ಗುರುದ್ವಾರ, ಮಸೀದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ: ಬಿಜೆಪಿಯಿಂದ ನಾಯಕ ಸಂದೀಪ್ ದಯ್ಮಾ ಉಚ್ಚಾಟನೆ

ಇತ್ತೀಚೆಗೆ ತಿಜಾರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಗುರುದ್ವಾರಗಳು ಮತ್ತು ಮಸೀದಿಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಸಂದೀಪ್ ದಯ್ಮಾ ಅವರನ್ನು ಭಾನುವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಸಂದೀಪ್ ದಯ್ಮಾ
ಸಂದೀಪ್ ದಯ್ಮಾ
Updated on: 

ಜೈಪುರ: ಇತ್ತೀಚೆಗೆ ತಿಜಾರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಗುರುದ್ವಾರಗಳು ಮತ್ತು ಮಸೀದಿಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಸಂದೀಪ್ ದಯ್ಮಾ ಅವರನ್ನು ಭಾನುವಾರ ಪಕ್ಷದಿಂದ ಉಚ್ಚಾಟಿಸಲಾಗಿದೆ.

ರಾಜಸ್ಥಾನ ಬಿಜೆಪಿಯ ಶಿಸ್ತು ಸಮಿತಿಯ ಅಧ್ಯಕ್ಷ ಓಂಕಾರ್ ಸಿಂಗ್ ಲಖಾವತ್ ಅವರು ದಯ್ಮಾ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದ್ದಕ್ಕಾಗಿ ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ಸಂದೀಪ್ ದಯ್ಮಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಲಖಾವತ್ ಹೇಳಿದ್ದಾರೆ.

ನವೆಂಬರ್ 25 ರ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಬಾಬಾ ಬಾಲಕನಾಥ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಿಜಾರಾದಲ್ಲಿ ನಡೆದ ರ್ಯಾಲಿಯಲ್ಲಿ ದಯ್ಮಾ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಬಿಜೆಪಿ ಈ ಕ್ರಮ ತೆಗೆದುಕೊಂಡಿದೆ.

"ಇಲ್ಲಿ ಎಷ್ಟು ಮಸೀದಿಗಳು, ಗುರುದ್ವಾರಗಳನ್ನು ನಿರ್ಮಿಸಲಾಗಿದೆ ನೋಡಿ! ಇದು ಭವಿಷ್ಯದಲ್ಲಿ ನಮಗೆ ಹುಣ್ಣು ಆಗುತ್ತದೆ. ಅದಕ್ಕಾಗಿಯೇ ಈ ಹುಣ್ಣನ್ನು ಕಿತ್ತು ಬಿಸಾಡುವುದು ನಮ್ಮ ಕರ್ತವ್ಯ ಎಂದು ದಯ್ಮಾ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com