ತಮಿಳುನಾಡು: ಜಾತಿ ಘರ್ಷಣೆಯಲ್ಲಿ 9 ಮಂದಿ ದಲಿತರಿಗೆ ಗಾಯ, ಆರು ಮಂದಿಯ ಬಂಧನ

ಜಾತಿ ಘರ್ಷಣೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ಕೃಷ್ಣಗಿರಿ ಜಿಲ್ಲೆಯ ಅಂಕೆಟ್ಟಿ ಬಳಿಯ ಕೊಟ್ಟಾಯೂರು ಗ್ರಾಮದಲ್ಲಿ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಧರ್ಮಪುರಿ: ಜಾತಿ ಘರ್ಷಣೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿರುವ ಘಟನೆ ಕೃಷ್ಣಗಿರಿ ಜಿಲ್ಲೆಯ ಅಂಕೆಟ್ಟಿ ಬಳಿಯ ಕೊಟ್ಟಾಯೂರು ಗ್ರಾಮದಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ, ಗುರುವಾರ ರಾತ್ರಿ ಮೇಲ್ವರ್ಗದ ಎಂ ಮೋಹನ್ (21) ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರು 'ಆಕಸ್ಮಿಕವಾಗಿ' ದಲಿತರಾದ ಎಸ್. ಮಾರಲಿಂಗಮ್ (38) ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದು ಅದು ವಿಕೋಪಕ್ಕೆ ತಿರುಗಿದೆ. ಮನೆಗೆ ಮರಳಿದ ಮೋಹನ್ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಅವರು ಮರಲಿಂಗಮ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ನಂತರ, ಮಾರಲಿಂಗಂ ತಮ್ಮ ನಿವಾಸಕ್ಕೆ ತೆರಳಿ ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ದಾಳಿಯ ಬಗ್ಗೆ ವಿವರಣೆ ಕೇಳಲು 10ಕ್ಕೂ ಹೆಚ್ಚು ಜನರು ಮಾರಲಿಂಗಂ ಜೊತೆ ತೆರಳಿದ್ದಾರೆ. ಈ ವೇಳೆ, ಮೋಹನ್ ಇತರರೊಂದಿಗೆ ಸೇರಿ ಗ್ರಾಮದಲ್ಲಿ ದೀಪಗಳನ್ನು ಆಫ್ ಮಾಡಿ ದಲಿತರ ಮೇಲೆ ಚಾಕು ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ, ಜೀನ್ಮನಾಥಂ ದೇವಸ್ಥಾನದ ಉತ್ಸವದ ಬಳಿ ಭದ್ರತೆಯಲ್ಲಿ ತೊಡಗಿದ್ದ ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದ್ದಾರೆ. ಆರು ಜನರನ್ನು ಪೊಲೀಸರು ರಕ್ಷಿಸಿದ್ದು, ಗಾಯಾಳುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. 

ಡೆಂಕಣಿಕೋಟೆ ಡಿಎಸ್‌ಪಿ ಸಿ.ಮುರಳಿ ಮಾತನಾಡಿ, ‘ಕುಡಿತದ ಅಮಲಿನಲ್ಲಿ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಒಂಬತ್ತು ಮೇಲ್ಜಾತಿಯ ಮತ್ತು ಮತ್ತು ಆರು ಮಂದಿ ದಲಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹತ್ತಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಕೊಟ್ಟಾಯೂರು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಗಾಯಗೊಂಡವರೆಲ್ಲರ ಪರಿಸ್ಥಿತಿ ಸ್ಥಿರವಾಗಿದೆ. ಆತಂಕ ಪಡುವ ಅಗತ್ಯವಿಲ್ಲ. ಪರಿಸ್ಥಿತಿ ಸಹಜವಾಗಿದೆ. ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. 

ದಲಿತರು ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 147,148 ಅಡಿಯಲ್ಲಿ ಗಲಭೆ, ಅಶ್ಲೀಲ ಭಾಷೆ ಬಳಸಿದ್ದಕ್ಕಾಗಿ ಐಪಿಸಿ 294, ಸ್ವಯಂಪ್ರೇರಿತ ಗಾಯಕ್ಕಾಗಿ ಐಪಿಸಿ 323, 324 ಮತ್ತು ಕೊಲೆ ಯತ್ನಕ್ಕಾಗಿ ಐಪಿಸಿ 307 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಹತ್ತು ಜನರ ವಿರುದ್ಧ ಎಸ್‌ಸಿ/ಎಸ್‌ಟಿ ಪಿಒಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ, ಮೇಲ್ಜಾತಿಯವರು ನೀಡಿರುವ ದೂರಿನ ಆಧಾರದ ಮೇಲೆ, ಗಲಭೆಗಾಗಿ 147,148, ಅಶ್ಲೀಲ ಭಾಷೆ ಬಳಸಿದ್ದಕ್ಕಾಗಿ ಐಪಿಸಿ 294, 323, 324 ಸ್ವಯಂಪ್ರೇರಿತ ಗಾಯವನ್ನುಂಟು ಮಾಡಿದ್ದಕ್ಕಾಗಿ ಮತ್ತು ಐಪಿಸಿ 307ರ ಅಡಿಯಲ್ಲಿ ಕೊಲೆ ಯತ್ನಕ್ಕಾಗಿ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com