ಪತ್ನಿಗೆ ವಿಚ್ಛೇದನ ನೀಡಿದ ಗಾಯಕ ಹನಿ ಸಿಂಗ್

ಒಂದು ವರ್ಷಕ್ಕೂ ಹೆಚ್ಚು ಕಾಲ ಕಾನೂನು ಹೋರಾಟದ ನಂತರ ಗಾಯಕ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ವಿಚ್ಛೇದನ ನೀಡಿದೆ.
ಹನಿ ಸಿಂಗ್, ಅವರ ಪತ್ನಿ ಶಾಲಿನಿ ತಲ್ವಾರ್
ಹನಿ ಸಿಂಗ್, ಅವರ ಪತ್ನಿ ಶಾಲಿನಿ ತಲ್ವಾರ್

ನವದೆಹಲಿ: ಒಂದು ವರ್ಷಕ್ಕೂ ಹೆಚ್ಚು ಕಾಲ ಕಾನೂನು ಹೋರಾಟದ ನಂತರ ಗಾಯಕ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ವಿಚ್ಛೇದನ ನೀಡಿದೆ.

ಗಾಯಕ ಹನಿ ಸಿಂಗ್ ವಿರುದ್ಧ ಅವರ ಪತ್ನಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸಾಕೇತ್ ನ್ಯಾಯಾಲಯದಲ್ಲಿ ಪ್ರಧಾನ ನ್ಯಾಯಾಧೀಶ(ಕುಟುಂಬ ನ್ಯಾಯಾಲಯ) ಪರಮ್‌ಜೀತ್ ಸಿಂಗ್ ಅವರು, ದಂಪತಿಗಳು ತಮ್ಮ ನಡುವಿನ ಎಲ್ಲಾ ವಿವಾದಗಳನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಬಂದ ನಂತರ ಅವರಿಗೆ ವಿಚ್ಛೇದನ ನೀಡಿ ಆದೇಶ ಹೊರಡಿಸಿದ್ದಾರೆ.

ಶಾಲಿನ ಅವರು ಕಳೆದ ವರ್ಷ 1 ಕೋಟಿ ರೂಪಾಯಿ ಜೀವನಾಂಶ ಮತ್ತು ಪರಿಹಾರಕ್ಕೆ ಒಪ್ಪಿಕೊಂಡಿದ್ದರು. ನಂತರ ಹನಿ ಸಿಂಗ್ ವಿರುದ್ಧದ ಪ್ರಕರಣವನ್ನು ಹಿಂಪಡೆದಿದ್ದರು.

ಈ ದಂಪತಿಗಳು ಜನವರಿ 2011 ರಲ್ಲಿ ವಿವಾಹವಾಗಿದ್ದರು ಮತ್ತು ಸೆಪ್ಟೆಂಬರ್ 2022 ರಲ್ಲಿ ಪರಸ್ಪರ ವಿಚ್ಛೇದನ ಕೋರಿ ಅರ್ಜಿ  ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com