ಸುಪ್ರೀಂ ಕೋರ್ಟ್ ವಕೀಲ ಪತ್ನಿಯನ್ನು ಕೊಂದು 24 ಗಂಟೆಗಳ ಕಾಲ ಮನೆಯ ಸ್ಟೋರ್ ರೂಂನಲ್ಲಿ ತಲೆಮರೆಸಿಕೊಂಡಿದ್ದ ಪತಿ ಬಂಧನ

ಸುಪ್ರೀಂ ಕೋರ್ಟ್ ವಕೀಲ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಮನೆಯ ಸ್ಟೋರ್ ರೂಂನಲ್ಲಿ 24 ಗಂಟೆಗಳ ಕಾಲ ತಲೆಮರೆಸಿಕೊಂಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದ ವಕೀಲೆ ರೇಣು ಸಿನ್ಹಾ
ಹತ್ಯೆಯಾದ ವಕೀಲೆ ರೇಣು ಸಿನ್ಹಾ

ನೋಯ್ಡಾ: ಸುಪ್ರೀಂ ಕೋರ್ಟ್ ವಕೀಲ ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಮನೆಯ ಸ್ಟೋರ್ ರೂಂನಲ್ಲಿ 24 ಗಂಟೆಗಳ ಕಾಲ ತಲೆಮರೆಸಿಕೊಂಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

62 ವರ್ಷದ ಮಾಜಿ ಭಾರತೀಯ ಕಂದಾಯ ಸೇವೆ ಅಧಿಕಾರಿಯೊಬ್ಬರು ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ತನ್ನ ಬಂಗಲೆಯಲ್ಲಿ ಸುಪ್ರೀಂ ಕೋರ್ಟ್ ವಕೀಲ ಪತ್ನಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಆರೋಪಿ ನಿತಿನ್ ನಾಥ್ ಸಿನ್ಹಾ ಕಳೆದ ರಾತ್ರಿ ಪತ್ನಿಯನ್ನು ಕೊಂದು ಮನೆಯ ಸ್ಟೋರ್ ರೂಂನಲ್ಲಿ ಅಡಗಿಕೊಂಡಿದ್ದ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. 

ಮಾಹಿತಿ ಪ್ರಕಾರ, ವಕೀಲರ ಪತ್ನಿಯನ್ನು ಕೊಂದ ನಂತರ ನಿತಿನ್ ನಾಥ್ ಅವರು 24 ಗಂಟೆಗಳಿಗೂ ಹೆಚ್ಚು ಕಾಲ ಮನೆಯ ಸ್ಟೋರ್ ರೂಂನಲ್ಲಿ ಅಡಗಿಕೊಂಡಿದ್ದರು. ಆರೋಪಿಯ ಪತ್ನಿ 61 ವರ್ಷದ ರೇಣು ಸಿನ್ಹಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿದ್ದರು. ದಂಪತಿ ನಡುವೆ ಬಹಳ ದಿನಗಳಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ನೋಯ್ಡಾದ ಸೆಕ್ಟರ್ 30ರ ಮನೆಯೊಂದರಲ್ಲಿ ಮಹಿಳಾ ಸುಪ್ರೀಂ ಕೋರ್ಟ್ ವಕೀಲರ ಶವ ಭಾನುವಾರ ಪತ್ತೆಯಾಗಿತ್ತು. ಮಹಿಳಾ ವಕೀಲರು ಎರಡು ದಿನಗಳ ಕಾಲ ಫೋನ್ ತೆಗೆಯದಿದ್ದಾಗ, ಆಕೆಯ ಸಹೋದರ ಕೆಲವು ಅಹಿತಕರ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಮನೆಯ ಬೀಗವನ್ನು ಒಡೆದು ಸ್ನಾನಗೃಹದಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ವೇಳೆ ಪತಿ ತಲೆಮರೆಸಿಕೊಂಡಿರುವ ಬಗ್ಗೆ ಭಾನುವಾರ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ಭಾನುವಾರ ತಡರಾತ್ರಿಯವರೆಗೂ ನಡೆದ ತನಿಖೆಯಲ್ಲಿ ಕೊನೆಗೂ ಮಹಿಳೆಯ ಪತಿ ಮನೆಯ ಸ್ಟೋರ್ ರೂಂನಲ್ಲಿ ಪತ್ತೆಯಾಗಿದ್ದಾನೆ. ಕೊಲೆಯಾದ ನಂತರ ಪತಿ ಸುಮಾರು 24 ಗಂಟೆಗಳ ಕಾಲ ಈ ಸ್ಟೋರ್ ರೂಂನಲ್ಲಿ ಅಡಗಿಕೊಂಡಿದ್ದ. ಸದ್ಯ ಪತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಸ್ಟೋರ್ ರೂಂನಲ್ಲಿ ಏಕೆ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಮಹಿಳೆ ತನ್ನ ಪತಿ ನಿತಿನ್ ನಾಥ್ ಸಿನ್ಹಾ ಅವರೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಅವರ ಮಗ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ, ಆತ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಭಾರತಕ್ಕೆ ಬರುತ್ತಾನೆ.

ಗಂಡ ಹೆಂಡತಿ ನಡುವೆ ಆಗಾಗ ಜಗಳ
ಅಕ್ಕಪಕ್ಕದ ಜನರಿಂದ ಬಂದ ಮಾಹಿತಿ ಪ್ರಕಾರ ಪತಿ-ಪತ್ನಿಯ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು. ಈ ವೈಮನಸ್ಯದಿಂದಾಗಿ ಅನೇಕ ದಿನ ವಾಗ್ವಾದ ನಡೆದಿದ್ದವು. ಪತಿ-ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಒಂದೇ ಮನೆಯಲ್ಲಿ ವಾಸವಾಗಿದ್ದರು. ಮಗ ಬಂದಾಗಲೆಲ್ಲ ಅಪ್ಪನ ಜೊತೆ ಮಾತಾಡೋದು ಕಡಿಮೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯನ್ನು ಕೊಲೆ ಮಾಡಲಾಗಿದ್ದು, ಪತಿ ಸ್ಟೋರ್ ರೂಂನಲ್ಲಿ ತಲೆಮರೆಸಿಕೊಳ್ಳಲು ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಲಿದೆ.

ಮನೆ ಮಾರಾಟಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವಿವ ಭಿನ್ನಾಭಿಪ್ರಾಯವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ನೋಯ್ಡಾ ಪೊಲೀಸರು ಹೇಳಿದ್ದಾರೆ. ರೇಣು ಅವರ ಪತಿ ಬಂಗಲೆಯನ್ನು ಮಾರಾಟ ಮಾಡಲು ಬಯಸಿದ್ದರು. ಈ ಡೀಲ್ ಗೆ ಖರೀದಿದಾರರಿಂದ ಟೋಕನ್ ಹಣವನ್ನೂ ಪಡೆದಿದ್ದರು. ಆದರೆ, ಪತ್ನಿ ರೇಣು ಮನೆ ಮಾರಲು ಸಿದ್ಧವಿರಲಿಲ್ಲ. ಈ ಬಂಗಲೆ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com