ಕಾಂಗ್ರೆಸ್ ನಾಯಕ ದಿ. ಮಾಧವರಾವ್ ಸಿಂಧಿಯಾ ಪ್ರತಿಮೆ ಅನಾವರಣಗೊಳಿಸಿದ ಯುಪಿ ಸಿಎಂ!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಶುಕ್ರವಾರ ಮೈನ್‌ಪುರಿಯಲ್ಲಿ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿ....
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
Updated on: 

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಶುಕ್ರವಾರ ಮೈನ್‌ಪುರಿಯಲ್ಲಿ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿ. ಮಾಧವರಾವ್ ಸಿಂಧಿಯಾ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಯುಪಿ ಸಿಎಂ, ಮಾಜಿ ಕೇಂದ್ರ ಸಚಿವ ಮಾಧವರಾವ್ ಸಿಂಧಿಯಾ ಅವರು 22 ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ನಿಧನರಾಗುವ ಮುನ್ನ 'ದೇಶದ ರಾಜಕೀಯದಲ್ಲಿ ಉದಯೋನ್ಮುಖ ವ್ಯಕ್ತಿಯಾಗಿದ್ದರು' ಎಂದು ಬಣ್ಣಿಸಿದರು. "ಅವರು ಸಮಾಜದ ಪ್ರತಿಯೊಂದು ವರ್ಗದ ಜನರ ಹೃದಯಲ್ಲಿದ್ದರು" ಎಂದು ಯೋಗಿ ಹೇಳಿದರು.

ಸಿಂಧಿಯಾ ಹಾಗೂ ಇತರ ಏಳು ಮಂದಿಯನ್ನು ಹೊತ್ತ ಖಾಸಗಿ ವಿಮಾನ ಸೆಪ್ಟೆಂಬರ್ 30, 2001 ರಂದು ಮೈನ್‌ಪುರಿಯ ಭೋಂಗಾವ್ ತಹಸಿಲ್‌ನ ಮೋಟಾ ಗ್ರಾಮದ ಬಳಿ ಪತನಗೊಂಡಿತ್ತು. ಮಾಧವರಾವ್ ಸಿಂಧಿಯಾ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲು ಕಾನ್ಪುರಕ್ಕೆ ತೆರಳುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com