್ಯಾರ್ಥಿ ಸಂಘ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಅಮಾನುಷವಾಗಿ ಥಳಿಸಲು ಪೊಲೀಸರಿಗೆ ಅನುಮತಿ ನೀಡುತ್ತಿರಲಿಲ್ಲ. ಕೋಯಿಕ್ಕೋಡ್‌ನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನೂ ಅಮಾನುಷವಾಗಿ ಥಳಿಸಲಾಗಿದೆ ಎಂದು ಸತೀಶನ್ ತಿಳಿಸಿದ್ದಾರೆ.

ಹಲವಾರು ಯುವ ಕೆಎಸ್‌ಯು ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರು ತಲೆಗೆ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ತಲೆಯ ಮೇಲೆ ಹೊಡೆಯಲು ಪೊಲೀಸರಿಗೆ ಅನುಮತಿ ನೀಡಿದವರು ಯಾರು?. ಇದೆಲ್ಲವೂ ಸಿಎಂ ಅವರ ಕ್ರಿಯಾಶೀಲ ಜ್ಞಾನ ಮತ್ತು ನಿರ್ದೇಶನದಿಂದಲೇ ನಡೆದಿದೆ. ಬಿಜೆಪಿಯನ್ನು ಮೆಚ್ಚಿಸಲು ಇದನ್ನು ಮಾಡಲಾಗಿದೆ' ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಮತ್ತು ಯುಡಿಎಫ್ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ. ಪಕ್ಷವು ಮಾರ್ಚ್ 27 ರಂದು ಕೇರಳ ರಾಜಭವನಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ ಎಂದು ಅವರು ಹೇಳಿದರು.
2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರ 'ಮೋದಿ ಉಪನಾಮ' ಕುರಿತಂತೆ ಮಾಡಿದ ಟೀಕೆಗೆ ಸಂಬಂಧಿಸಿದಂತೆ ಸೂರತ್ ನ್ಯಾಯಾಲಯವು ಬುಧವಾರದಂದು ರಾಹುಲ್ ಅವರನ್ನು ದೋಷಿ ಎಂದಿದೆ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಅದಾದ ಒಂದು ದಿನದ ನಂತರ, ಲೋಕಸಭಾ ಸೆಕ್ರೆಟರಿಯೇಟ್ ಅಧಿಸೂಚನೆಯಲ್ಲಿ ಅವರ ಅನರ್ಹತೆಯು ಮಾರ್ಚ್ 23 ರಿಂದ ಅಂದರೆ ಅವರ ಶಿಕ್ಷೆಯ ದಿನದಿಂದ ಜಾರಿಗೆ ಬರುತ್ತದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com