ಅಂಕಲ್ ಅತ್ಯಾಚಾರ ಎಸಗಿದಾಗ ನನ್ನ ಖಾಸಗಿ ಅಂಗಗಳು ಊದಿಕೊಂಡಿದ್ದವು; ಎಫ್‌ಐಆರ್‌ನಲ್ಲಿ ದೆಹಲಿ ಸಂತ್ರಸ್ತೆ

ಈಗ ಅಮಾನತುಗೊಂಡಿರುವ ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯಿಂದ ಬಾಲಕಿ ಮೇಲೆ ಕನಿಷ್ಠ ನಾಲ್ಕು ಬಾರಿ ಅತ್ಯಾಚಾರವೆಸಗಲಾಗಿದೆ ಮತ್ತು ಆಕೆಯ ಖಾಸಗಿ ಅಂಗಗಳು ಊದಿಕೊಂಡಿದ್ದವು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ಈಗ ಅಮಾನತುಗೊಂಡಿರುವ ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯಿಂದ ಬಾಲಕಿ ಮೇಲೆ ಕನಿಷ್ಠ ನಾಲ್ಕು ಬಾರಿ ಅತ್ಯಾಚಾರವೆಸಗಲಾಗಿದೆ ಮತ್ತು ಆಕೆಯ ಖಾಸಗಿ ಅಂಗಗಳು ಊದಿಕೊಂಡಿದ್ದವು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಸದ್ಯ ನ್ಯಾಯಾಂಗ ಬಂಧನದಲ್ಲಿರುವ 51 ವರ್ಷದ ಪ್ರೇಮೋದಯ್ ಖಾಖಾ ಮತ್ತು ಅವರ ಪತ್ನಿ ಸೀಮಾ ರಾಣಿ ವಿರುದ್ಧ ದೆಹಲಿ ಪೊಲೀಸರು ಆಗಸ್ಟ್ 13ರಂದು ಎಫ್ಐಆರ್ ದಾಖಲಿಸಿದ್ದಾರೆ. ಖಾಖಾ ಅವರು ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿದ್ದರು.

ಎಫ್‌ಐಆರ್ ಪ್ರಕಾರ, 2020ರಲ್ಲಿ 14 ವರ್ಷ ವಯಸ್ಸಿನ ಬಾಲಕಿ ತನ್ನ ತಂದೆಯ ಮರಣದ ನಂತರ ತನ್ನ ಕುಟುಂಬದ ಆಪ್ತ ಸ್ನೇಹಿತ ಖಾಖಾ ಜೊತೆ ಇರಲು ಹೋಗಿದ್ದಳು.

'ಈ ವೇಳೆ ನವೆಂಬರ್ 2020 ರಿಂದ ಜನವರಿ 2021ರವರೆಗೆ ಪ್ರೇಮೋದಯ್ ಖಾಖಾ ನನ್ನ ಮೇಲೆ 4-5 ಬಾರಿ ಅತ್ಯಾಚಾರವೆಸಗಿದ್ದಾರೆ. ಅವರು ನನ್ನ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದರು. ನಾನು ಅದನ್ನು ದ್ವೇಷಿಸುತ್ತಿದ್ದೆ' ಎಂದು ಬಾಲಕಿ ತಿಳಿಸಿರುವುದಾಗಿ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಖಾಖಾ ಮೊದಲ ಬಾರಿಗೆ ತನ್ನ ಮೇಲೆ ಅತ್ಯಾಚಾರವೆಸಗಿದಾಗ, ತನ್ನ ಖಾಸಗಿ ಅಂಗಗಳು ಊದಿಕೊಂಡಿದ್ದವು. ನಾನು ಅದರ ಬಗ್ಗೆ ಸೀಮಾ ಆಂಟಿಗೆ ತಿಳಿಸಿದ್ದೆ. ಆದರೆ, ಅವರು ನಾನೇ ಸರಿಯಿಲ್ಲ ಅಥವಾ ನಾನೇ ಅವರ ಪತಿಗೆ ಸನ್ನೆ ಮಾಡಿರುವುದಾಗಿ ರೇಗಿದ್ದರು' ಎಂದು ಅವರ ದೂರಿನಲ್ಲಿ ಹೇಳಲಾಗಿದೆ.

ನಾನು ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ವಿಫಲವಾದಾಗಲೆಲ್ಲಾ ಸೀಮಾ ಆಂಟಿ ದೊಣ್ಣೆಗಳಿಂದ ನನಗೆ ಒಡೆಯುತ್ತಿದ್ದಳು. '2021ರ ಜನವರಿಯಲ್ಲಿ ಕೊನೆಯ ಬಾರಿಗೆ ಅವರು ನನ್ನ ಮೇಲೆ ಅತ್ಯಾಚಾರ ಎಸಗಿದ ನಂತರ, ನಾನು ಗರ್ಭಿಣಿಯಾದೆ. ನನಗೆ ಪಿರಿಯಡ್ಸ್ ಮಿಸ್ ಆದಾಗ ಸೀಮಾ ಆಂಟಿಗೆ ಹೇಳಿದ್ದೆ. ಇದು ಮೊದಲ ತಿಂಗಳಾಗಿದ್ದರಿಂದ ಮಗುವನ್ನು ಗರ್ಭಪಾತ ಮಾಡಬಹುದು ಎಂದು ಅವರು ಉತ್ತರಿಸಿದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಎಫ್‌ಐಆರ್‌ನ ಪ್ರಕಾರ, ಸಂತ್ರಸ್ತೆಯು ಈ ವಿಚಾರವನ್ನು ಖಾಖಾ ಅವರ ಪುತ್ರ ಮತ್ತು ಪುತ್ರಿಗೂ ತಿಳಿಸಿದರು. ಆದರೆ, ಅವರು ಕೂಡ ಆಕೆಯನ್ನು ನಂಬಲು ನಿರಾಕರಿಸಿದರು.

ಫೆಬ್ರುವರಿಯಲ್ಲಿ, ಬಾಲಕಿ ತನ್ನ ತಾಯಿಯೊಂದಿಗೆ ತನ್ನ ಮನೆಗೆ ಹಿಂದಿರುಗಿದಳು. 'ನಾನು ಚರ್ಚ್‌ಗೆ ಭೇಟಿ ನೀಡಿದಾಗಲೆಲ್ಲಾ ಅವನು (ಆರೋಪಿ) ನನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು. ಹೀಗಾಗಿ, ಜುಲೈ 2021ರ ನಂತರ, ನಾನು ಚರ್ಚ್‌ಗೆ ಹೋಗುವುದನ್ನೇ ಬಿಟ್ಟೆ' ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com