ಗುಜರಾತ್ ನಲ್ಲಿ ಆರ್ ಎಸ್ಎಸ್ ನ 3 ದಿನಗಳ ಸಭೆ ಆರಂಭ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ 3 ದಿನಗಳ ಸಭೆ ಗುಜರಾತ್ ನ ಭುಜ್ ನಗರದಲ್ಲಿ ಇಂದಿನಿಂದ ಆರಂಭಗೊಂಡಿದೆ. 
ಆರ್ ಎಸ್ಎಸ್ ಮುಖ್ಯಸ್ಥ ಭಾಗ್ವತ್
ಆರ್ ಎಸ್ಎಸ್ ಮುಖ್ಯಸ್ಥ ಭಾಗ್ವತ್

ಅಹ್ಮದಾಬಾದ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ 3 ದಿನಗಳ ಸಭೆ ಗುಜರಾತ್ ನ ಭುಜ್ ನಗರದಲ್ಲಿ ಇಂದಿನಿಂದ ಆರಂಭಗೊಂಡಿದೆ. 

ಆರ್ ಎಸ್ಎಸ್ ನ ಮುಖ್ಯಸ್ಥ ಮೋಹನ್ ಭಾಗ್ವತ್ ಹಾಗೂ ಅದರ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಸಭೆಯಲ್ಲಿ ಭಾಗಿಯಾಗಿದ್ದಾರೆ. 

ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಸಭೆಯಲ್ಲಿ ಗುಜರಾತ್ ನಾದ್ಯಂತ 382 ಹಿರಿಯ ಆರ್ ಎಸ್ಎಸ್ ನಾಯಕರು ಭಾಗಿಯಾಗಿದ್ದಾರೆ ಎಂದು ಆರ್ ಎಸ್ಎಸ್ ಹೇಳಿಕೆಯಲ್ಲಿ ತಿಳಿಸಿದೆ. 

ಆರ್ ಎಸ್ ಎಸ್ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ  ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಆರ್ ಎಸ್ಎಸ್ ನಾಯಕರನ್ನು ಭೇಟಿ ಮಾಡಿದ್ದಾರೆ.

ಸಭೆಯಲ್ಲಿ, ಆಹ್ವಾನಿತ ಸದಸ್ಯರು ಆರ್‌ಎಸ್‌ಎಸ್‌ನ ವಿಸ್ತರಣಾ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸುತ್ತಾರೆ ಮತ್ತು ಪ್ರಕೃತಿಯ ಮೇಲೆ ಆಧುನಿಕ ಜೀವನಶೈಲಿಯ ಪರಿಣಾಮಗಳು, ಹವಾಮಾನ ಬದಲಾವಣೆಯ ಪರಿಣಾಮಗಳು, ಹಸುಗಳ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ ಮುಂತಾದ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com