ಉನ್ನಾವೊ: ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಾಹುತಿ ಯತ್ನ

ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ದುರಂತವೊಂದು ಸಂಭವಿಸಿದ್ದು, ಕಾರ್ಯಾಚರಣೆ ವಿರೋಧಿಸಿ ಮಹಿಳೆಯೊಬ್ಬಳು ತನ್ನ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಾಹುತಿ ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಉನ್ನಾವೊ: ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ದುರಂತವೊಂದು ಸಂಭವಿಸಿದ್ದು, ಕಾರ್ಯಾಚರಣೆ ವಿರೋಧಿಸಿ ಮಹಿಳೆಯೊಬ್ಬಳು ತನ್ನ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಾಹುತಿ ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಉನ್ನಾವೋದ ಹಸನ್‌ಗಂಜ್ ತಹಸಿಲ್‌ನ ಇಟ್ಕುಟಿ ಗ್ರಾಮದ ವಿಕ್ರಮ್ ಖೇಡಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಜಮೀನಿನ ಒತ್ತುವರಿ ತೆರವು ಮಾಡಲು ಮುಂದಾಗಿದ್ದ ಕಂದಾಯ ಇಲಾಖೆಯ ತಂಡದ ಎದುರೇ ಮಹಿಳೆಯೊಬ್ಬರು ತಮ್ಮ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ್ದಾರೆ. ಮಹಿಳೆ ತನ್ನ ಮಕ್ಕಳೊಂದಿಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸ್ಥಳೀಯರು ಆಕೆಯನ್ನು ತಡೆದಿದ್ದಾರೆ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ಒತ್ತುವರಿ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯ ತಂಡ ಮಾಡಿಕೊಂಡು ಗುರುವಾರ ಗ್ರಾಮಕ್ಕೆ ತೆರಳಿತ್ತು. ತಂಡವು ಅತಿಕ್ರಮಣದಾರ ಅಜಯ್ ಅವರನ್ನು ಸೈಟ್ ತೆರವುಗೊಳಿಸಲು ಕೇಳಿದರು. ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿಯೇ ಸಂಪೂರ್ಣ ಮಾತುಕತೆ ನಡೆದಿದೆ. ಈ ಹೊತ್ತಿಗೆ ಅವರ ಪತ್ನಿ ಅವರ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡರು ಎಂದರು.

ವಿಕ್ರಮ್ ಖೇಡದಲ್ಲಿರುವ ಸರ್ಕಾರಿ ಜಾಗದಲ್ಲಿ ಅಜಯ್ ಎಂಬುವರು ಮನೆ ನಿರ್ಮಾಣ ಮಾಡಿರುವ ಬಗ್ಗೆ ಈ ಹಿಂದೆ ಹಲವು ದೂರುಗಳು ಬಂದಿದ್ದು, ಅದನ್ನು ತೆಗೆದುಹಾಕುವಂತೆ ತಿಳಿಸಲಾಗಿದೆ ಎಂದು ಹಸಂಗಂಜ್ ಉಪವಿಭಾಗಾಧಿಕಾರಿ (ಎಸ್ ಡಿಎಂ) ಅಂಕಿತ್ ಶುಕ್ಲಾ ತಿಳಿಸಿದ್ದಾರೆ. ಅಜಯ್ ಅವರು ಅತಿಕ್ರಮಣವನ್ನು ತೆರವು ಮಾಡಿದರು, ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಟಿನ್ ಶೆಡ್ ಅನ್ನು ನಿರ್ಮಿಸಿದ್ದರು. ಆರೋಪಿಯು ಸರ್ಕಾರಿ ವಸತಿ ಯೋಜನೆಯ ಫಲಾನುಭವಿಯಾಗಿದ್ದು, ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಆರೋಪದ ಮೇರೆಗೆ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯಾ ಯತ್ನದ ಘಟನೆಯ ಕುರಿತು ಮಾತನಾಡಿದ ಶುಕ್ಲಾ, ಕಂದಾಯ ತಂಡವು ಗ್ರಾಮದಲ್ಲಿ ಇರುವವರೆಗೂ ಮಹಿಳೆ ಏನನ್ನೂ ಮಾಡಲಿಲ್ಲ. ನಂತರ ತಂಡ ಹೊರಟು ಹೋದಾಗ ಇಂತಹ ಪ್ರಯತ್ನ ಮಾಡಿರುವುದು ಕಂಡು ಬಂದಿದ್ದು, ಗ್ರಾಮಸ್ಥರು ಆಕೆಯ ಆತ್ಮಾಹುತಿ ಯತ್ನ ವಿಫಲಗೊಳಿಸಿದ್ದಾರೆ ಎಂದು ತಿಳಿಸಿದರು.

2ನೇ ಘಟನೆ
ಈ ಹಿಂದೆಯೂ ಕೂಡ ಉತ್ತರ ಪ್ರದೇಶದಲ್ಲಿ ಇಂತಹುದೇ ಘಟನೆ ನಡೆದಿತ್ತು. ಫೆಬ್ರವರಿ 13 ರಂದು, ಕಾನ್ಪುರ ದೇಹತ್ ಜಿಲ್ಲೆಯ ರೂರಾ ಪೊಲೀಸ್ ಠಾಣಾ ವ್ಯಾಪ್ತಿಯ ಮದೌಲಿ ಗ್ರಾಮದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ಸಂದರ್ಭದಲ್ಲಿ ಮಧ್ಯವಯಸ್ಕ ಮಹಿಳೆ ಮತ್ತು ಅವರ ಮಗಳು ತಮ್ಮ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡಿದ್ದರು. ಈ ವೇಳೆ ಇಬ್ಬರೂ ಸಾವಿಗೀಡಾಗಿದ್ದರು. ಘಟನೆಯ ನಂತರ, ರಾಜ್ಯದ ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು, ಇದು ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲು ಬುಲ್ಡೋಜರ್‌ಗಳನ್ನು ಬಳಸುವುದನ್ನು ಟೀಕಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com