ಇಸ್ರೇಲ್‌ನಲ್ಲಿ ಹಮಾಸ್ ಉಗ್ರರಿಂದ ನನ್ನ ಸಹೋದರಿ ಕುಟುಂಬದ ಭೀಕರ ಹತ್ಯೆ: ನಟಿ ಮಧುರಾ ನಾಯ್ಕ್

ಇಸ್ರೇಲ್‌–ಹಮಾಸ್‌ ನಡುವೆ ನಡೆಯುತ್ತಿರುವ ಕದನದಲ್ಲಿ ನನ್ನ ಸಹೋದರಿ ಹಾಗೂ ಆಕೆಯ ಪತಿಯನ್ನು ಪ್ಯಾಲೆಸ್ಟೀನ್‌ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಬಾಲಿವುಡ್‌ ನಟಿ ಹಾಗೂ ರೂಪದರ್ಶಿ ಮಧುರಾ ನಾಯ್ಕ್ ಹೇಳಿದ್ದಾರೆ.
ಮಧುರಾ ನಾಯ್ಕ್
ಮಧುರಾ ನಾಯ್ಕ್
Updated on

ಮುಂಬಯಿ: ಇಸ್ರೇಲ್‌ – ಪ್ಯಾಲೆಸ್ತೀನ್‌ ಯುದ್ಧದಿಂದ ಅಪಾರ ಹಾನಿ ಆಗುವುದರ ಜೊತೆಗೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಕಡೆ ಗುಂಡಿನ ಸದ್ದು, ಇನ್ನೊಂದೆಡೆ ದುಃಖದ ಕೂಗು. ಎರಡೂ ಕೂಡ ಯುದ್ಧ ಭೂಮಿಯಲ್ಲಿ ಕೇಳುತ್ತಿದೆ.

ಇಸ್ರೇಲ್‌–ಹಮಾಸ್‌ ನಡುವೆ ನಡೆಯುತ್ತಿರುವ ಕದನದಲ್ಲಿ ನನ್ನ ಸಹೋದರಿ ಹಾಗೂ ಆಕೆಯ ಪತಿಯನ್ನು ಪ್ಯಾಲೆಸ್ಟೀನ್‌ ಉಗ್ರರು ಹತ್ಯೆ ಮಾಡಿದ್ದಾರೆ’ ಎಂದು ಬಾಲಿವುಡ್‌ ನಟಿ ಹಾಗೂ ರೂಪದರ್ಶಿ ಮಧುರಾ ನಾಯ್ಕ್ ಹೇಳಿದ್ದಾರೆ.

‘ಸಹೋದರಿ ಒದಾಯ, ಆಕೆಯ ಪತಿಯನ್ನು ಅವರ ಮಕ್ಕಳ ಮುಂದೆಯೇ ಹತ್ಯೆ ಮಾಡಲಾಗಿದೆ’ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇಸ್ರೇಲ್‌ನಲ್ಲಿ ಅವರ ಮಕ್ಕಳ ಕಣ್ಣುಗಳ ಮುಂದೆಯೇ ಇಬ್ಬರನ್ನು ಕೊಲ್ಲಲಾಯಿತು ಎಂದು ಅವರು ಹೇಳಿದ್ದಾರೆ. ಇಸ್ರೇಲ್‌ನಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನನ್ನ ಸಹೋದರಿ ಮತ್ತು ಅವಳ ಪತಿಯನ್ನು ಪ್ಯಾಲೆಸ್ತೀನ್ ಉಗ್ರರು ಮಕ್ಕಳ ಮುಂದೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಇನ್ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿದ್ದಾರೆ. ನಾನು ಯಾವುದೇ ರೀತಿಯ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ ಮತ್ತು ಇಸ್ರೇಲ್‌ನಲ್ಲಿರುವ ಜನರಿಗಾಗಿ ಮತ್ತು ಬಲಿಪಶುಗಳ ಕುಟುಂಬಗಳಿಗಾಗಿ ಪ್ರಾರ್ಥಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ‘ಕಸೌತಿ ಜಿಂದಗಿ ಕೇ’, ‘ಉತ್ತರಾನ್’, ‘ಪ್ಯಾರ್ ಕಿ ಯೇ ಏಕ್ ಕಹಾನಿ’, ‘ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂನ್’ ಮುಂತಾದ ಸೀರಿಯಲ್‌ಗಳಲ್ಲಿ ಮಧುರಾ ನಾಯ್ಕ್ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com