ಒಡಿಶಾ: ಗಾಯಗೊಂಡ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕಿ.ಮೀ ಟ್ರಾಲಿ ಪೆಡಲ್ ತುಳಿದ ಬಾಲಕಿ!

ತನ್ನ ಗಾಯಾಳು ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು 14 ವರ್ಷದ ಬಾಲಕಿಯೊಬ್ಬಳು ಟ್ರಾಲಿ ರಿಕ್ಷಾವನ್ನು 35 ಕಿ.ಮೀ ತುಳಿದಿರುವ ಘಟನೆ ಒಡಿಶಾದ ಭದ್ರಕ್ ನಲ್ಲಿ  ವರದಿಯಾಗಿದೆ.
ಗಾಯಗೊಂಡ ತಂದೆಯೊಂದಿಗೆ ಸುಜಾತಾ
ಗಾಯಗೊಂಡ ತಂದೆಯೊಂದಿಗೆ ಸುಜಾತಾ

ಭದ್ರಕ್: ತನ್ನ ಗಾಯಾಳು ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು 14 ವರ್ಷದ ಬಾಲಕಿಯೊಬ್ಬಳು ಟ್ರಾಲಿ ರಿಕ್ಷಾವನ್ನು 35 ಕಿ.ಮೀ ತುಳಿದಿರುವ ಘಟನೆ ಒಡಿಶಾದ ಭದ್ರಕ್ ನಲ್ಲಿ  ವರದಿಯಾಗಿದೆ.

ಅಕ್ಟೋಬರ್ 23ರಂದು ಈ ಘಟನೆ ನಡೆದಿದ್ದು, ಗುರುವಾರ ಟ್ರಾಲಿಯಲ್ಲಿ ತನ್ನ ತಂದೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕೆಲವು ಸ್ಥಳೀಯರು ಮತ್ತು ಪತ್ರಕರ್ತರು ಭದ್ರಕ್ ಪಟ್ಟಣದ ಮೊಹತಾಬ್ ಛಾಕ್ ಬಳಿ ಬಾಲಕಿಯನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ನಾಡಿಗನ್ ಗ್ರಾಮದ ಬಾಲಕಿ ಸುಜಾತಾ ಸೇಥಿ (14) ತನ್ನ ತಂದೆಯ ಟ್ರಾಲಿಯನ್ನು ತುಳಿಯುತ್ತಾ ತನ್ನ ಗ್ರಾಮದಿಂದ ಸುಮಾರು 14 ಕಿಮೀ ದೂರದಲ್ಲಿರುವ ಧಮ್‌ನಗರ ಆಸ್ಪತ್ರೆಗೆ ತಂದೆಯನ್ನು ಕರೆದೊಯ್ದಿದ್ದಾಳೆ. ಈ ನಡುವೆ, ವೈದ್ಯರು ಆಕೆಯ ತಂದೆಯನ್ನು ಭದ್ರಕ್ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಹಾಗಾಗಿ, ಅಕ್ಟೋಬರ್ 23ರಂದು ತಂದೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆತರಲು ಬಾಲಕಿ ಟ್ರಾಲಿಯನ್ನು 35 ಕಿಮೀ ತುಳಿದಿದ್ದಾಳೆ. ಅಕ್ಟೋಬರ್ 22ರಂದು ನಡೆದ ಗುಂಪು ಘರ್ಷಣೆಯಲ್ಲಿ ಆಕೆಯ ತಂದೆ ಸಂಭುನಾಥ್ ಗಾಯಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಆದರೆ, ತಂದೆಗೆ ಶಸ್ತ್ರಚಿಕಿತ್ಸೆ ನಡೆಸಬೇಕಿರುವುದಿರಂದ ವಾರದ ನಂತರ ಬರುವಂತೆ ಭದ್ರಕ್ ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂದು ಸುಜಾತಾ ಹೇಳಿದ್ದಾರೆ. ‘ತಂದೆಯನ್ನು ಕರೆದೊಯ್ಯಲು ಖಾಸಗಿ ವಾಹನ ಅಥವಾ ಆಂಬ್ಯುಲೆನ್ಸ್‌ಗೆ ಬಾಡಿಗೆ ಕೊಡಲು ನನ್ನ ಬಳಿ ಹಣವಿಲ್ಲ. ಆದ್ದರಿಂದ, ನಾನು ಅವರನ್ನು (ಸಂಭುನಾಥ್) ಆಸ್ಪತ್ರೆಗೆ ಕರೆತರಲು ನನ್ನ ತಂದೆ ಬಳಸುತ್ತಿದ್ದ ಟ್ರಾಲಿಯನ್ನೇ ಬಳಸಿದ್ದೇನೆ’ ಎಂದು ಅವರು ಹೇಳಿದರು.

ಈ ಮಧ್ಯೆ, ಭದ್ರಕ್ ಶಾಸಕ ಸಂಜೀಬ್ ಮಲ್ಲಿಕ್ ಮತ್ತು ಧಮ್‌ನಗರದ ಮಾಜಿ ಶಾಸಕ ರಾಜೇಂದ್ರ ದಾಸ್ ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿದರು. ಅವರ ಮಧ್ಯಸ್ಥಿಕೆಯ ಮೇರೆಗೆ, ಅವರನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಅನ್ನು ವ್ಯವಸ್ಥೆಗೊಳಿಸಲಾಯಿತು. ಸಿಡಿಎಂಒ ಅವರು ಶಂಬುನಾಥ ಅವರ ಶಸ್ತ್ರಚಿಕಿತ್ಸೆ ನಡೆಸಿ ಚೇತರಿಸಿಕೊಳ್ಳುವವರೆಗೂ ಆಸ್ಪತ್ರೆಯಲ್ಲಿಯೇ ಇರಲು ವ್ಯವಸ್ಥೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com