ಪತ್ನಿಯ ಹುಟ್ಟುಹಬ್ಬಕ್ಕೆ ಕೇಕ್ ಖರೀದಿಸಲು ವಂಚಕ ಸುಕೇಶ್ ಚಂದ್ರಶೇಖರ್‌ಗೆ ದೆಹಲಿ ಕೋರ್ಟ್ ಅನುಮತಿ
ತನ್ನ ಪತ್ನಿಯ ಹುಟ್ಟುಹಬ್ಬಕ್ಕಾಗಿ ಜೈಲಿನ ಬೇಕರಿಯಲ್ಲಿ ಕೇಕ್ ಖರೀದಿಸಲು ಮಂಡೋಲಿ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್‌ಗೆ ಇಲ್ಲಿನ ನ್ಯಾಯಾಲಯವು ಅನುಮತಿ ನೀಡಿದ್ದು, ಆತನಿಗೆ 'ತಮ್ಮ ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ವಿಶ್ವಾಸವನ್ನು ನೀಡಬೇಕಾಗಿದೆ' ಎಂದಿದೆ.
Published: 27th April 2023 08:21 PM | Last Updated: 27th April 2023 08:55 PM | A+A A-

ಸುಕೇಶ್ ಚಂದ್ರಶೇಖರ್
ನವದೆಹಲಿ: ತನ್ನ ಪತ್ನಿಯ ಹುಟ್ಟುಹಬ್ಬಕ್ಕಾಗಿ ಜೈಲಿನ ಬೇಕರಿಯಲ್ಲಿ ಕೇಕ್ ಖರೀದಿಸಲು ಮಂಡೋಲಿ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್‌ಗೆ ಇಲ್ಲಿನ ನ್ಯಾಯಾಲಯವು ಅನುಮತಿ ನೀಡಿದ್ದು, ಆತನಿಗೆ 'ತಮ್ಮ ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ವಿಶ್ವಾಸವನ್ನು ನೀಡಬೇಕಾಗಿದೆ' ಎಂದಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣ ಮತ್ತು ಹಲವಾರು ಜನರನ್ನು ವಂಚಿಸಿದ ಆರೋಪದ ಮೇಲೆ ದಂಪತಿ ಇಬ್ಬರು ಮಂಡೋಲಿ ಜೈಲು ಪಾಲಾಗಿದ್ದಾರೆ.
ಏಪ್ರಿಲ್ 28 ರಂದು ಸುಕೇಶ್ ಚಂದ್ರಶೇಖರ್ ಅವರ ಪತ್ನಿ ಲೀನಾ ಪೌಲೋಸ್ ಅವರಿಗೆ ಕೇಕ್ ಹಸ್ತಾಂತರಿಸುವಂತೆ ಮಂಡೋಲಿ ಜೈಲಿನ ಅಧೀಕ್ಷಕರಿಗೆ ನ್ಯಾಯಾಲಯ ಸೂಚಿಸಿದೆ.
ಸುಕೇಶ್ ಚಂದ್ರಶೇಖರ್ ಮನವಿಯು 'ಯಾವುದೇ ಕಾನೂನಾತ್ಮಕ ಅಂಶಗಳಿಗಿಂತ ಮಾನವನ ಭಾವನೆಯ ಮೇಲೆ ಹೆಚ್ಚು' ಎಂದು ಕೇಂದ್ರೀಕೃತವಾಗಿದೆ ಎಂಬುದನ್ನು ಗಮನಿಸಿದ ವಿಶೇಷ ನ್ಯಾಯಾಧೀಶ ಶೈಲೇಂದರ್ ಮಲಿಕ್, 'ಅದು ಹೇಗಿದೆಯೋ ಹಾಗೆಯೇ ಇರಲಿ, ವಿಚಾರಣಾಧೀನ ಕೈದಿಯು ಆತನ ಕುಟುಂಬ ಸದಸ್ಯರು ಅಥವಾ ಸಂಬಂಧಿಗಳೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಹೊಂದಲು ಅವಕಾಶವನ್ನು ನೀಡಬೇಕಾಗಿದೆ' ಎಂದಿದ್ದಾರೆ.
