ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ.

'ನಾವು ಗೌತಮಿ ಪರ ಇದ್ದೇವೆ...ಆರೋಪಿಗಳ ರಕ್ಷಣೆಗೆ ಯಾರೂ ಯತ್ನಿಸುತ್ತಿಲ್ಲ: ಅಣ್ಣಾಮಲೈ

25 ವರ್ಷಗಳ ಬಳಿಕ ಪಕ್ಷ ತೊರೆದಿರುವ ನಟಿ ಗೌತಮಿ ತಡಿಮಲ್ಲ ಅವರ ಪರವಾಗಿ ನಾವಿದ್ದೇವೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ.
Published on

ಚೆನ್ನೈ: 25 ವರ್ಷಗಳ ಬಳಿಕ ಪಕ್ಷ ತೊರೆದಿರುವ ನಟಿ ಗೌತಮಿ ತಡಿಮಲ್ಲ ಅವರ ಪರವಾಗಿ ನಾವಿದ್ದೇವೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಅಣ್ಣಾಮಲೈ, 'ನಾವು ಗೌತಮಿ ತಡಿಮಲ್ಲ ಪರವಾಗಿದ್ದೇವೆ. ಅವರು ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ ಮತ್ತು ಪಕ್ಷವು ಅವರ ಪರವಾಗಿದೆ. ಗೌತಮಿ ಅವರಿಗೆ ಎಫ್‌ಐಆರ್ ದಾಖಲಿಸಲು ನಾವು ಬೆಂಬಲ ನೀಡಿದ್ದೆವು. ಆದರೆ ಈಗ ಕೆಲವು ಬಿಜೆಪಿ ಕಾರ್ಯಕರ್ತರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಭಾವಿಸಿದ್ದಾರೆ. ಆದರೆ ಬಿಜೆಪಿಯಲ್ಲಿ ಯಾರೂ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿಲ್ಲ ಮತ್ತು ಅವರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿಲ್ಲ. ಈ ಬಗ್ಗೆ ನಾನು ಗೌತಮಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಂತೆಯೇ ಪೊಲೀಸರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅವರು ಪಕ್ಷ ಬಿಟ್ಟಿರುವುದು ತುಂಬಾ ಬೇಸರದ ಸಂಗತಿ. ಬಿಜೆಪಿಯಲ್ಲಿ ಯಾರೂ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿಲ್ಲ. ಬಿಜೆಪಿ ಜೊತೆ ಅವರ ಸಂಪರ್ಕವಿಲ್ಲ. ಆರೋಪಿ ಗೌತಮಿ ಜೊತೆ 25 ವರ್ಷಗಳಿಂದ ಸ್ನೇಹಿತನಾಗಿ ಮೋಸ ಮಾಡಿದ್ದಾನೆ, ಗೌತಮಿ ಮತ್ತು ಆತನ ನಡುವೆ ಕೇಸ್ ಆಗಿದೆ, ನಾವು ಇಲ್ಲಿ ಗೌತಮಿ ಪರ ಇದ್ದೇವೆ ಎಂದು ಹೇಳಿದ್ದಾರೆ. 
 

X

Advertisement

X
Kannada Prabha
www.kannadaprabha.com