'ವಿಶ್ವಕಪ್ ಫೈನಲ್ ದಿನ ಏರ್ ಇಂಡಿಯಾ ವಿಮಾನ ಹಾರಾಡುವಂತಿಲ್ಲ': ಖಲಿಸ್ತಾನಿ ಉಗ್ರನಿಂದ ವಿಮಾನ ಸ್ಫೋಟಿಸುವ ಬೆದರಿಕೆ

ವಿಶ್ವಕಪ್ ಫೈನಲ್ ದಿನ ಏರ್ ಇಂಡಿಯಾ ವಿಮಾನ ಹಾರಾಡುವಂತಿಲ್ಲ.. ಒಂದು ವೇಳೆ ಅದರಲ್ಲಿ ಪ್ರಯಾಣಿಸಿದರೆ ಅವರ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ, ನಿಯೋಜಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ನೀಡಿದ್ದಾನೆ.
ಎಸ್‌ಎಫ್‌ಜೆ ಮುಖ್ಯಸ್ಥ ಪನ್ನುನ್
ಎಸ್‌ಎಫ್‌ಜೆ ಮುಖ್ಯಸ್ಥ ಪನ್ನುನ್

ನವದೆಹಲಿ: ವಿಶ್ವಕಪ್ ಫೈನಲ್ ದಿನ ಏರ್ ಇಂಡಿಯಾ ವಿಮಾನ ಹಾರಾಡುವಂತಿಲ್ಲ.. ಒಂದು ವೇಳೆ ಅದರಲ್ಲಿ ಪ್ರಯಾಣಿಸಿದರೆ ಅವರ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ, ನಿಯೋಜಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ನೀಡಿದ್ದಾನೆ.

ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ, ನಿಯೋಜಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ನವೆಂಬರ್ 19 ರ ನಂತರ ಸಿಖ್ಖರು ತಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಕಾರಣ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ. ನವೆಂಬರ್ 19 ರಂದು ಏರ್ ಇಂಡಿಯಾ ಕಾರ್ಯಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಆತ ಎಚ್ಚರಿಸಿದ್ದಾನೆ.

"ನಾವು ಸಿಖ್ ಜನರನ್ನು ಏರ್ ಇಂಡಿಯಾ ಮೂಲಕ ಪ್ರಯಾಣಿಸಬೇಡಿ ಎಂದು ಕೇಳುತ್ತಿದ್ದೇವೆ. ನವೆಂಬರ್ 19 ರಿಂದ ಜಾಗತಿಕ ದಿಗ್ಬಂಧನ ನಡೆಯಲಿದೆ. ಏರ್ ಇಂಡಿಯಾಗೆ ಕಾರ್ಯನಿರ್ವಹಿಸಲು ನಾವು ಅನುಮತಿಸುವುದಿಲ್ಲ. ಸಿಖ್ ಜನರೇ, ನವೆಂಬರ್ 19 ರ ನಂತರ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ. ನಿಮ್ಮ ಜೀವಕ್ಕೆ ಅಪಾಯವಾಗಬಹುದು. ನವೆಂಬರ್ 19 ರಂದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (IGI) ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಮತ್ತು ಅದರ ಹೆಸರನ್ನು ಬದಲಾಯಿಸಲಾಗುವುದು" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಪನ್ನುನ್ ಎಚ್ಚರಿಸಿದ್ದಾನೆ.

ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನ ಅಂತಿಮ ಪಂದ್ಯ ಇದೇ ದಿನ ನಡೆಯಲಿದೆ ಎಂದು ಆತ ಒತ್ತಿ ಹೇಳಿದ್ದು, ನವೆಂಬರ್‌ನಲ್ಲಿ ಅದೇ ದಿನ ವಿಶ್ವ ಭಯೋತ್ಪಾದಕ ಕಪ್‌ನ ಅಂತಿಮ ಪಂದ್ಯ ನಡೆಯಲಿದೆ. ಯಾವಾಗ ಪಂಜಾಬ್ ವಿಮೋಚನೆಗೊಳ್ಳುತ್ತದೆಯೋ ಆಗ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದ ಹೆಸರು ಶಾಹಿದ್ ಬಿಯಾಂತ್ ಸಿಂಗ್, ಶಾಹಿದ್ ಸತ್ವಂತ್ ಸಿಂಗ್ ಖಲಿಸ್ತಾನ್ ವಿಮಾನ ನಿಲ್ದಾಣ ಎಂದಾಗುತ್ತದೆ ಎಂದು ಹೇಳಿದ್ದಾನೆ.

ಇನ್ನು ಎಸ್‌ಎಫ್‌ಜೆ ಮುಖ್ಯಸ್ಥ ಪನ್ನುನ್ ಬೆದರಿಕೆ ಹಾಕಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್‌ನಲ್ಲಿ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಕುರಿತು ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಜಗಳದ ಮಧ್ಯೆ ಅವರು ಹಿಂದೂ-ಕೆನಡಿಯನ್ನರನ್ನು ಕೆನಡಾ ತೊರೆಯುವಂತೆ ಆತ ಒತ್ತಾಯಿಸಿದ್ದ. 'ಖಲಿಸ್ತಾನ್ ಪರ ಸಿಖ್ಖರು ನಿರಂತರವಾಗಿ ಕೆನಡಾಕ್ಕೆ ನಿಷ್ಠೆಯನ್ನು ತೋರಿಸಿದ್ದಾರೆ ಎಂದಿದ್ದ. ಭಾರತ-ಕೆನಡಿಯನ್ ಹಿಂದೂಗಳಿಗೆ ಬೆದರಿಕೆ ಹಾಕಿ ದೇಶವನ್ನು ತೊರೆಯುವಂತೆ ಒತ್ತಾಯಿಸಿದ್ದ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ 

ಗುರ್ಪತ್ವಂತ್ ಸಿಂಗ್ ಪನ್ನುನ್, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೊದಲ್ಲಿ, ಹಿಂದೂ ಫೋರಮ್ ಕೆನಡಾದ ವಕೀಲರು ಕೆನಡಾದ ವಲಸೆ ಸಚಿವರನ್ನು ಕೆನಡಾದ ಪ್ರದೇಶಕ್ಕೆ ಖಲಿಸ್ತಾನಿ ಉಗ್ರ ಪನ್ನುನ್ ಪ್ರವೇಶವನ್ನು ನಿಷೇಧಿಸುವಂತೆ ಕೇಳಿದ್ದರು.

ಹಿಂದೂ ಫೋರಮ್ ಕೆನಡಾದ ವಕೀಲರು ಕೆನಡಾದ ವಲಸೆ ಸಚಿವ ಮಾರ್ಕ್ ಮಿಲ್ಲರ್ ಅವರಿಗೆ ಪತ್ರ ಬರೆದು ಪನ್ನುನ್ ಅವರ ಇತ್ತೀಚಿನ ಹೇಳಿಕೆಗಳು ಹಿಂದೂ ಸಮುದಾಯದಲ್ಲಿ ಮಾತ್ರವಲ್ಲದೆ ಕೆನಡಾದ ನಾಗರಿಕರಲ್ಲಿಯೂ ಸಹ ದುಃಖ ಮತ್ತು ಆಘಾತವನ್ನು ಉಂಟುಮಾಡಿದೆ ಎಂದು ಆಘಾತ ವ್ಯಕ್ತಪಡಿಸಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com