ಇದನ್ನೂ ಓದಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮತ್ತೊಂದು ಭಾವನಾತ್ಮಕ ಪತ್ರ ಬರೆದ ವಂಚಕ ಸುಕೇಶ್ ಚಂದ್ರಶೇಖರ್
ಆದ್ದರಿಂದ, ಸಂಬಂಧಿತ ಸುಕೇಶ್ ಚಂದ್ರಶೇಖರ್ ಅವರು ತಮ್ಮ ಖೈದಿಗಳ ನಿಧಿಯಿಂದ ಮಂಡೋಲಿ ಜೈಲಿನ ಬೇಕರಿಯಿಂದಲೇ ಕೇಕ್ ಅನ್ನು ಖರೀದಿಸಲು ಪ್ರಯತ್ನಿಸುತ್ತಿರುವುದರಲ್ಲಿ ನನಗೆ ಯಾವುದೇ ಅಡ್ಡಿ ಕಂಡುಬಂದಿಲ್ಲ ಎಂದು ನ್ಯಾಯಾಧೀಶರು ಏಪ್ರಿಲ್ 25 ರಂದು ನೀಡಿರುವ ಆದೇಶದಲ್ಲಿ ಹೇಳಿದರು.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ ಪ್ರತಾಪ್ ಸಿಂಗ್ ಅವರು ಅರ್ಜಿಯನ್ನು ವಿರೋಧಿಸಿ, ಆರೋಪಿ ಮೊದಲು ಜೈಲು ಅಧಿಕಾರಿಗಳ ಮುಂದೆ ಮನವಿ ಸಲ್ಲಿಸಬೇಕಾಗಿತ್ತು ಮತ್ತು ಅವರು ಅನುಮತಿ ನೀಡದಿದ್ದರೆ ಮಾತ್ರ ನ್ಯಾಯಾಲಯದ ಮೊರೆ ಹೋಗಬೇಕಿತ್ತು ಎಂದು ಹೇಳಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದ ಸುಕೇಶ್ ಚಂದ್ರಶೇಖರ್, ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಅವರು ಅದನ್ನು ಸ್ವೀಕರಿಸಲಿಲ್ಲ. ಆದ್ದರಿಂದ ನಾನು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ನಿನ್ನ ಹೃದಯ ನೀಡಿದ್ದಕ್ಕೆ ಧನ್ಯವಾದಗಳು: ಜಾಕ್ವೆಲಿನ್‌ಗೆ ಬರೆದ ಪತ್ರದಲ್ಲಿ ವಂಚಕ ಸುಕೇಶ್ ಚಂದ್ರಶೇಖರ್
ಸುಕೇಶ್ ತನ್ನ ತಮ್ಮ ಅರ್ಜಿಯಲ್ಲಿ, 'ಕುಟುಂಬ ಸಭೆ' ಸಮಯದಲ್ಲಿ ನಿಯಮಿತವಾಗಿ ಪತ್ನಿಯನ್ನು ಭೇಟಿಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿಂದೆತೆ ಅನೇಕ ಉನ್ನತ ವ್ಯಕ್ತಿಗಳನ್ನು ವಂಚಿಸಿದ ಆರೋಪ ಚಂದ್ರಶೇಖರ್ ಮೇಲಿದೆ.
ಸುಕೇಶ್ ಚಂದ್ರಶೇಖರ್ ಮತ್ತು ಆತನ ಸಹಚರರು ಸರ್ಕಾರಿ ಅಧಿಕಾರಿಗಳಂತೆ ನಟಿಸಿ ಅದಿತಿಯಿಂದ ಹಣ ಪಡೆದಿದ್ದಾರೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಅವರ ಪತಿಗೆ ಜಾಮೀನು ನೀಡುವುದಾಗಿ ಭರವಸೆ ನೀಡಿದ್ದಾರೆ.