ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ: ಮೆಲ್ಬೋರ್ನ್ ನಿಂದ ಸಿಡ್ನಿಗೆ ಆಗಮಿಸಿದ ಎನ್ಆರ್ ಐಗಳು

ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ವಿದೇಶ ಪ್ರವಾಸ ಅತಿ ಹೆಚ್ಚು ಸುದ್ದಿಯಾಗುತ್ತಿದ್ದು, ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಎನ್ಆರ್ ಐಗಳು ಅತ್ಯಂತ ಉತ್ಸುಕರಾಗಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಸಿಡ್ನಿ: ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ವಿದೇಶ ಪ್ರವಾಸ ಅತಿ ಹೆಚ್ಚು ಸುದ್ದಿಯಾಗುತ್ತಿದ್ದು, ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಎನ್ಆರ್ ಐಗಳು ಅತ್ಯಂತ ಉತ್ಸುಕರಾಗಿದ್ದಾರೆ. 

ಮೆಲ್ಬೋರ್ನ್ ನಿಂದ ಸಿಡ್ನಿಗೆ 170 ಅನಿವಾಸಿ ಭಾರತೀಯರು ಚಾರ್ಟೆಡ್ ವಿಮಾನದ ಮೂಲಕ ಆಗಮಿಸಿದ್ದಾರೆ.
 
ಭಾರತೀಯ ಆಸ್ಟ್ರೇಲಿಯನ್ ಡಯಾಸ್ಪೊರಾ ಫೌಂಡೇಶನ್ (ಐಎಡಿಎಫ್) ನ ಸದಸ್ಯರು, ತ್ರಿವರ್ಣ-ಥೀಮ್ ಹೊಂದಿರುವ ಪೇಟಗಳನ್ನು ಧರಿಸಿ, ರಾಷ್ಟ್ರಧ್ವಜಗಳನ್ನು ಬೀಸುತ್ತಾ, "ಮೋದಿ ಏರ್ವೇಸ್" ಎಂದು ಹೆಸರಿಸಿದ ವಿಮಾನದಲ್ಲಿ ಸಿಡ್ನಿಗೆ ಆಗಮಿಸಿದ್ದಾರೆ. 

ಆಸ್ಟ್ರೇಲಿಯಾದ ಕ್ರಿಯಾತ್ಮಕ ಮತ್ತು ವೈವಿಧ್ಯಮಯ ಭಾರತೀಯ ಸಮುದಾಯದ ಸಂಭ್ರಮಾಚರಣೆಯ ಭಾಗವಾಗಿ IADF ನಿಂದ ಸಿಡ್ನಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಇದು "ನಮ್ಮ ಬಹುಸಂಸ್ಕೃತಿಯ ಸಮುದಾಯದ ಪ್ರಮುಖ ಭಾಗ" ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಐಎಡಿಎಫ್‌ನ ಸಹ-ಸಂಸ್ಥಾಪಕ ಡಾ ಅಮಿತ್ ಸರ್ವಾಲ್, " ಕಾರ್ಯಕ್ರಮ ನಡೆಯುವ ಸ್ಥಳದ ಹೊರಗೂ ಬಹಳಷ್ಟು ಜನರು ಕಾಯುತ್ತಿದ್ದಾರೆ, ಅಲ್ಲಿ ಅವರು ಪ್ರಧಾನಿ ಮೋದಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಪಪುವಾ ನ್ಯೂ ಗಿನಿಯಾದಿಂದ ಆಸ್ಟ್ರೇಲಿಯಾಗೆ ಆಗಮಿಸಿರುವ ಪ್ರಧಾನಿ ಮೋದಿ, ನಾಳೆ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಅಲ್ಬನೀಸ್ ಅವರನ್ನು ಭೇಟಿ ಮಾಡಲಿದ್ದಾರೆ.

ಪಪುವಾ ನ್ಯೂ ಗಿನಿಯಾದಲ್ಲಿ ಉಭಯ ನಾಯಕರೂ ಪ್ರಾದೇಶಿಕ ಸಹಕಾರವನ್ನು ಉತ್ತೇಜಿಸುವ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆ (ಎಫ್‌ಐಪಿಐಸಿ) ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಪ್ರಧಾನಿ ಮೋದಿ ಶುಕ್ರವಾರ ಜಪಾನ್‌ನಿಂದ ಮೂರು ರಾಷ್ಟ್ರಗಳ ಪ್ರವಾಸವನ್ನು ಪ್ರಾರಂಭಿಸಿದರು, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಜಿ 7 ಶೃಂಗಸಭೆಯಲ್ಲಿ ಮೂರು ಅಧಿವೇಶನಗಳಲ್ಲಿ ಭಾಗವಹಿಸಿದ್ದರು.

ಹಿರೋಷಿಮಾದಲ್ಲಿ ನಡೆದ 3ನೇ ಕ್ವಾಡ್ ಶೃಂಗಸಭೆಯಲ್ಲಿ US ಅಧ್ಯಕ್ಷ ಜೋ ಬಿಡೆನ್, ಜಪಾನಿನ ಪ್ರಧಾನಿ ಕಿಶಿಡಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಪ್ರಧಾನಿ ಮೋದಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com