ಗುಜರಾತ್: ದ್ವೇಷಪೂರಿತ ಭಾಷಣ, ಬಲಪಂಥೀಯ ಕಾರ್ಯಕರ್ತೆ ಕಾಜಲ್ ಬಂಧನ

ಉನಾ ಪಟ್ಟಣದಲ್ಲಿ ಏಪ್ರಿಲ್ 1 ರಂದು ನಡೆದಿದ್ದ ಕೋಮು ಘರ್ಷಣೆಗೆ ಕಾರಣವಾದ ದ್ವೇಷಪೂರಿತ ಭಾಷಣ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಅವರನ್ನು ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಜಲ್ ಹಿಂದೂಸ್ತಾನಿ
ಕಾಜಲ್ ಹಿಂದೂಸ್ತಾನಿ

ಗುಜರಾತ್: ಉನಾ ಪಟ್ಟಣದಲ್ಲಿ ಏಪ್ರಿಲ್ 1 ರಂದು ನಡೆದಿದ್ದ ಕೋಮು ಘರ್ಷಣೆಗೆ ಕಾರಣವಾದ ದ್ವೇಷಪೂರಿತ ಭಾಷಣ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಅವರನ್ನು ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಉನಾದಲ್ಲಿ ಕಾಜಲ್ ಹಿಂದೂಸ್ತಾನಿ ಪೊಲೀಸರ ಮುಂದೆ ಶರಣಾದ ನಂತರ ಆಕೆಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ವಿಟರ್ ಪ್ರೊಪೈಲ್ ನಲ್ಲಿ ಉದ್ಯಮಿ, ಸಂಶೋಧನಾ ವಿಶ್ಲೇಷಕ, ಸಾಮಾಜಿಕ ಕಾರ್ಯಕರ್ತೆ, ರಾಷ್ಟ್ರೀಯತಾವಾದಿ ಮತ್ತು "ಹೆಮ್ಮೆಯ ಭಾರತೀಯಳು ಎಂದು ಹೇಳಿಕೊಂಡಿರುವ ಹಿಂದೂಸ್ತಾನಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 92,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ವಿಶ್ವ ಹಿಂದೂ ಪರಿಷತ್ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಪಾಲ್ಗೊಳುತ್ತಿದ್ದರು. 

ಮಾರ್ಚ್ 30 ರಂದು ರಾಮ ನವಮಿಯಂದು ವಿಎಚ್‌ಪಿ ಆಯೋಜಿಸಿದ್ದ ಹಿಂದೂ ಸಮುದಾಯದ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ನೀಡಿದ ಎರಡು ದಿನದ ನಂತರ ಹಿಂದೂಸ್ತಾನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು,ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶ) ಅಡಿಯಲ್ಲಿ ಏಪ್ರಿಲ್ 2 ರಂದು ಎಫ್ ಐಆರ್ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com