ಗಡಿ ಮೂಲಸೌಕರ್ಯದಲ್ಲಿ ಭಾರತ ಚೀನಾವನ್ನು 4-5 ವರ್ಷಗಳಲ್ಲಿ ಹಿಂದಿಕ್ಕಲಿದೆ: ಬಿಆರ್ ಒ ಮುಖ್ಯಸ್ಥ

ಭಾರತ ಚೀನಾದೊಂದಿಗೆ ಹಂಚಿಕೊಂಡಿರುವ ಗಡಿ ಭಾಗದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಳೆದ 3 ವರ್ಷಗಳಲ್ಲಿ ವೇಗವಾಗಿ ಕೆಲಸಗಳಾಗುತ್ತಿವೆ ಎಂದು ಗಡಿ ರಸ್ತೆಗಳ ಸಂಸ್ಥೆ ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಹೇಳಿದ್ದಾರೆ.
ಮೂಲಸೌಕರ್ಯ ಕಾಮಗಾರಿ
ಮೂಲಸೌಕರ್ಯ ಕಾಮಗಾರಿ
Updated on

ನವದೆಹಲಿ: ಭಾರತ ಚೀನಾದೊಂದಿಗೆ ಹಂಚಿಕೊಂಡಿರುವ ಗಡಿ ಭಾಗದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಳೆದ 3 ವರ್ಷಗಳಲ್ಲಿ ವೇಗವಾಗಿ ಕೆಲಸಗಳಾಗುತ್ತಿವೆ ಎಂದು ಗಡಿ ರಸ್ತೆಗಳ ಸಂಸ್ಥೆ (ಬಿಆರ್ ಒ) ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ಹೇಳಿದ್ದಾರೆ.

ಜಗತ್ತಿನ ಅತಿ ದೊಡ್ಡ 3 ಡಿ ಕಾಂಕ್ರಿಟ್ ಪ್ರಿಂಟೆಡ್ ಕ್ಯಾಂಪಸ್ ಎಂದೇ ಖ್ಯಾತಿ ಪಡೆದಿರುವ ಬಿಆರ್ ಒದ ಏರ್ ಡಿಸ್ಪಾಚ್ ಯುನಿಟ್ ನ ಕಾಮಗಾರಿ ಪರಿಶೀಲನೆಗಾಗಿ ಚಂಡೀಗಢಕ್ಕೆ ಆಗಮಿಸಿದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  

ಹೊಸ ತಂತ್ರಜ್ಞಾನ ಹಾಗೂ ಬಜೆಟ್ ನ್ನು ಹೆಚ್ಚಿಸುವ ಮೂಲಕ ಗಡಿ ಭಾಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬಿಆರ್ ಒ ಗೆ ಭಾರತ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ಕಳೆದ 2 ವರ್ಷಗಳಲ್ಲಿ ಭಾರತ ಸರ್ಕಾರ ಬಜೆಟ್ ನ್ನು ಶೇ.100 ರಷ್ಟು ಹೆಚ್ಚಿಸಿದೆ, ಕಳೆದ ಕೆಲವು ವರ್ಷಗಳಲ್ಲಿ 8,000 ಕೋಟಿ ರೂಪಾಯಿ ಮೌಲ್ಯದ 300 ಬಿಆರ್ ಒ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಡಿಜಿ ಹೇಳಿದ್ದಾರೆ.

"ಕಳೆದ ಮೂರು ವರ್ಷಗಳಲ್ಲಿ, ನಾವು 295 ರಸ್ತೆ ಯೋಜನೆಗಳು, ಸೇತುವೆಗಳು, ಸುರಂಗಗಳು ಮತ್ತು ವಿಮಾನ ನಿಲ್ದಾಣಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದೇವೆ" ಎಂದು ಚೌಧರಿ ಹೇಳಿದ್ದಾರೆ. 

ಇನ್ನು 4 ತಿಂಗಳಲ್ಲಿ 60 ಕ್ಕೂ ಹೆಚ್ಚಿನ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ, ಇನ್ನು 4-5 ವರ್ಷಗಳಲ್ಲಿ ಗಡಿ ಮೂಲಸೌಕರ್ಯದಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಚೌಧರಿ ವಿಶ್ವಾಸ ವ್ಯಕ್ತಪಾಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com