
ಸಾಂದರ್ಭಿಕ ಚಿತ್ರ
ಹಾಪುರ್: ತಾನು ಪರಾರಿಯಾಗಿದ್ದ ಉತ್ತರ ಪ್ರದೇಶ ಪ್ರಿಯಕರನಿಂದಲೇ ಜಮ್ಮು ಮೂಲದ ಅಪ್ರಾಪ್ತ ಯುವತಿ ಭೀಕರವಾಗಿ ಹತ್ಯೆಗೀಡಾರುವ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಹಾಪುರ್‌ನ ಭೀಮ್ ನಗರದಲ್ಲಿ ಈ ಘಟನೆ ನಡೆದಿದ್ದು, ಮಾರ್ಚ್ 22 ರಂದು ಹಾಪುರ್‌ನ ಭೀಮ್ ನಗರದಲ್ಲಿರುವ ತನ್ನ ಮನೆಯಲ್ಲಿ ಮಾಹಿನೂರ್ ಎಂಬ ಜಮ್ಮು ಮೂಲದ 16 ವರ್ಷದ ಅಪ್ರಾಪ್ತ ಯುವತಿ ಕೊಲೆಯಾಗಿದ್ದಾಳೆ. ಯುವತಿಯನ್ನು ಆಕೆಯ ಪ್ರಿಯಕರ ಆಶು ಎಂಬಾತನೇ ಕತ್ತು ಹಿಸುಕಿ ಕೊಂದು ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಕಾರ್ಯಾಚರಣೆ ನಡೆಸಿ ಪೊಲೀಸರು ಕೊಲೆಗೈದ ಪ್ರಿಯಕರ ಆಶುನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಲೋಕಲ್ ಟ್ರೈನ್‌ನಲ್ಲಿ ಕರವಸ್ತ್ರಕ್ಕೆ ಬೆಂಕಿ ಹಚ್ಚಿ ಸಹ ಪ್ರಯಾಣಿಕನ ಮೇಲೆ ಎಸೆದ ವಿಕಲಚೇತನ ವ್ಯಕ್ತಿ, ಆರೋಪಿ ಪರಾರಿ
ಪೊಲೀಸ್ ಮೂಲಗಳ ಪ್ರಕಾರ, ನಾಲ್ಕು ತಿಂಗಳ ಹಿಂದೆ ಹಾಪುರ್ ಕೊತ್ವಾಲಿ ಪ್ರದೇಶದ ನಿರ್ಗತಿಕರ ಸೇವಾ ಸಮಿತಿಯ ನಿವಾಸಿ ಆಶು ಜಮ್ಮುವಿಗೆ ಬಂದಿದ್ದ. ಈ ವೇಳೆ ಅಲ್ಲಿ ಅವನು 16 ವರ್ಷದ ಅಪ್ರಾಪ್ತ ಯುವತಿ ಮಾಹಿನೂರ್ ಜೊತೆ ಸ್ನೇಹ ಬೆಳೆಸಿದ್ದ. ಬಳಿಕ ಆಕೆಯನ್ನು ಪ್ರೀತಿಸುವುದಾಗಿ ಹೇಳಿ ತನ್ನೊಂದಿಗೆ ಹಾಪುರ್‌ಗೆ ಬರುವಂತೆ ಮನವೊಲಿಸಿ ಆಕೆಯೊಂದಿಗೆ ಹಾಪುರ್ ಗೆ ಪರಾರಿಯಾಗಿದ್ದ ಎಂದು ಹುಡುಗಿಯ ತಂದೆ ತಾಲಿಬ್ ಅಲಿ ಪೊಲೀಸರಿಗೆ ತಿಳಿಸಿದ್ದಾರೆ.
ಆರೋಪಿ ಆಶು ಹಾಪುರಕ್ಕೆ ಬಂದು ಠಾಣಾ ದೆಹತ್ ಪ್ರದೇಶದ ಮೊಹಲ್ಲಾ ಭೀಮನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿದ್ದ. ಮಾರ್ಚ್ 22 ರಂದು, ವಿವಾದದ ನಂತರ, ಅವನು ತನ್ನ ಮಗಳನ್ನು ಕತ್ತು ಹಿಸುಕಿ ಕೊಂದನು. ಪೊಲೀಸರಿಗೆ ವಂಚನೆ ಮಾಡಲು ಮಗಳ ಆತ್ಮಹತ್ಯೆ ಬಗ್ಗೆ ಮಾಹಿತಿ ನೀಡಿದ್ದರು.ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗಳು ಕತ್ತು ಹಿಸುಕಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಶನಿವಾರ ಸಂಜೆ ಆರೋಪಿ ಆಶುವನ್ನು ಬಂಧಿಸಲಾಗಿದೆ ಎಂದು ಠಾಣಾಧಿಕಾರಿ ಆಶಿಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಮೃತಪಾಲ್ ಸಿಂಗ್‌ಗೆ ಆಶ್ರಯ ನೀಡಿದ್ದಕ್ಕಾಗಿ ಪಟಿಯಾಲದ ಮಹಿಳೆಯನ್ನು ಬಂಧಿಸಿದ ಪೊಲೀಸರು
ಅಸ್ಸಾಂನ ಸೋನಿಪುರ್ ಜಿಲ್ಲೆಯ ಥಾನಾ ರಂಗಪುರ ಪ್ರದೇಶದ ನಮೋನಿಗೌ ಗ್ರಾಮದ ನಿವಾಸಿ ತಾಲಿಬ್ ಅಲಿ ಅವರು ಕಳೆದ ಎಂಟು ವರ್ಷಗಳಿಂದ ಜಮ್ಮುವಿನಲ್ಲಿ ವಾಸಿಸುತ್ತಿದ್ದಾರೆ. ಮಾಹಿನೂರ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಆಶು ಆರಂಭದಲ್ಲಿ ಪೊಲೀಸರಿಗೆ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
"ಹುಡುಗಿಯ ಶವಪರೀಕ್ಷೆಯ ಬಳಿಕ ಕತ್ತು ಹಿಸುಕಿದ ಕಾರಣದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಆದ್ದರಿಂದ, ನಾವು ಪ್ರಕರಣವನ್ನು ಕೊಲೆ ಎಂದು ತನಿಖೆ ಮಾಡಿದ್ದೇವೆ ಮತ್ತು ಆಶುವನ್ನು ಬಂಧಿಸಿ ವಿಚಾರಣೆ ನಡೆಸಿದ್ದೇವೆ. ಆಶು ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.