ಭಾರತ-ಸೌದಿ ನಡುವೆ 24 ಒಪ್ಪಂದಗಳಿಗೆ ಸಹಿ!

ಭಾರತ-ಸೌದಿ ಇಂದು 24 ಒಪ್ಪಂದಗಳಿಗೆ ಸಹಿ ಹಾಕಿವೆ. ಮಾಹಿತಿ ತಂತ್ರಜ್ಞಾನ, ಕೃಷಿ, ಔಷಧ (ಫಾರ್ಮಾಸ್ಯುಟಿಕಲ್ಸ್), ಪೆಟ್ರೋಕೆಮಿಕಲ್ಸ್ ಮತ್ತು ಮಾನವ ಸಂಪನ್ಮೂಲಗಳು ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ಇದಾಗಿದೆ.
ಭಾರತ-ಸೌದಿ ನಡುವೆ 24 ಒಪ್ಪಂದಗಳಿಗೆ ಸಹಿ
ಭಾರತ-ಸೌದಿ ನಡುವೆ 24 ಒಪ್ಪಂದಗಳಿಗೆ ಸಹಿ

ನವದೆಹಲಿ: ಭಾರತ-ಸೌದಿ ಇಂದು 24 ಒಪ್ಪಂದಗಳಿಗೆ ಸಹಿ ಹಾಕಿವೆ. ಮಾಹಿತಿ ತಂತ್ರಜ್ಞಾನ, ಕೃಷಿ, ಔಷಧ (ಫಾರ್ಮಾಸ್ಯುಟಿಕಲ್ಸ್), ಪೆಟ್ರೋಕೆಮಿಕಲ್ಸ್ ಮತ್ತು ಮಾನವ ಸಂಪನ್ಮೂಲಗಳು ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳು ಇದಾಗಿದೆ.

ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಹೆಚ್ ಪಿ, ವಿಎಫ್ಎಸ್ ಗ್ಲೋಬಲ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಉಭಯ ರಾಷ್ಟ್ರಗಳ ಖಾಸಗಿ ಸಂಸ್ಥೆಗಳ ನಡುವೆಯೂ ಒಪ್ಪಂದ ನಡೆದಿದೆ. 

ಎಂಒಯುಗಳನ್ನು ಇನ್ವೆಸ್ಟ್ ಇಂಡಿಯಾ ಹಾಗೂ ಸೌದಿ ಅರೇಬಿಯಾದ ಹೂಡಿಕೆ ಸಚಿವಾಲಯ ಸುಗಮಗೊಳಿಸಿದ್ದು ಜಿ-20 ಸಭೆ ಬಳಿಕ ನಡೆದ ಸಭೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಸೌದಿ ಪ್ರಿನ್ಸ್ ಶನಿವಾರ ಮೂರು ದಿನಗಳ ಭೇಟಿಗಾಗಿ ದೆಹಲಿಗೆ ಆಗಮಿಸಿದ್ದರು. ಸಂಕ್ಷಿಪ್ತ ಹೇಳಿಕೆಯಲ್ಲಿ, ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಜಿ-20 ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಭಾರತವನ್ನು ಅಭಿನಂದಿಸಿದರು.

"ನಮ್ಮ ದೇಶಗಳು, ಜಿ 20 ದೇಶಗಳು ಮತ್ತು ಇಡೀ ಜಗತ್ತಿಗೆ ಪ್ರಯೋಜನವನ್ನು ತರುವಂತಹ ಬಹಳಷ್ಟು ಘೋಷಣೆಗಳನ್ನು ಮಾಡಲಾಗಿದೆ. ಹಾಗಾಗಿ ಅತ್ಯುತ್ತಮ ಸಭೆ ನಡೆಸಲಾಗಿದೆ ಎಂದು ಭಾರತಕ್ಕೆ ಹೇಳಲು ಬಯಸುತ್ತೇನೆ, ಮತ್ತು ಉಭಯ ದೇಶಗಳಿಗೆ ಭವಿಷ್ಯವನ್ನು ಸೃಷ್ಟಿಸುವತ್ತ ಕೆಲಸ ಮಾಡುತ್ತೇವೆ" ಎಂದು ಸೌದಿ ಪ್ರಿನ್ಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com