ಗುಜರಾತ್: ಗುಂಡಿಕ್ಕಿಕೊಂಡು ವಾಯುಪಡೆಯ ಗರುಡ್ ಕಮಾಂಡೋ ಆತ್ಮಹತ್ಯೆ

ಭಾರತೀಯ ವಾಯುಪಡೆ (ಐಎಎಫ್) ನ ಗರುಡ್ ಕಮಾಂಡೋ ಸ್ವಯಂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ ನ ಕಛ್ ಜಿಲ್ಲೆಯ ಭುಜ್ ನಲ್ಲಿ ವರದಿಯಾಗಿದೆ. 
ಆತ್ಮಹತ್ಯೆ ಯತ್ನ
ಆತ್ಮಹತ್ಯೆ ಯತ್ನ

ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ನ ಗರುಡ್ ಕಮಾಂಡೋ ಸ್ವಯಂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ ನ ಕಛ್ ಜಿಲ್ಲೆಯ ಭುಜ್ ನಲ್ಲಿ ವರದಿಯಾಗಿದೆ. 

23 ವರ್ಷದ ಯೋಗೇಶ್ ಕುಮಾರ್ ಮಹಾತೋ ಆತ್ಮಹತ್ಯೆ ಮಾಡಿಕೊಂಡಿರುವ ಕಮಾಂಡೋ ಆಗಿದ್ದು,  ಆರ್ಥಿಕ ಒತ್ತಡ, ಇನ್ನಿತರ ವೈಯಕ್ತಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಭುಜ್ ನ ಎ ವಿಭಾಗೀಯ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಮೃತ ಕಮಾಂಡೋ ಜಾರ್ಖಂಡ್ ಮೂಲದವರಾಗಿದ್ದು, ಜಾರ್ಖಂಡ್ ನಲ್ಲಿದ್ದ ತಾಯಿಯ ಅನಾರೋಗ್ಯದ ಬಗ್ಗೆ ಬಹಳ ಚಿಂತೆಗೀಡಾಗಿದ್ದರು ಎಂದು ತಿಳಿದುಬಂದಿದೆ. 

ಗರುಡ್ ಕಮಾಂಡೋ ಫೋರ್ಸ್ ಐಎಎಫ್‌ನ ವಿಶೇಷ ಪಡೆಗಳ ಘಟಕವಾಗಿದ್ದು, ನಿರ್ಣಾಯಕ ವಾಯುಪಡೆಯ ನೆಲೆಗಳು ಮತ್ತು ಸ್ಥಾಪನೆಗಳ ರಕ್ಷಣೆ, ಹುಡುಕಾಟ ಮತ್ತು ಪಾರುಗಾಣಿಕಾ ಜೊತೆಗೆ ಭಯೋತ್ಪಾದನೆ ನಿಗ್ರಹ ಮತ್ತು ಒತ್ತೆಯಾಳು ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com