'ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿರಿ': ಮ್ಯಾಪ್ ವಿವಾದದ ನಡುವೆಯೇ ಚೀನಾಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ
ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿರಿ ಎಂದು ಹೇಳುವ ಮೂಲಕ ಚೀನಾಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
Published: 08th September 2023 04:48 PM | Last Updated: 08th September 2023 08:53 PM | A+A A-

ಪ್ರಧಾನಿ ಮೋದಿ
ನವದೆಹಲಿ: ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿರಿ ಎಂದು ಹೇಳುವ ಮೂಲಕ ಚೀನಾಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಚೀನಾದ ವಿವಾದಿತ ಮ್ಯಾಪ್ ಕುರಿತು ಪರೋಕ್ಷವಾಗಿ ವಾಗ್ಜಾಳಿ ನಡೆಸಿದ ಪ್ರಧಾನಿ ಮೋದಿ, 'ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಖಚಿತಪಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎನ್ನುವ ಮೂಲಕ ಚೀನಾಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ. ಭಾರತದ ಅವಿಭಾಜ್ಯ ಪ್ರದೇಶಗಳಾದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಅನ್ನು ತಮ್ಮ ಇತ್ತೀಚಿನ ಆವೃತ್ತಿಯ ನಕ್ಷೆಯಲ್ಲಿ ಸೇರಿಸುವ ಮೂಲಕ ಮೂಗು ತೂರಿಸಿದ್ದ ಚೀನಾ ನಡೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಜಿ-20 ಶೃಂಗಸಭೆ: ಪ್ರಧಾನಿ ಮೋದಿ ವಿಶ್ವ ನಾಯಕರೊಂದಿಗೆ 15ಕ್ಕೂ ಹೆಚ್ಚು ದ್ವೀಪಕ್ಷೀಯ ಸಭೆ
ಪೂರ್ವ ಏಷ್ಯಾ ಮತ್ತು ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಮಾತನಾಡಿದ ಅವರು ಸಾರ್ವಭೌಮತ್ವ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಬಂದರೆ ಸಹಿಸಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಕಾನೂನುಗಳನ್ನು ಸಂಪೂರ್ಣವಾಗಿ ಅನುಸರಿಸುವ ನಿರ್ಣಾಯಕ ಪ್ರಾಮುಖ್ಯತೆ ಇದೆ. ಅಂತರರಾಷ್ಟ್ರೀಯ ಕಾನೂನುಗಳಿಗೆ ಸಂಪೂರ್ಣವಾಗಿ ಬದ್ಧವಾಗಿರುವುದು ಅತ್ಯಗತ್ಯ, ಮತ್ತು ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬಲಪಡಿಸಲು ಪ್ರತಿಯೊಬ್ಬರ ಬದ್ಧತೆ ಮತ್ತು ಪ್ರಯತ್ನಗಳು ಅಗತ್ಯ ಎಂದು ಹೇಳಿದರು.
Menjelang East Asia Summit yang diadakan di Jakarta. Kami melakukan diskusi produktif mengenai peningkatan kerja sama yang lebih erat di bidang-bidang utama untuk meningkatkan pemberdayaan manusia. pic.twitter.com/haJ9qEdXWP
— Narendra Modi (@narendramodi) September 7, 2023
ಅಂತೆಯೇ ಪ್ರಸ್ತುತ ಜಾಗತಿಕ ಭೂದೃಶ್ಯವು ಅನಿಶ್ಚಿತತೆಯಿಂದ ಸುತ್ತುವರಿದಿದೆ. ಭಯೋತ್ಪಾದನೆ, ಉಗ್ರವಾದ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳು ದೊಡ್ಡ ಸವಾಲುಗಳಾಗಿವೆ. ಈ ಸವಾಲುಗಳನ್ನು ಎದುರಿಸುವಲ್ಲಿ ಬಹುಪಕ್ಷೀಯತೆ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ಕ್ರಮದ ಮಹತ್ವವನ್ನು ಅವರು ಒತ್ತಿ ಹೇಳಿದರು.
ಇದನ್ನೂ ಓದಿ: 'ನಮಸ್ಕಾರ, ಪವಿತ್ರ ಭೂಮಿ ಭಾರತಕ್ಕೆ ನಿಮಗೆ ಸ್ವಾಗತ': ಜಿ20 ಗಣ್ಯರನ್ನು ಭಾರತೀಯ ಶೈಲಿಯಲ್ಲಿ ಸ್ವಾಗತಿಸಲು ಸಚಿವರು ಸಜ್ಜು
ಸಾಮೂಹಿಕ ಹೋರಾಟ ಅಗತ್ಯ:
ಭಯೋತ್ಪಾದನೆ ವಿರುದ್ಧ ಸಾಮೂಹಿಕವಾಗಿ ಹೋರಾಡುವ ತುರ್ತು ಅಗತ್ಯ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಸೈಬರ್-ತಪ್ಪು ಮಾಹಿತಿಯ ಕುರಿತು ಅವರು ೧೨ ಅಂಶಗಳ ಪ್ರಸ್ತಾವನೆ ಪಟ್ಟಿ ಮಾಡಿದ ಅವರು ಜಾಗತಿಕ ನಿಯಮಗಳಿಗೆ ಸಂಪೂರ್ಣವಾಗಿ ಅಂಟಿಕೊಳ್ಳುವುದು ಬಹಳ ಮುಖ್ಯ, ಮತ್ತು ಎಲ್ಲಾ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆ ಕಾಪಾಡಿಕೊಳ್ಳಲು ಪ್ರತಿಯೊಬ್ಬರ ಜವಾಬ್ದಾರಿ. ಇದಕ್ಕಾಗಿ ಜಂಟಿ ಕ್ರಮಗಳು ಸಹ ಅಗತ್ಯವಿದೆ” ಎಂದು ಹೇಳಿದ್ದಾರೆ.
ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಮೋದಿಯವರ ಭಾಷಣದಲ್ಲಿ ಈ ಹೇಳಿಕೆಯನ್ನು ನೀಡಲಾಗಿದ್ದು, ಇದು ಕಾರ್ಯತಂತ್ರದ ಮಾತುಕತೆಗಾಗಿ ಪ್ರಮುಖ ಇಂಡೋ-ಪೆಸಿಫಿಕ್ ವೇದಿಕೆಯಾಗಿದೆ. ನಾಳೆಯಿಂದ ನಡೆಯಲಿರುವ 18ನೇ ಜಿ-20 ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಎಚ್ಚರಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಭಾರತ-ಆಸಿಯಾನ್ ಸಹಕಾರ ಬಲಪಡಿಸಲು 12 ಅಂಶಗಳ ಪ್ರಸ್ತಾವನೆ ಮಂಡಿಸಿದ ಪ್ರಧಾನಿ ಮೋದಿ
ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಪ್ರಮಾಣಿತ ನಕ್ಷೆ ಎಂದು ಕರೆಯಲ್ಪಡುವ ರಾಜ್ಯ ಸುದ್ದಿ ಪ್ರಕಟಣೆಯ ಸಾಮಾಜಿಕ ಮಾಧ್ಯಮ ವೇದಿಕೆಗಳು, ಗ್ಲೋಬಲ್ ಟೈಮ್ಸ್, ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರ ಸೇರಿದಂತೆ ವಿವಾದಿತ ಪ್ರದೇಶಗಳನ್ನು ಒಳಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಖಡಕ್ ಸಂದೇಶ ರವಾನಿಸಿದ್ದಾರೆ.